News Kannada
Friday, December 02 2022

ಕರಾವಳಿ

ಆವರ್ತಕೋಷ್ಟಕದ ಕುರಿತಾದ ಆಸಕ್ತಿಯಿಂದ ವಿಚಾರ ವಿನಿಮಯ ಸಾಧ್ಯ: ಪ್ರೊ. ಬಿ.ಎಸ್. ಶೇರಿಗಾರ

Photo Credit :

ಆವರ್ತಕೋಷ್ಟಕದ ಕುರಿತಾದ ಆಸಕ್ತಿಯಿಂದ ವಿಚಾರ ವಿನಿಮಯ ಸಾಧ್ಯ: ಪ್ರೊ. ಬಿ.ಎಸ್. ಶೇರಿಗಾರ

ಉಜಿರೆ: ಆವರ್ತಕೋಷ್ಟಕ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಒಂದು ಉತ್ತಮ ಮಾರ್ಗದರ್ಶಿ ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ಮಾಜಿ ಕುಲಪತಿಗಳಾದ ಪ್ರೊ. ಬಿ.ಎಸ್. ಶೇರಿಗಾರ ನುಡಿದರು.

ಅಂತರಾಷ್ಟ್ರೀಯ ಆವರ್ತಕೋಷ್ಟಕ ವರ್ಷದ ಹಿನ್ನೆಲೆಯಲ್ಲಿ  ಆವರ್ತಕೋಷ್ಟಕದ ಜನಕರಾದ ಮೆಂಡಲೀವ್‍ಗೆ ಗೌರವ ಸಮರ್ಪಿಸುವ ಅಂಗವಾಗಿ ಆವರ್ತಕೋಷ್ಟಕದ ವಿಶಿಷ್ಟ ವಿನ್ಯಾಸದ ಕುರಿತು ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಸಮ್ಯಗ್ದರ್ಶನ ಸಭಾ ಭವನದಲ್ಲಿ ರಸಾಯನ ಶಾಸ್ತ್ರ ವಿಭಾಗವು ಅಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆವರ್ತಕೋಷ್ಟಕದಲ್ಲಿರುವ 118 ರಾಸಾಯನಿಕಗಳೂ ವಿಶ್ವದಾದ್ಯಂತ ಹರಡಿದ್ದು, ರಾಸಾಯನಿಕಗಳು ವಿಶ್ವದ ಒಂದು ಅಂಗವಾಗಿ ಪರಿವರ್ತನೆಗೊಂಡಿದೆ. ಆಧುನಿಕ ಜಗತ್ತಿನ ಬೆಳವಣಿಗೆಯಲ್ಲಿ ರಾಸಾಯನಿಕಗಳು ಪ್ರಮುಖ ಪಾತ್ರವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮಾನವನ ದೇಹರಚನೆಯಲ್ಲಿ ರಾಸಾಯನಿಕಗಳ ಪ್ರಮುಖ ಪಾತ್ರವಿದೆ, ಈ ರಾಸಾಯನಿಕ ಅಂಶವನ್ನು ಮಾನವ ವಿಶ್ವದಿಂದ ಎರವಲು ಪಡೆದಿದ್ದಾನೆ. ಇದು ಮಾನವ ಮತ್ತು ರಾಸಾಯನಿಕಗಳ ಸಂಬಂಧಕ್ಕೆ ಕೈಗನ್ನಡಿ ಹಿಡಿಯುವಂತಿದೆ ಎಂದರು.

ಆವರ್ತಕೋಷ್ಟದಲ್ಲಿರುವ 118 ರಾಸಾಯನಿಕಗಳಲ್ಲಿ 94 ರಾಸಾಯನಿಕಗಳು ಪ್ರಕೃತಿದತ್ತವಾಗಿದ್ದು, ಅದರಲ್ಲಿ 6 ರಾಸಾಯನಿಕಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ದೊರೆಯುವಂತಹ ಪರಿಸ್ಥಿತಿ ಸೃಷ್ಟಿಯಾಗಿ ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ರಾಸಾಯನಿಕಗಳನ್ನು ಮುಂದಿನ ಸಂತತಿಗೆ ಉಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಮೃತವನ್ನು ಹುಡುಕುವ ಪ್ರಯತ್ನದಲ್ಲಿ ರಸಸಿದ್ಧರು ಬಳಸಿದ ರಾಸಾಯನಿಕ ಪ್ರಯೋಗಗಳು ರಸಾಯನ ಶಾಸ್ತ್ರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ನುಡಿದರು.

ಆವರ್ತಕೋಷ್ಡಕದ ಪ್ರಾಮುಖ್ಯತೆಯನ್ನು ತಿಳಿಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ ಮತ್ತು ಇಂತಹ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ವಿಚಾರ ವಿನಿಮಯವಾಗುವುದರೊಂದಿಗೆ, ಪ್ರೇರಣಾತ್ಮಕವಾಗಿರುತ್ತದೆ ಎಂದು, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ, ಪ್ರೋ. ಸತೀಶ್ಚಂದ್ರ ಮಾತನಾಡಿದರು.

ಜಲ ಸಂರಕ್ಷಣೆಯ ಕುರಿತು ಅರಿವು ಮೂಡಿಸುವಂತಹ, ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಕರಪತ್ರವನ್ನು ಪ್ರೋ. ಸತೀಶ್ಚಂದ್ರ ಬಿಡುಗಡೆಗೊಳಿಸಿದರು. ರಾಸಾಯನಿಕಗಳ ಕುತೂಹಲಕಾರಿ ವಿಚಾರಗಳ ಜೊತೆಗೆ, ಸಾಮಾಜಿಕ ಕಳಕಳಿಯನ್ನು ಸಾರುವಂತಿತ್ತು ಈ ಕಾರ್ಯಕ್ರಮ.

ಕಾರ್ಯಕ್ರಮದಲ್ಲಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಶ್ವನಾಥ್ ಪಿ, ಪ್ರೊ. ಬಿ.ಎಸ್. ಹೊಳ್ಳ. ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾರ ಪ್ರೊ. ದಿನೇಶ್ ಚೌಟ ಮತ್ತು ರಸಾಯನ ಶಾಸ್ತ್ರದ ವಿಭಾಗದ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.

See also  ಬತ್ತಿಹೋದ ಕೃಷಿ ಭೂಮಿಗೆ ಮತ್ತೆ ಮರುಜೀವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು