News Kannada
Saturday, November 26 2022

ಕರಾವಳಿ

ವೈನ್ ಶಾಪ್, ಬಾರ್ ಗೆ ದೇವರ ನಾಮಫಲಕವಿದ್ದರೆ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ - 1 min read

Photo Credit :

ವೈನ್ ಶಾಪ್, ಬಾರ್ ಗೆ ದೇವರ ನಾಮಫಲಕವಿದ್ದರೆ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಳ್ತಂಗಡಿ: ವೈನ್ ಶಾಪ್, ಬಾರ್ ಇತ್ಯಾದಿಗಳಿಗೆ ದೇವರ ಹೆಸರಿನ ನಾಮಫಲಕಗಳಿದ್ದರೆ ಅಂತಹವುಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದ್ದಾರೆ.

ಅಳದಂಗಡಿಯ ಸುಂಕದಕಟ್ಟೆ ಶ್ರೀಮಹಾಗಣಪತಿ ದೇವಸ್ಥಾನಕ್ಕೆ ಆದಿತ್ಯವಾರ ನಡೆದ ಪಾದುಕಾನ್ಯಾಸ ಸಹಿತ ಷಡಾಧಾರ ನಿಧಿಕುಂಭ ಪ್ರತಿಷ್ಠೆ ಸಂದರ್ಭ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಲು ನಿರ್ಧರಿಸಲಾಗಿದೆ. ದೇವಸ್ಥಾನಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾಗಬೇಕು ಎಂಬುದು ಸರಕಾರದ ಆಶಯವಾಗಿದೆ. ದೇವರ ಹೆಸರಿನಲ್ಲಿ ವೈನ್‍ಶಾಪ್‍ಗಳಲ್ಲಿ, ಬಾರ್‍ಗಳಲ್ಲಿ ನಾಮಫಲಕಗಳನ್ನಿಟ್ಟುಕೊಂಡಿದ್ದರೆ ಅದನ್ನು ಶೀಘ್ರ ತೆರವುಗೊಳಿಸಲು ಸರಕಾರ ಕಠಿಣ ಕ್ರಮಕೈಗೊಳ್ಳಲಿದೆ. ಪ್ರಜಾಪ್ರಭುತ್ವದಲ್ಲಿ ಚರ್ಚೆಯ ಮೂಲಕ ನಿರ್ಧಾರಕೈಗೊಳ್ಳಲು ಸಾಧ್ಯ. ಸಮತೋಲನದಲ್ಲಿ ಆಡಳಿತ ನಡೆಸಿದರೆ ಯಾರಿಗೂ ಅಂಜುವ ಅವಶ್ಯಕತೆ ಇರುವುದಿಲ್ಲ ಎಂದರು.

ಅತ್ಯಂತ ಪ್ರಶಾಂತವಾದ ಪರಿಸರದಲ್ಲಿ ಅಳದಂಗಡಿಯ ಮಹಾಗಣಪತಿ ದೇವಸ್ಥಾನವಿದೆ. ಇಲ್ಲಿ ಸುಂದರವಾದ ದೇಗುಲ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ. ಇದಕ್ಕೆ ಇನ್ನು ಹತ್ತೇ ದಿವಸಗಳಲ್ಲಿ ಇಲಾಖೆಯಿಂದ ಗರಿಷ್ಠ ಪ್ರಮಾಣದ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಅವರು. ಪಾಶ್ಚಾತ್ಯೀಕರಣದಿಂದಾಗಿ ನಮ್ಮ ಮನೆಯ ಸಂಸ್ಕøತಿ ಸಂಸ್ಕಾರಗಳು ಮೂಲೆಗುಂಪಾಗುತ್ತಿವೆ. ಇದರಿಂದ ಸಮಾಜದ ಸ್ಥಿತಿಯೂ ಅಪಾಯಕ್ಕೆ ತಲುಪಲಿದೆ. ಇದನ್ನು ತಡೆಯುವಲ್ಲಿ ದೇವಸ್ಥಾನಗಳೂ ಪ್ರಮುಖ ಪಾತ್ರ ವಹಿಸಬೇಕು. ಸಮಾಜವನ್ನುಳಿಸುವ ಕಾರ್ಯ ದೇಗುಲಗಳಿಂದಲೂ ಸಾಧ್ಯ ಎಂದರು.

ಶಾಸಕ ಹರೀಶ ಪೂಂಜ ಅವರು, ವೈಯಕ್ತಿಕವಾಗಿ ಇಲ್ಲಿನ ದೇಗುಲಕ್ಕೆ ದೇಣಿಗೆಯನ್ನು ನೀಡಿದ್ದೇನೆ. ಸನಿಹದ ನದಿಗೆ ತಡೆಗೋಡೆ ನಿರ್ಮಾಣಕ್ಕಾಗಿ ಸರಕಾರದಿಂದ ರೂ. 35 ಲಕ್ಷ ಬಿಡುಗಡೆ ಯಾಗಿದೆ. ಶಾಸಕರ ನಿಧಿಯಿಂದ ರೂ. 5 ಲಕ್ಷ ದೇಗುಲಕ್ಕೆ ನೀಡುತ್ತೇನೆ. ದೇಗುಲಕ್ಕೆ ಸರಕಾರದಿಂದ ಬೇಕು ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಲು ನಾನು ಸದಾ ಸಿದ್ಧ ಎಂದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯ ವಿನುಷಾ ಪ್ರಕಾಶ್, ದೇವಳದ ಪ್ರಧಾನ ಅರ್ಚಕ ಎ. ಸೋಮನಾಥ ಮಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಶಶಿಧರ ಡೋಂಗ್ರೆ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪಿ.ಕೆ. ಚಂದ್ರಶೇಖರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿದರು.

ಇದಕ್ಕೂ ಮೊದಲು ನಿಧಿಕುಂಭ ಪ್ರತಿಷ್ಠೆಯು ಪೊಳಲಿ ಶ್ರೀ ಅನಂತ ಪದ್ಮನಾಭ ಉಪಾಧ್ಯಾಯರ ನೇತೃತ್ವದಲ್ಲಿ ನೆರವೇರಿತು. ನೂರಾರು ಭಕ್ತ ಬಂಧುಗಳು ಕುಂಭಕ್ಕೆ ಚಿನ್ನ,ಬೆಳ್ಳಿ ನಾಣ್ಯಗಳನ್ನು ಅರ್ಪಿಸಿದರು.♫

See also  ಸಂಯೋಜಿತ ಯೋಜನೆಗಳಿಂದ ಆತ್ಮಹತ್ಯೆ ತಡೆ ಸಾಧ್ಯ: ಡಾ. ರಮೀಲಾ ಶೇಖರ್ 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು