News Kannada
Friday, December 02 2022

ಕರಾವಳಿ

ಪಯಸ್ವಿನಿ ನದಿಯಲ್ಲಿ ಹೆಚ್ಚಿದ ನೀರಿನ ಹರಿವು

Photo Credit :

ಪಯಸ್ವಿನಿ ನದಿಯಲ್ಲಿ ಹೆಚ್ಚಿದ ನೀರಿನ ಹರಿವು

ಸುಳ್ಯ: ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಜಲಮೂಲಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಇದರಿಂದ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಅಭಾವದ ಭೀತಿ ಸ್ವಲ್ಪ ಮಟ್ಟಿಗೆ ದೂರವಾಗಿದೆ.

ಕರ್ನಾಟಕ ಮತ್ತು ಕೇರಳ ರಾಜ್ಯಗಳ ಪ್ರಮುಖ ನೀರಿನ ಮೂಲವಾದ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಪಯಸ್ವಿನಿ ನದಿ ಹುಟ್ಟುವ ಪ್ರದೇಶದಲ್ಲಿ ಮತ್ತು ನದಿ ಹರಿದು ಬರುವ ಕೊಯನಾಡು, ಸಂಪಾಜೆ, ಕಲ್ಲುಗುಂಡಿ, ಸುಳ್ಯ ಸೇರಿ ಕೊಡಗು ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಭಾಗಗಳಲ್ಲಿ ಎರಡು ವಾರಗಳಿಂದ ಹಲವು ದಿನಗಳಲ್ಲಿ ಉತ್ತಮ ಮಳೆಯಾಗಿರುವುದು ನದಿಯಲ್ಲಿ ನೀರಿನ ಮಟ್ಟ ಮತ್ತು ಹರಿವು ಹೆಚ್ಚಳವಾಗಲು ಸಹಕಾರಿಯಾಯಿತು.

ಬೇಸಿಗೆಯ ಆರಂಭದಲ್ಲಿಯೇ ನೀರಿನ ಹರಿವು ಕಡಿಮೆಯಾಗಿದ್ದ ಪಯಸ್ವಿನಿಯಲ್ಲಿ ಈಗ ಮತ್ತೆ ಜೀವ ಕಳೆ ಬಂದಿದೆ. ಸುಳ್ಯ ನಗರಕ್ಕೆ ಕುಡಿಯುವ ನೀರಿನ ಸರಬರಾಜು ಮಾಡಲು ನಿರ್ಮಿಸಲಾಗಿದ್ದ ಮರಳಿನ ಕಟ್ಟದಲ್ಲಿಯೂ ನೀರಿನ ಮಟ್ಟ ಹೆಚ್ಚಿದ್ದು ಕೆಳ ಭಾಗಕ್ಕೆ ಹರಿಯುವ ನೀರಿನ ಪ್ರಮಾಣ ಅಧಿಕವಾಗಿದೆ. ಮಳೆ ಬಂದ ಕಾರಣ ತೋಡು, ಕೆರೆ, ಬಾವಿ ಸೇರಿದಂತೆ ಇತರ ಜಲಮೂಲಗಳಲ್ಲಿಯೂ ನೀರಿನ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಉಷ್ಣಾಂಶ, ಉರಿ ಸೆಕೆ ಏರುತ್ತಾ ಇದ್ದರೂ ಮಳೆ ಸುರಿದ ಕಾರಣ ಜಲ ಮೂಲಗಳಲ್ಲಿ ನೀರು ಹೆಚ್ಚಿದ ಕಾರಣ ಈ ಬೇಸಿಗೆಯಲ್ಲಿ ಇನ್ನು ನೀರಿನ ಸಮಸ್ಯೆ ಉದ್ಭವಿಸಲಿಕ್ಕಿಲ್ಲ ಎಂಬುದು ಕೃಷಿಕರ ನಿರೀಕ್ಷೆ.

See also  ಸ್ಪಿಯರ್ ಹೆಡ್ ಮೀಡಿಯಾ ಪ್ರೈ.ಲಿಮಿಟೆಡ್-ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಒಡಂಬಡಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು