News Kannada
Wednesday, October 05 2022

ಕರಾವಳಿ

ಧರ್ಮಸ್ಥಳದಲ್ಲಿ ಲಲಿತೋದ್ಯಾನೋತ್ಸವದ ಮೆರಗು - 1 min read

Photo Credit :

ಧರ್ಮಸ್ಥಳದಲ್ಲಿ ಲಲಿತೋದ್ಯಾನೋತ್ಸವದ ಮೆರಗು

ಅಲ್ಲಿಗೆ ಜನಸಾಗರವೇ ಹರಿದುಬಂದಿತ್ತು. ಭಕ್ತರು ಭಕ್ತಿ- ಭಾವದಿಂದ ಕೈ ಮುಗಿದು ದೇವರಲ್ಲಿ ಮೊರೆ ಹೋಗಿದ್ದರು. ವಿದ್ಯುತ್ ದೀಪ, ಹೂ ಅಲಂಕಾರವೂಜನರ ಮನ ಆಕರ್ಷಿಸುತ್ತಿತ್ತು.

ಶ್ರೀ ಕ್ಷೇತ್ರ ಧರ್ಮಸ್ಥಳ ದಿವ್ಯ ಸಾನಿಧ್ಯದಲ್ಲಿ ಭಾನುವಾರ ನಡೆದ ಲಕ್ಷದೀಪೋತ್ಸವದ ಮೂರನೇ ದಿನದ ಲಲಿತೋದ್ಯಾನ ಉತ್ಸವದಲ್ಲಿ ಕಂಡುಬಂದ ದೃಶ್ಯವಿದು.

ಐದು ದಿನಗಳ ಕಾಲ ನಡೆಯುವ ಲಕ್ಷದೀಪೋತ್ಸವದಲ್ಲಿ ಲಲಿತೋದ್ಯಾನ ಉತ್ಸವ ಮೂರನೇ ದಿನದ ಪೂಜಾ ವಿಧಿ-ವಿಧಾನವಾಗಿದ್ದು, ಭಕ್ತರಮನವನ್ನುಆಕರ್ಷಿಸಿತು.ದೇವರ ಮೂರ್ತಿಯನ್ನು ವಾದ್ಯ ಮೇಳದೊಂದಿಗೆ ಮಂಜುನಾಥನ ಗುಡಿಯ ಒಳಗೆ ಸುಮಾರು 16 ಸುತ್ತು ಪ್ರದಕ್ಷಿಣೆ ಹಾಕಿ, ಆ ಬಳಿಕ ಹೂವು, ದೀಪದಿಂದ ಅಲಂಕಾರಗೊಂಡ ಸ್ವರ್ಣ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ ಮುಂಭಾಗದಲ್ಲಿರುವ ಉದ್ಯಾನವನಕ್ಕೆ ಹೊತ್ತೊಯ್ಯಲಾಯಿತು.

ಮಧುಮಗಳಂತೆ ಕಂಗೊಳಿಸುವ ಲಕ್ಷ್ಮಿ ಹಾಗೂ ಲತಾ ಹೆಸರಿನಎರಡು ಆನೆಗಳು ಉತ್ಸವದ ಮೆರವಣಿಗೆಯಲ್ಲಿ ಮೊದಲು ಹೆಜ್ಜೆ ಹಾಕಿದವು.ಗಿರೀಶ ಹೆಸರಿನ ಬಸವ ಇದಕ್ಕೆ ಸಾಥ್ ನೀಡಿತು. ಪಲ್ಲಕ್ಕಿಯಎರಡೂ ಕಡೆಗಳಲ್ಲೂ ಪಂಜುಗಳನ್ನು ಹಿಡಿದು, ವಾಲಗ, ಓಲಗ, ಚಂಡೆ, ಶಂಖ, ಪತಾಕೆ, ವಿವಿಧ ವಾದ್ಯಗಳ ಜೊತೆಗೆ ಮೆರವಣಿಗೆ ಸಾಗಿತು.

ಮಂಜುನಾಥನನ್ನು ಹಲವಾರು ದೀಪಗಳಿಂದ ಅಲಂಕೃತಗೊಂಡ ಉದ್ಯಾನವನದಲ್ಲಿ ಕೂರಿಸಿ, ಅರ್ಚಕರು ವಿಶೇಷ ಪೂಜೆಗಳನ್ನು ಸಲ್ಲಿಸಿದರು. ದೇವರಿಗೆ ಅಷ್ಟಾವಧಾನ ಸೇವೆ, ನೈವೇದ್ಯದ ಕಾರ್ಯ ಪೂರ್ಣಗೊಂಡ ನಂತರ ಮಹಾಮಂಗಳಾರತಿ ಮಾಡಿ ಭಕ್ತರಿಗೆ ನೀಡಿದರು.ಲಲಿತೋದ್ಯಾನದಿಂದ ಸ್ವಾಮಿಯನ್ನು ಮುಡಿಯ ಮೇಲೆ ಹೊತ್ತು ದೇವಸ್ಥಾನದ ಎದುರು ತಂದು ಬೆಳ್ಳಿ ರಥದಲ್ಲಿ ಕೂರಿಸಿ, ದೇವಾಲಯದ ಸುತ್ತಲೂ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯಲ್ಲಿ, ನಾನಾ ಕಡೆಯಿಂದ ಆಗಮಿಸಿದ ಭಕ್ತರು ಬೆಳ್ಳಿ ರಥವನ್ನು ಎಳೆಯುವುದರ ಮೂಲಕ ದೇವರಲ್ಲಿ ಮೊರೆ ಹೋದರು. ಕೊನೆಯಲ್ಲಿ ದೇವರಿಗೆ ಆರತಿ ಬೆಳಗಿ ಮೂರ್ತಿಯನ್ನು ಸನ್ನಿಧಿಯೊಳಗೆ ಕೊಂಡಯ್ಯಲಾಯಿತು.

ಸುಮಾರು ಐದಾರು ವರ್ಷಗಳಿಂದ ಲಕ್ಷದೀಪೋತ್ಸವಕ್ಕಾಗಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆಯುತ್ತಿದ್ದೇವೆ. ಕುಟುಂಬದ ನೆಮ್ಮದಿ, ಮನಶಾಂತಿಗೋಸ್ಕರ ದೇವರಿಗೆ ಪೂಜೆ ಸಲ್ಲಿಸುತ್ತೇವೆ ಎಂದುಮೂಡಿಗೆರೆ ಮೂಲದವರಾದ ಮಹಾಲಕ್ಷ್ಮಿಅಭಿಪ್ರಾಯಪಟ್ಟರು.

ವರದಿ:ಸಂಧ್ಯಾಎ.ಟಿ

ಚಿತ್ರ; ಶಿವಪ್ರಸಾದ್ ಹಳುವಳ್ಳಿ

See also  ಸಚಿವ ರಮಾನಾಥ ರೈಗೆ ಸೋಲುಣಿಸಿದ ರಾಜೇಶ್ ನಾಯ್ಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು