News Kannada
Tuesday, December 06 2022

ಕರಾವಳಿ

ಹರೇಕಳ ಮೆಣಸಿಗೆ ವಿದ್ಯಾರ್ಥಿಗಳ ಸಾಥ್

Photo Credit :

ಹರೇಕಳ ಮೆಣಸಿಗೆ ವಿದ್ಯಾರ್ಥಿಗಳ ಸಾಥ್

ಮಂಗಳೂರು: ಖಾರ ಜಾಸ್ತಿ, ಅರೆದ ಮೇಲೆ ಮಸಾಲೆ ಕೂಡ ಜಾಸ್ತಿ. ಇದು ಈ ಮೆಣಸಿನ ಸ್ಪೆಷಾಲಿಟಿ. ಹಾಗಾಗಿ ಉಪ್ಪಿನಕಾಯಿ ತಯಾರಿಗೆ ಈ ಮೆಣಸಿಗೆ ಅತ್ಯಧಿಕ ಬೇಡಿಕೆ. 50 ವರ್ಷಗಳ ಹಿಂದೆ 200 ಎಕರೆ ಪ್ರದೇಶದಲ್ಲಿ ಬೆಳೆಸಲಾಗುತ್ತಿದ್ದ ಇಂತಹ ಮೆಣಸು, ಪ್ರಸ್ತುತ ಕೇವಲ ಎರಡು ಮೂರು ಎಕರೆ ಪ್ರದೇಶಕ್ಕೆ ಸೀಮಿತಗೊಂಡು ಬೆರಳೆಣಿಕೆಯ ರೈತರು ಈ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಮಂಗಳೂರು ತಾಲೂಕಿನ ಹರೇಕಳ ಎಂಬ ಪ್ರದೇಶದಲ್ಲಿ ಬೆಳೆಯಲಾಗುವ ಈ ಮೆಣಸು `ಹರೇಕಳ ಮೆಣಸು’ ಎಂದೇ ಖ್ಯಾತಿ. ತುಳುವಿನಲ್ಲಿ `ಪೆರಿಯಾಳ ಮುಂಚಿ’ ಫೇಮಸ್. ಇದೀಗ ಈ ಮೆಣಸನ್ನು ಬೆಳೆಯಲು ಮಂಗಳೂರು ರಥಬೀದಿಯ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.

ಮಂಗಳೂರು ರಥಬೀದಿ ಕಾಲೇಜಿನ ಹಸಿರು ಸೇನೆ ನೇತೃತ್ವದಲ್ಲಿ ಇತಿಹಾಸ ವಿಭಾಗ ಮುಖ್ಯಸ್ಥ ಡಾ. ನವೀನ್ ಎನ್.ಕೊಣಾಜೆ ಮತ್ತು ಹರೇಕಳದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ತ್ಯಾಗಂ ಹರೇಕಳ ಇವರ ನೇತೃತ್ವದಲ್ಲಿ ಸುಮಾರು 50 ರಷ್ಟು ವಿದ್ಯಾರ್ಥಿಗಳು ಹರೇಕಳದ ಕುತ್ತಿಮೊಗರು ಗದ್ದೆಯಲ್ಲಿ  ಕೃಷಿಕ ಶೇಖರ್ ಗಟ್ಟಿ ಅವರ ಕೃಷಿ ಕಾರ್ಯಕ್ಕೆ ಸಾಥ್ ನೀಡಿದರು. ಕಾರ್ಮಿಕರ ಬವಣೆ ಹಾಗೂ ಅವರ ಸಂಬಳ ಕೊಡಲು ಅಸಾಧ್ಯವಾದ ಸಂದರ್ಭದಲ್ಲಿ  ವಿದ್ಯಾರ್ಥಿಗಳು ಕೃಷಿಕ ಶೇಖರ್ ಅವರಿಗೆ ಸಹಕರಿಸಿದರು.

ಊರಲ್ಲಿದ್ದ ಅವಿಭಕ್ತ ಕುಟುಂಬ ವ್ಯವಸ್ಥೆ ದೂರವಾದಂತೆ ಕೃಷಿಭೂಮಿ ಹಂಚಿ ಹೋಯಿತು. ಶಿಕ್ಷಿತ ಯುವಕರು ದುಡಿಮೆಗಾಗಿ ನಗರ ಸೇರಿದರು. ಕೂಲಿಯಾಳುಗಳ ಸಮಸ್ಯೆ ಎದುರಾಯಿತು. ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ರಾಸಾಯನಿಕದ ಬಳಕೆ ಹೆಚ್ಚಾಯಿತು. ಗಿಡಗಳಿಗೆ ರೋಗಬಾಧೆ ಅಧಿಕವಾಗತೊಡಗಿತು. ಮನೆಯಲ್ಲಿ ಉಪ್ಪಿನಕಾಯಿ ಮಾಡುವವರ ಸಂಖ್ಯೆಯೂ ಕ್ಷೀಣಿಸಿತು. ಹೀಗಾಗಿ ಮೆಣಸಿನ ಬೇಡಿಕೆ ಇಳಿಮುಖವಾಗತೊಡಗಿತು. ಮೆಣಸಿನ ಬದಲು ಕಬ್ಬು, ಅಡಕೆ, ಭತ್ತ ಬೆಳೆದ ಪರಿಣಾಮ ಮೆಣಸು ಅಳಿವಿನಂಚಿಗೆ ತಲುಪುವಂತಾಯಿತು.

ಪಠ್ಯದಲ್ಲಿ ಉಲ್ಲೇಖವಿತ್ತು: ಹರೇಕಳ ಮೆಣಸು ಒಂದು ಕಾಲದಲ್ಲಿ ಎಷ್ಟು ಖ್ಯಾತವಾಗಿತ್ತು ಎಂದರೆ 80ರ ದಶಕದ ಮೂರನೇ ತರಗತಿ ಪಠ್ಯದಲ್ಲಿ ಹರೇಕಳ ಮೆಣಸಿನ ಬಗ್ಗೆ ಉಲ್ಲೇಖವಿತ್ತು ಎಂಬುದಾಗಿ ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪ್ರಾರಂಭವಾದ ಸಂದರ್ಭ ಹರೇಕಳ ಪ್ರದೇಶದ ಬಹುತೇಕ ಗದ್ದೆಗಳಲ್ಲಿ ಕಬ್ಬು ಬೆಳೆಯನ್ನು ಬೆಳೆಸಲಾದ ಕಾರಣ ಮೆಣಸು ಕೃಷಿಗೆ ಹೊಡೆತ ಬಿದ್ದಿರಬಹುದು ಎನ್ನುತ್ತಾರೆ ಅವರು. 

See also  ಗೋಕರ್ಣದಲ್ಲಿ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋದ ಯುವಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

184

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು