News Kannada
Tuesday, December 06 2022

ಕರಾವಳಿ

ಮಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಯತ್ನ 

Photo Credit :

ಮಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಯತ್ನ 

 ಮಂಗಳೂರು: ವಿಶ್ವವನ್ನೇ ಭೀತಿಯ ಮಡಿಲಿಗೆ ನೂಕಿರುವ ಮಾರಕ  ಕೊರೋನ ಸೋಂಕಿನ ವಿರುದ್ದ ಹೋರಾಡಲು  ಇಡೀ ದೇಶವೇ ಒಂದಾಗಿದೆ. ಅದರಲ್ಲೂ ತಮ್ಮ ಜೀವವನ್ನು ಲೆಕ್ಕಿಸದೇ  ಮುಂಚೂಣಿ ಸೇವೆಯಲ್ಲಿರುವ ವೈದ್ಯಕೀಯ ಸಿಬ್ಬಂದಿಗಳ ಮೇಲೆ  ಹಲ್ಲೆ ನಡೆಸುತ್ತಿರುವ  ಅನಾಗರಿಕರ ವರ್ತನೆ ನಿಜಕ್ಕೂ ಖಂಡನೀಯ.  ನಿನ್ನೆ  ಬಂಟ್ವಾಳ ತಾಲ್ಲೂಕಿನ ಕುಕ್ಕಿಪಾಡಿಯಲ್ಲಿ  ಆಶಾ ಕಾರ್ಯಕರ್ತೆ ಯೊಬ್ಬರ ಮೇಲೆ  ಯ ಮೇಲೆ ಪೊರಕೆಯಿಂದ ಹಲ್ಲೆ ಮಾಡಲು ಯತ್ನಿಸಿರುವ    ಘಟನೆ  ನಡೆದಿದೆ.

ಕುಕ್ಕಿಪಾಡಿಯ ಶ್ರೀಮತಿ ಎಂಬಾಕೆ ಹಲ್ಲೆಗೆ ಯತ್ನಿಸಿದ್ದು, ಮನೆಯ ಮುಂದೆ ಜನ ಸೇರಿದ್ದನ್ನ ಪ್ರಶ್ನಿಸಿದ್ದಕ್ಕೆ ಪೊರಕೆಯಲ್ಲಿ ಆಶಾ ಕಾರ್ಯಕರ್ತೆ ಪುಷ್ಪಲತಾ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಶ್ರೀಮತಿಯ ಪತಿ ವಿಶ್ವನಾಥ್ ಮನೆಯಲ್ಲಿಯೇ  ಪೂಜೆ -ಮಂತ್ರ ; ತಂತ್ರ  ಕಾರ್ಯ ನಡೆಸುತ್ತಿದ್ದನು. ಹೀಗಾಗಿ ಇವರ ಮನೆಗೆ ಹತ್ತಾರು ಜನರು ಬರುತ್ತಿದ್ದರು. ಈ ವೇಳೆ  ಜನಜಂಗುಳಿ ಅಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಬಗ್ಗೆ  ಆಶಾ ಕಾರ್ಯಕರ್ತೆ ಪುಷ್ಪಲತಾ ಪ್ರಶ್ನಿಸಿದ್ದಾರೆ. ಆಗ ಶ್ರೀಮತಿ ಪೊರಕೆಯಿಂದ ಆಶಾ ಕಾರ್ಯಕರ್ತೆ ಪುಷ್ಪಲತಾ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಘಟನೆಯ ಬಳಿಕ ಕುಕ್ಕಿಪಾಡಿ ಪಂಚಾಯತ್ ಸದಸ್ಯರಾದ ಯೋಗೀಶ್ ಆಚಾರ್ಯ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಸದಸ್ಯರ ಮೇಲೂ ಹಲ್ಲೆ ಯತ್ನಿಸಲಾಗಿದೆ. ಅಷ್ಟೇ ಅಲ್ಲದೇ  ಅರೋಪಿ ಮಹಿಳೆ  ಎಲ್ಲರನ್ನೂ ಅವಾಚ್ಯವಾಗಿ ನಿಂದಿಸಿದ್ದಾಳೆ. ಪುಂಜಾಲಕಟ್ಟೆ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

See also  ರಾಜ್ಯ ಸರ್ಕಾರ ವಿರುದ್ಧ ಸಹಕಾರಿ ಭಾರತಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು