News Kannada
Friday, December 09 2022

ಕರಾವಳಿ

ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಗಾಳಿ ಮಳೆ ಅಪಾರ ಹಾನಿ

Photo Credit :

ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಗಾಳಿ ಮಳೆ ಅಪಾರ ಹಾನಿ

ಬೆಳ್ತಂಗಡಿ: ತಾಲೂಕಿನ ನಾಗರಿಕರಿಗೆ ಅದರಲ್ಲೂ ರೈತಾಪಿ ಕೃಷಿಕ ವರ್ಗಕ್ಕೆ ಕಳೆದ ವರ್ಷದ ಮಳೆಗಾಲದ ಪ್ರವಾಹದ ಕಹಿನೆನಪು ಮಾಸದಿರುವಾಗಲೇ ಮತ್ತೊಂದು ಮಳೆಗಾಲ ಅದೇನು‌ ಅನಾಹುತ ಸೃಷ್ಟಿಸೀತು ಎಂಬ ಆತಂಕ ಮನೆ ಮಾಡುತ್ತಿದೆ.

 ಏ. 30ರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಅಡಿಕೆ ಮರ ಸಹಿತ ವಿದ್ಯುತ್ ಕಂಬಗಳು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ. ಇದು ಮುಂದೆ ಆಗಬಹುದಾದ ಪ್ರಾಕೃತಿಕ ವಿಕೋಪದ ಟೆಸ್ಟ್ ಡೋಸ್ ಆಗಿರಬಹುದು ಎಂದು ಬೆದರಿರುವ ಅನೇಕ ಕೃಷಿಕರು, ಮಳೆಯಿಂದಾಗಬಹುದಾದ ಸಂಭಾವ್ಯ ಅನಾಹುತದಿಂದ ಪಾರಾಗಲು ಸೂಕ್ತ ಮುಂಜಾಗ್ರತಾ ಕ್ರಮಕ್ಕಾಗಿ ಶಾಸಕರತ್ತ ಹಾಗೂ ತಾಲೂಕು ಆಡಳಿತದತ್ತ ನಿರೀಕ್ಷೆಯ ಕಂಗಳಿಂದ ನೋಡುತ್ತಿದ್ದಾರೆ.

ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಅನುಷ್ಠಾನದಲ್ಲಿ ಸಂಪೂರ್ಣ ಬ್ಯುಸಿಯಾಗಿರುವ ತಾಲೂಕು ಆಡಳಿತ; ಇತ್ತ ಸಂಭಾವ್ಯ ಪ್ರಾಕೃತಿಕ ವಿಕೋಪದಿಂದ ರೈತರ ಸಹಿತ ನಾಗರಿಕರನ್ನು-ಆಸ್ತಿಪಾಸ್ತಿಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ನಿಭಾಯಿಸಬೇಕಾಗಿದೆ.

ಮೇಲಂತಬೆಟ್ಟು ಗ್ರಾಮದಲ್ಲಿ ಗಾಳಿ ಮಳೆಗೆ ಜಿ.ಪಂ. ಮಾಜಿ ಸದಸ್ಯ ಶೈಲೇಶ್ ಕುರ್ತೋಡಿ ಅವರ ಹಟ್ಟಿಗೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ. ಅಡಿಕೆ ಗಿಡಗಳು ಧರಾಶಾಹಿಯಾಗಿದೆ. ಸುತ್ತಮುತ್ತ ಅಡ್ಕದ ಬೈಲು, ಮೂಡಲ, ನಡ್ವಡ್ಕ, ಮಿತ್ತಡ್ಕ, ಕೆಳಗಿನ ಅಡ್ಕ ಸುತ್ತಮುತ್ತ 80 ಕ್ಕೂ ಅಧಿಕ ಅಡಿಕೆ ಗಿಡಗಳು ಗಾಳಿಗೆ ಬುಡಸಮೇತ ಧರೆಗುರುಳಿದೆ..

ಉಜಿರೆ ಪೇಟೆ ಸಮೀಪ ಪಕ್ಕದ ಕಲ್ಲೆ ಎಂಬಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ನಷ್ಟ ಉಂಟಾಗಿದೆ. ಕಲ್ಲೆಯ ಗಣೇಶ್ ನಾಯ್ಕ್ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಂಪರ್ಕ ಸುಟ್ಟು ಹೋಗಿದೆ. ಸ್ವಿಚ್ ಬೋರ್ಡ್‌ಗಳು, ಉಪಕರಣಗಳು ಹಾನಿಗೀಡಾಗಿವೆ. ಅಜಿತ್ ನಗರದಲ್ಲಿ ನೀಲಯ್ಯ ನಾಯ್ಕ ಅವರ ತೆಂಗಿನ ಮರಕ್ಕೂ ಸಿಡಿಲು ಬಡಿದಿದೆ. ನಡ ಗ್ರಾಮದ ನಡಬೈಲು ಶ್ರೀಧರ ಆಚಾರ್ಯ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

ತಾಲೂಕಿನ ಮೇಲಂತಬೆಟ್ಟು ಇಳಂತಿಲ, ಕಣಿಯೂರು ಸಮೀಪದ ಮಾವಿನಕಟ್ಟೆ ಪರಿಸರ ಸೇರಿದಂತೆ ಒಟ್ಟು 15 ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗಿದೆ.

See also  ಕರಾವಳಿಯಲ್ಲಿ ಕುತೂಹಲ ಕೆರಳಿಸಿದ ಸ್ಥಳೀಯ ಸಂಸ್ಥೆಗಳ ಫಲಿತಾಂಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು