News Kannada
Sunday, October 02 2022

ಕರಾವಳಿ

ಆಧುನಿಕ ಗುಲಾಮಗಿರಿಯನ್ನು ಕೊನೆಗೊಳಿಸುವುದೇ ಗುರಿ: ಹೆರಾಲ್ಡ್ ಡಿಸೋಜಾ - 1 min read

Photo Credit :

ಆಧುನಿಕ ಗುಲಾಮಗಿರಿಯನ್ನು ಕೊನೆಗೊಳಿಸುವುದೇ ಗುರಿ: ಹೆರಾಲ್ಡ್ ಡಿಸೋಜಾ

ಮಂಗಳೂರು: ಮಾನವ ಕಳ್ಳಸಾಗಣೆ ಜನರನ್ನು ಗುಲಾಮರನ್ನಾಗಿ ಮಾಡುವ ಪ್ರಕ್ರಿಯೆ, ಯಾವುದೇ ದಾರಿ ಇಲ್ಲದ ಪರಿಸ್ಥಿತಿಗೆ ಅವರನ್ನು ಒತ್ತಾಯಿಸುವುದು ಮತ್ತು ಅವರನ್ನು ಶೋಷಿಸುವುದು. ಬಲವಂತದ ವೇಶ್ಯಾವಾಟಿಕೆ, ಬಲವಂತದ ದುಡಿಮೆ, ಬಲವಂತದ ಭಿಕ್ಷಾಟನೆ, ಬಲವಂತದ ಅಪರಾಧ, ದೇಶೀಯ ದಾಸ್ಯ, ಬಲವಂತದ ಮದುವೆ ಮತ್ತು ಬಲವಂತದ ಅಂಗಾಂಗ ತೆಗೆಯುವಿಕೆ ಮುಂತಾದ ವಿವಿಧ ರೀತಿಯ ಶೋಷಣೆಗಳಿಗೆ ಜನರನ್ನು ಕಳ್ಳಸಾಗಣೆ ಮಾಡಬಹುದು.

ಈ ಆಧುನಿಕ ದಿನದ ಗುಲಾಮಗಿರಿಯ ವಿರುದ್ಧ ಹೋರಾಡಲು ಮತ್ತು ಭಾರತೀಯರನ್ನು ಮಾನವ ಕಳ್ಳಸಾಗಣೆಗೆ ಬಲಿಯಾಗದಂತೆ ಉಳಿಸಲು, ಹೆರಾಲ್ಡ್ ಡಿಸೋಜಾ(ಹ್ಯೂಮನ್ ಟ್ರಾಪಿಕ್ಕಿಂಗ್ ಕುರಿತ ಯುನೈಟಡ್ ಸ್ಟೇಟ್ಸ್ ಸಲಹಾ ಮಂಡಳಿಗೆ ಪ್ರೆಸಿಡೆಂಟ್ ಟ್ರಂಪ್  ಇವರಿಂದ ನೇಮಕವಾದ ಮಂಡಳಿಯ ಸದಸ್ಯ) ಅವರ ಇತ್ತೀಚಿನ ಭಾರತ ಭೇಟಿ ಅತ್ಯಂತ ಶ್ಲಾಘನೀಯ. ತಮ್ಮ ಭೇಟಿಯಲ್ಲಿ ಅವರು ಮುಂಬೈ, ವಡೋದರಾ, ಖಂಭಾತ್, ನಾಡಿಯಾಡ್, ಅಹಮದಾಬಾದ್, ನವದೆಹಲಿ, ಮಂಗಳೂರು, ಚೆನ್ನೈ, ಕಲ್ಕತ್ತಾ ಮತ್ತು ಮಂಗಳೂರಿನಲ್ಲಿ ಹಲವಾರು ಶಾಲೆಗಳು, ವಿಶ್ವವಿದ್ಯಾಲಯಗಳು, ಚರ್ಚುಗಳು, ಸರ್ಕಾರಿ ಸಂಸ್ಥೆಗಳು, ಎನ್‍ಜಿಒಗಳು, ವೈಎಂಸಿಎ ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನವೆಂಬರ್ 27, 2019ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇತ್ತೀಚಿನ ಪ್ರಸ್ತುತಿಯಾಗಿದೆ.

ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರು 2015ರಲ್ಲಿ ಮಾನವ ಕಳ್ಳಸಾಗಣೆ ಕುರಿತ ಅಮೆರಿಕಾ ಸಲಹಾ ಮಂಡಳಿಯಲ್ಲಿ ಹೆರಾಲ್ಡ್ ಡಿಸೋಜಾ ಅವರ ನೇಮಕ ಮಾಡಿದ್ದರು ಮತ್ತು ಇದೀಗ ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ. ಅವರು ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುವ ರಾಜ್ಯ ಇಲಾಖೆ ಕಚೇರಿಯ ಪರಿಣಿತ ಸಲಹೆಗಾರ ಹಾಗೂ ಮೇಲ್ವಿಚಾರಕರಾಗಿದ್ದಾರೆ. ಜೊತೆಗೆ ಮಾಹಿತಿಯ ಮೂಲಕ ತಡೆಗಟ್ಟುವ ಬದುಕುಳಿದವರನ್ನು ರಕ್ಷಿಸುವ ಲಾಭರಹಿತ ಸಂಸ್ಥೆಯಾದ ಐಸ್ ಓಪನ್ ಇಂಟರ್‍ನ್ಯಾಷನಲ್‍ನ ಸಹ-ಸಂಸ್ಥಾಪಕರಾಗಿದ್ದಾರೆ. ಅವರು ನ್ಯಾಷನಲ್ ಸರ್ವೈವರ್ ನೆಟ್ವರ್ಕ್ ಮತ್ತು ಸಿಎಎಸ್‍ಟಿ (ಗುಲಾಮಗಿರಿ ಮತ್ತು ಕಳ್ಳಸಾಗಣೆಯನ್ನು ನಿರ್ಮೂಲನೆ ಮಾಡುವ ಒಕ್ಕೂಟ)ದ ಸ್ಥಾಪಕ ಸದಸ್ಯರಾಗಿದ್ದಾರೆ. ಸ್ಥಳೀಯ ಮಾನವ ಕಳ್ಳಸಾಗಣೆ ವಿರೋಧಿ ಸಂಸ್ಥೆಗಳಲ್ಲಿ ಬಹಳ ಸಕ್ರಿಯರಾಗಿದ್ದಾರೆ.

ಹೆರಾಲ್ಡ್ ಕಳ್ಳಸಾಗಣೆ ಸಂತ್ರಸ್ತರಿಗೆ ಧೈರ್ಯ, ಭರವಸೆ ಮತ್ತು ಸ್ವಾತಂತ್ರ್ಯಕ್ಕಾಗಿ ಶ್ರಮಿಸುತ್ತಾರೆ. ಅಮೆರಿಕಾ, ಭಾರತ, ಆಫ್ರಿಕಾ, ಯುರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಪ್ರವಚನ ನೀಡಲು ಅವರನ್ನು ಆಹ್ವಾನಿಸಲಾಗುತ್ತದೆ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯ, ಕಳ್ಳಸಾಗಣೆಗೆ ಗುರಿಯಾಗುವ ದುರ್ಬಲ ಜನಸಂಖ್ಯೆಯನ್ನು ಗುರುತಿಸುವ ಮತ್ತು ರಕ್ಷಿಸುವ ಮಹತ್ವದ ಕುರಿತು ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರು ಇತ್ತೀಚೆಗೆ ಹ್ಯೂಮನ್ ಟ್ರಾಫಿಕಿಂಗ್: ಎ ಫ್ರಾಗ್ ಇನ್ ಎ ವೆಲ್ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ ಮತ್ತು ಪ್ರಸ್ತುತ ತಮ್ಮ ಆತ್ಮಚರಿತ್ರೆ ಬರೆಯುವ ಕೆಲಸದಲ್ಲಿ ತೊಡಗಿದ್ದಾರೆ.

ಹೆರಾಲ್ಡ್ ಡಿಸೋಜ (ಹ್ಯೂಮನ್ ಟ್ರಾಪಿಕ್ಕಿಂಗ್ ಕುರಿತ ಯುನೈಟಡ್ ಸ್ಟೇಟ್ಸ್ ಸಲಹಾ ಮಂಡಳಿಗೆ ಪ್ರೆಸಿಡೆಂಟ್ ಟ್ರಂಪ್  ಇವರಿಂದ ನೇಮಕವಾದ ಮಂಡಳಿಯ ಸದಸ್ಯ) ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

See also  ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಅಭಿನಂದನಾ ಸಮಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು