News Kannada
Thursday, December 01 2022

ಕರಾವಳಿ

ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ

Photo Credit :

ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ

ಬೆಳ್ತಂಗಡಿ: ಸಮಾಜದಲ್ಲಿರುವ ಜಾತೀಯತೆ ಹಾಗೂ‌ ಮೇಲುಕೀಳುಗಳೆಂಬ ತಾರತಮ್ಯ ನಿವಾರಣೆಗೆ ತನ್ನ ಕಾವ್ಯಗಳ‌ ಮೂಲಕವೇ ವಿಶೇಷ ಕೊಡುಗೆ ನೀಡಿದ ರಾಷ್ಟ್ರಕವಿ‌ ಕುವೆಂಪುರವರು ನಿಜಾರ್ಥದಲ್ಲಿ ಸಮಾಜ ಸುಧಾರಕರು. ಅವರು ಓರ್ವ ಜ್ಞಾನಿ ಮಾತ್ರವಲ್ಲ ಯೋಗಿಯೂ ಹೌದು ಎಂದು ನಿಡ್ಲೆ ಸರಕಾರಿ ಪ್ರೌಢ ಶಾಲೆಯ‌ ಪ್ರಭಾರ ಮುಖ್ಯ ಶಿಕ್ಷಕ‌ ವಿನಾಯಕ ಜೋಷಿ ಹೇಳಿದರು.

ಅವರು ಡಿಸೆಂಬರ್ 29ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದಲ್ಲಿ‌ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಆಡಂಬರ ದುಂದುವೆಚ್ಚಗಳಿಲ್ಲದ ಸರಳ ವಿವಾಹ ನಡೆಸಲು ಸಮಾಜಕ್ಕೆ ಕರೆ ನೀಡಿದ ಕುವೆಂಪು, ವಿವಾಹ ಸರಳೀಕರಣಕ್ಕಾಗಿ ಮಾಂಗಲ್ಯ ಮಂತ್ರವೆಂಬ ಸಮಾಜ ಸುಧಾರಣಾ ಮಂತ್ರವನ್ನು ಪರಿಚಯಿಸಿದ್ದರು. ಅವರೆಂದೂ ನಾಸ್ತಿಕರಾಗಿರಲಿಲ್ಲ. ಪ್ರಕೃತಿಯಲ್ಲಿ ಭಗವಂತನನ್ನು ಕಂಡ ಕುವೆಂಪು ಪ್ರಕೃತಿಯನ್ನು ಆರಾಧಿಸುವ ಆಸ್ತಿಕರಾಗಿದ್ದರು ಎಂದು ಜೋಷಿ ವಿವರಿಸಿದರು.

ಬೆಳ್ತಂಗಡಿಯ ತಹಸೀಲ್ದಾರ್ ಗಣಪತಿ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಸರಳ‌ ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ, ನಗರ ಪಂಚಾಯತ್ ಸದಸ್ಯೆ ರಜನಿ ಕುಡ್ವ, ಮುಖ್ಯಾಧಿಕಾರಿ ಸುಧಾಕರ್ ಎಂ. ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಸುಭಾಶ್ ಜಾದವ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ತಾಲೂಕು ಪಂಚಾಯತಿನ ಜಯಾನಂದ ಸ್ವಾಗತಿಸಿದರು. ತಾಲೂಕು ಕಚೇರಿಯ ಶಂಕರ್ ವಂದಿಸಿದರು.

ಕಾರ್ಯಕ್ರಮದ ಮೊದಲಿಗೆ ಸ್ವರ್ಗಸ್ಥರಾದ ಪೇಜಾವರ ಶ್ರೀಗಳ ಆತ್ಮಕ್ಕೆ ಶಾಂತಿಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

See also  ಕಾರಿಗೆ ಡಿಕ್ಕಿ ಹೊಡೆದ ಲಾರಿ: ಓರ್ವ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು