News Kannada
Saturday, December 03 2022

ಕರಾವಳಿ

ಬೆಳ್ತಂಗಡಿಯ ಬಂದಾರಿನಲ್ಲಿ ಮಂಗಗಳ ಮಾರಣಹೋಮ

Photo Credit :

ಬೆಳ್ತಂಗಡಿಯ ಬಂದಾರಿನಲ್ಲಿ ಮಂಗಗಳ ಮಾರಣಹೋಮ

ಬೆಳ್ತಂಗಡಿ: ತಾಲೂಕಿನ ಬಂದಾರು ಗ್ರಾ.ಪಂ. ವ್ಯಾಪ್ತಿಯ ಕಲ್ಲರ್ಬಿ ಸಮೀಪದ ರಸ್ತೆಬದಿ ೧೫ಕ್ಕೂ ಅಧಿಕ ಕೋತಿಗಳ ಮೃತದೇಹಗಳು ಶುಕ್ರವಾರ ಪತ್ತೆಯಾಗಿವೆ.

ಬಂದಾರು ಗ್ರಾಮದ ಕುಂಟಾಲಪಲ್ಕೆ-ಪದ್ಮುಂಜ ಸಾಗುವ ರಸ್ತೆಯಲ್ಲಿ ಕಲ್ಲರ್ಬಿ ಸೇತುವೆ ಬಳಿ ಗುರುವಾರ ರಾತ್ರಿ ೯.೩೦ಕ್ಕೆ ಸುಮಾರು ೫೦ ಕ್ಕೂ ಅಧಿಕ ಮಂಗಗಳು ಸತ್ತು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದರಲ್ಲದೆ ಈ ಕುರಿತು ಸಂಬಂಧಪಟ್ಟವರಿಗೆ ಶುಕ್ರವಾರ ಮಾಹಿತಿ ನೀಡಿದ್ದರು. ಆದರೆ ಶುಕ್ರವಾರ ಬೆಳಗ್ಗೆ ೧೫ ವಾನರುಗಳ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಮಂಗಗಳು ಕಾಣೆಯಾಗಿವೆ.

ಮಂಗಗಳ ತಲೆಗೆ ಗಂಭೀರ ಗಾಯವಾಗಿದ್ದು, ಮೇಲ್ನೋಟಕ್ಕೆ ವಿಷ ಪ್ರಾಶನಗೈದು ಸಾಯಿಸಿರಬಹುದು ಎಂದು ಅರಣ್ಯ ಇಲಾಖೆ ಹಾಗೂ ವೈದ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಗುರುವಾರ ರಾತ್ರಿ ೫೦ರಷ್ಟಿದ್ದ ಮಂಗಗಳ ಮೃತದೇಹ ಶುಕ್ರವಾರ ಬೆಳಗ್ಗೆ ೧೫ಮಾತ್ರ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ಅಲ್ಪ ಪ್ರಮಾಣದ ವಿಷ ಪ್ರಾಶನ ಸೇವಿಸಿದ್ದ ಮಂಗಗಳು ಚೇತರಿಸಿ ಕಾಡಿಗೆ ತೆರಳಿರುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ. ಗುರುವಾರ ರಾತ್ರಿ ಬಂದಾರು ಆಸುಪಾಸು ಉತ್ತಮ ಮಳೆಯಾಗಿದ್ದು, ವಿದ್ಯುತ್ ಇಲ್ಲದ ಸಮಯದಲ್ಲಿ ಬೇರೆಡೆ ಕೃತ್ಯ ನಡೆಸಿ ತಂದು ಹಾಕಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಸ್ಥಳಕ್ಕೆ ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್, ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯ ಬಿ.ಕೆ., ಪಿ.ಡಿ.ಒ. ಮೋಹನ್ ಬಂಗೇರ, ಮಡಂತ್ಯಾರು ಪಶುವೈದ್ಯಾಧಿಕಾರಿ ವಿನಯ್ ಕುಮಾರ್, ಪದ್ಮುಂಜ ಆಸ್ಪತ್ರೆ ವೈದ್ಯಾಧಿಕಾರಿ ಡಯನಾ ಸವಿತಾ, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ವಲಯ ಅರಣ್ಯಾಧಿಕಾರಿ ಮದುಸೂದನ್, ಉಪವಲಯ ಅರಣ್ಯಾಧಿಕಾರಿ ಆರ್.ಎಸ್. ಪಾಟೀಲ್, ಅರಣ್ಯ ರಕ್ಷಕ ಜಗದೀಶ್, ಆರೋಗ್ಯ ಸಹಾಯಕ ಸ್ವತಂತ್ರ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಬೆಳ್ತಂಗಡಿ: ಜೆಡಿಎಸ್ ನಿಂದ ಸುಮತಿ ಹೆಗ್ಡೆ ನಾಮಪತ್ರ ಸಲ್ಲಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು