ಮಂಗಳೂರು: ಕರಾವಳಿಯ ಜನಪದ ಕ್ರೀಡೆಯಾಗಿರುವಂತಹ ಕಂಬಳಕ್ಕೆ ಮತ್ತೊಮ್ಮೆ ಅಡ್ಡಿ ಉಂಟಾಗುವಂತಹ ಸಾಧ್ಯತೆಗಳು ಎದ್ದು ಕಾಣುತ್ತಿದೆ.
ಕಂಬಳ ಋತು ಆರಂಭವಾಗುತ್ತಿರುವಂತೆ ಪ್ರಾಣಿ ದಯಾ ಸಂಘಟನೆ(ಪೆಟಾ) ಕಂಬಳ ನಿಷೇಧಿಸಬೇಕೆಂದು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ವಾದಿಸುತ್ತಿರುವ ಪೆಟಾ 2104ರಲ್ಲಿ ಕೆಲವು ವರ್ಷಗಳ ತಡೆ ತಂದಿತ್ತು. ಆದರೆ ಇದರ ಬಳಿಕ ಕಂಬಳ ಸಮಿತಿ, ಆಯೋಜಕರು, ಕೋಣಗಳ ಯಜಮಾನವರು ಇದರ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಹೋರಾಟ ಮಾಡಿ ಕೆಲವು ನಿಯಮಗಳಂತೆ ಕಂಬಳ ನಡೆಸಲು ಅನುಮತಿ ನೀಡಲಾಗಿತ್ತು.
ಆದರೆ ಕಂಬಳಗಳಿಗೆ ಕಳೆದ ಋತುವಿನಲ್ಲಿ ಹಿಂಸೆ ನೀಡಲಾಗಿದೆ ಎಂದು ಪೆಟಾ ಆರೋಪಿಸಿದೆ. ಕೂಳೂರು, ವಾಮಂಜೂರು ತಿರುವೈಲುಗುತ್ತು, ಮೂಡುಬಿದಿರೆ, ಬಾರಾಡಿಬೀಡಿನಲ್ಲಿ ಸುಪ್ರೀಂಕೋರ್ಟ್ ನ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಪೆಟಾ ವಾದಿಸಿದೆ.