News Kannada
Wednesday, October 05 2022

ಕರಾವಳಿ

ಕಡಂದಲೆ ಷಷ್ಠಿ ಉತ್ಸವದಲ್ಲಿ ಪಂಕ್ತಿ-ಬೇಧ: ಇಲಾಖಾಧಿಕಾರಿಗಳು ಭೇಟಿ - 1 min read

Photo Credit :

ಕಡಂದಲೆ ಷಷ್ಠಿ ಉತ್ಸವದಲ್ಲಿ ಪಂಕ್ತಿ-ಬೇಧ: ಇಲಾಖಾಧಿಕಾರಿಗಳು ಭೇಟಿ

ಮೂಡುಬಿದಿರೆ: ಇಲ್ಲಿನ ಇತಿಹಾಸ ಪ್ರಸಿದ್ಧ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಚಂಪಾ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆಯನ್ನು ಕಲ್ಪಿಸಿ ತಾರತಮ್ಯವೆಸಗಿದಲ್ಲದೆ ದಲಿತ ಮಹಿಳಾ ಪೊಲೀಸ್ ಸಿಬಂಧಿಯೋರ್ವರಿಗೆ ಅವಮಾನವಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಗುರುವಾರ ಮುಜರಾಯಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರಕಾರದ ಅಧೀನದಲ್ಲಿರುವ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳ ಖರ್ಚುವೆಚ್ಚವನ್ನು ಸರಕಾರವೇ ಭರಿಸುವುದು. ಇಲ್ಲಿ ಗ್ರಾಮದ ವಿವಿಧ ಜಾತಿಯ 8 ಜನರನ್ನೊಳಗೊಂಡ ವ್ಯವಸ್ಥಾಪನ ಸಮಿತಿಯೂ ಇದೆ. ಆದರೆ ಊಟದ ವ್ಯವಸ್ಥೆಯಲ್ಲಿ ಮಾತ್ರ ಬ್ರಾಹ್ಮಣ ವರ್ಗಕ್ಕೆ ಮಾತ್ರ ಬೇರೆಯೇ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ಆರೋಪಗಳು ಕೇಳಿ ಬಂದಿತ್ತಲ್ಲದೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಸುದ್ದಿಗಳು ಬಿತ್ತರಗೊಂಡಿದ್ದವು.

 

See also  ಯುವಜನರ ರೋಲ್ ಮಾಡೆಲ್ ಹರೀಶ್ ಪೂಂಜರ ಬಗ್ಗೆ ಒಂದಿಷ್ಟು...
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು