News Kannada
Wednesday, November 30 2022

ಕರಾವಳಿ

ಪೇಜಾವರ ಶ್ರೀಗಳ ಕಳಕೊಂಡು ಬಡವರಾಗಿದ್ದೇವೆ: ವೀರೇಂದ್ರ ಹೆಗ್ಗಡೆ - 1 min read

Photo Credit :

ಪೇಜಾವರ ಶ್ರೀಗಳ ಕಳಕೊಂಡು ಬಡವರಾಗಿದ್ದೇವೆ: ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪರಂಧಾಮ ಸಂದರ್ಭದಲ್ಲಿ ನಾವು ಅವರನ್ನು ಕಳೆದುಕೊಂಡು ಬಡವಾಗಿದ್ದೇವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಸರ್ವಧರ್ಮಿಯರಿಗೂ ಗುರುಗಳಾಗಿ, ಆಚಾರ್ಯರಾಗಿ, ಮಾರ್ಗದರ್ಶಕರಾಗಿ, ಪ್ರೇರಕರಾಗಿ ಆತ್ಮೀಯರಾಗಿ ಅವರು ಸತತ ಮಾರ್ಗದರ್ಶನ ನೀಡಿದ್ದಾರೆ.ಪೂಜ್ಯರು ಭಾರತದಾದ್ಯಂತ “ವಿಶ್ವಸಂಚಾರಿ”ಯಾಗಿ ತಮ್ಮ ದೇಹವನ್ನು ಶ್ರೇಷ್ಠ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಅಂದರೆ, ಅವರ ಬದುಕಿನ ಸಂದೇಶವೇ “ಮಾನವ ದೇಹ ಅನ್ನುವುದು ಒಂದು ಯಂತ್ರ, ಉಪಕರಣ ಮತ್ತು ಇಹ-ಪರಗಳ ಸಾಧನೆಗೆಒಂದು ಮಾಧ್ಯಮ”. ಈ ದೇಹದ ಪೋಷಣೆಗಾಗಿ, ಸುಖಕ್ಕಾಗಿ, ಪ್ರತಿಯೊಬ್ಬ ವ್ಯಕ್ತಿಯೂತನ್ನಎಲ್ಲಾ ಸಮಯವನ್ನು, ಸಂಪತ್ತನ್ನು ಮತ್ತು ಸಹವಾಸವನ್ನುಉಪಯೋಗಿಸುತ್ತಾನೆ. ಅದಕ್ಕಾಗಿ ದೇಹಕ್ಕೆ ಸಾಕಷ್ಟು ವಿಶ್ರಾಂತಿಕೊಟ್ಟು, ದೀರ್ಘಾಯುಷಿಯಾಗುವ ಬಯಕೆ ವ್ಯಕ್ತಪಡಿಸುತ್ತಾನೆ.

ಆದರೆ, ಪೂಜ್ಯ ಪೇಜಾವರ ಶ್ರೀಗಳ ಸಂದೇಶವೆಂದರೆ, “ಬದುಕು ಅಮೂಲ್ಯವಾದದ್ದು, ಅದನು ಹಾಳು ಮಾಡಬೇಡಿರೊ ಹುಚ್ಚಪ್ಪಗಳಿರಾ” ಎನ್ನುತ್ತಾ ಆಯುಷ್ಯದ ಪ್ರತಿಯೊಂದು ಕ್ಷಣವನ್ನೂ ಸದುಪಯೋಗಪಡಿಸಿಕೊಂಡು ತಮ್ಮದೇಹವನ್ನು ಬಳಸಿದರು. ಅವರು ವಿಷ್ಣುವಿನಂತೆ “ದಶಾವತಾರ” ತಳೆದರು. ಮಠಾಧಿಪತಿಗಳಾಗಿ ಮಠದ ಕೈಂಕರ್ಯಗಳು, ಶ್ರೀ ಕೃಷ್ಣ ದೇವರ ಮತ್ತು ಮಠದಆರಾಧ್ಯ ದೇವರುಗಳ ಪೂಜೆ-ಪುನಸ್ಕಾರಗಳು, ಶಿಕ್ಷಣ ಕ್ಷೇತ್ರ, ವೈದ್ಯಕೀಯ ಹಾಗೂ ಸಾಮಾಜಿಕ ರಂಗಗಳಲ್ಲಿ ತಮ್ಮ ಸಮಯವನ್ನು ವಿನಿಯೋಗಿಸಿದರು.

ಶಿಷ್ಯರಿಗೆ ಧಾರ್ಮಿಕ ಪಾಠ-ಪ್ರವಚನಗಳನ್ನು ನೀಡುವುದರಲ್ಲಿ ಪೂಜ್ಯರಂತೆ ಯಾರೂ ಉದಾರಿಗಳಿಲ್ಲ. ನಿಷ್ಕಲ್ಮಶ ಹೃದಯದಿಂದ ಪೂರ್ತಿ ವಿದ್ಯಾದಾನ ಮಾಡಿದವರು ಇನ್ನೊಬ್ಬರಿಲ್ಲ. ಮಠದಲ್ಲಿ ಮಾತ್ರವಲ್ಲದೆ, ಬೆಂಗಳೂರಿನ ವಿದ್ಯಾಪೀಠದಲ್ಲಿಯೂ ಶಿಷ್ಯರಿಗೆ ಪಾಠ ಬೋಧಿಸುವುದರ ಜೊತೆಗೆ ವಾಹನದಲ್ಲಿ ಸಂಚಾರ ಸಮಯದಲ್ಲಿಯೂ ಅವರು ನಿರಂತರ ಪಾಠ-ಪ್ರವಚನ ನಡೆಸುತ್ತಿದ್ದರು.

ಅವರ ಆಪ್ತರು ಹೇಳುವಂತೆ ದೀರ್ಘ ವಾಹನ ಸಂಚಾರ ಸಮಯದಲ್ಲಿಅಥವಾ ಅಲ್ಪ ವಾಹನ ಸಂಚಾರ ಸಮಯದಲ್ಲಿ,“ಕೇವಲ ಕೆಲವು ನಿಮಿಷಗಳಷ್ಟು ನಿಮ್ಮೊಂದಿಗೆ ಮಾತನಾಡುತ್ತೇನೆ, ಉಳಿದ ಸಮಯ ಶಿಷ್ಯರಿಗೆ ಪಾಠ ಹೇಳಿ ಕೊಡುತ್ತೇನೆ. ಮಧ್ಯೆಯಾರೂ ನನ್ನ ಗಮನ ಸೆಳೆಯ ಬೇಡಿ”ಎನ್ನುತ್ತಿದ್ದರಂತೆ.

ಸಮಾಜದಕಟ್ಟಕಡೆಯ ವ್ಯಕ್ತಿಯ ಬಗ್ಯೆ, ಪತಿತೋದ್ಧಾರದ ಬಗ್ಯೆಅವರ ಕಾಳಜಿ ವಿಶ್ವಕ್ಕೆ ಮಾದರಿಯಾಗಿದೆ.

ರಾಮಜನ್ಮಭೂಮಿ ಬಗ್ಯೆ ಸುಪ್ರಿಂಕೋರ್ಟುತೀರ್ಪು ಪ್ರಕಟವಾದಾಗಅವರ ಅನೇಕ ವರ್ಷಗಳ ಪ್ರಾರ್ಥನೆ ಮತ್ತು ಆ ವಿಷಯದಲ್ಲಿಅವರು ನೀಡಿದ ಸಲಹೆ-ಸೂಚನೆಗಳು ಕಾರ್ಯಗತವಾದ ಬಗ್ಯೆಪೂಜ್ಯರು ಸಂತೋಷ ಪಟ್ಟರು.

ನಮ್ಮ ಧರ್ಮಸ್ಥಳ ಕ್ಷೇತ್ರದ ಚಟುವಟಿಕೆಗಳಲ್ಲಿ, ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ನಾವು ಅವರಿಂದ ಪ್ರೇರಣೆ ಪಡೆದಿದ್ದೇವೆ. ಧಾರವಾಡದ ಜನತಾ ಶಿಕ್ಷಣ ಸಮಿತಿಯಂತೆ ನಮ್ಮರಾಜ್ಯದ ಮತ್ತು ರಾಷ್ಟ್ರದ ಅನೇಕ ಸಮಸ್ಯಾತ್ಮಕ, ಸಂಘಟನಾತ್ಮಕ ಮತ್ತು ಆರ್ಥಿಕ ಸಂಕಷ್ಟಕ್ಕೊಳಗಾದ ಸಂಸ್ಥೆಗಳಿಗೆ ಪೂಜ್ಯರು ಮಾರ್ಗದರ್ಶನ ನೀಡಿಕಾಯಕಲ್ಪಕೊಟ್ಟು ಪುನರುಜ್ಜೀವನಗೊಳಿಸಿದ್ದಾರೆ.

ನನ್ನ ವೈಯಕ್ತಿಕ ಅಭಿಪ್ರಾಯದಂತೆ ಪೂಜ್ಯ ಶ್ರೀಗಳು ನನ್ನಜೊತೆ ಮತ್ತು ನಮ್ಮ ಜೊತೆ ಎಂದೂ ಇರುತ್ತಾರೆ.ಅವರ ಭೌತಿಕದೇಹ ನಮ್ಮ ಮುಂದೆ ಇರದಿದ್ದರೂ, ಅವರೊಂದಿಗೆ ಕಳೆದ ಪ್ರತಿ ಒಂದು ಕ್ಷಣವೂ ಅಮೂಲ್ಯವಾದದ್ದು ಮತ್ತು ಸ್ಮರಣೀಯವಾದದ್ದುಎಂದು ಪೂಜ್ಯರಿಗೆ ನನ್ನ ನುಡಿನಮನಗಳನ್ನು ಹಾಗೂ ನಮ್ಮಕುಟುಂಬದ ಪರವಾಗಿ ಭಕ್ತಿಪೂರ್ವಕ ಪ್ರಣಾಮಗಳೊಂದಿಗೆ ಗೌರವವನ್ನುಅರ್ಪಿಸುತ್ತೇನೆ.

See also  ಮಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು