News Kannada
Monday, September 26 2022

ಕರಾವಳಿ

2022, 2028ನೇ ವರ್ಷ ತುಂಬಾ ಕಠಿಣವಾಗಿರಲಿದೆ: ಮಹಾಸಾಗರ ಮುನಿ ಮಹಾರಾಜರು - 1 min read

Photo Credit :

2022, 2028ನೇ ವರ್ಷ ತುಂಬಾ ಕಠಿಣವಾಗಿರಲಿದೆ: ಮಹಾಸಾಗರ ಮುನಿ ಮಹಾರಾಜರು

ಬೆಳ್ತಂಗಡಿ: ಸತ್ಯ ಅಹಿಂಸೆ, ಕರುಣೆ, ಕ್ಷಮೆ, ಪರೋಪಕಾರ, ದೀನ ದಲಿತರ ಸೇವೆ ಮೊದಲಾದ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮನ-ವಚನ-ಕಾಯದಿಂದ ಪರಿಶುದ್ಧರಾಗಿ ಶ್ರದ್ಧಾ-ಭಕ್ತಿಯಿಂದ ನಿತ್ಯವೂ ಧರ್ಮದ ಅನುಷ್ಠಾನ ಮಾಡಬೇಕು. ಆತ್ಮ ಕಲ್ಯಾಣದಿಂದ ಲೋಕ ಕಲ್ಯಾಣವಾಗುತ್ತದೆ ಎಂದು ಪೂಜ್ಯ ಆಚಾರ್ಯ ಶ್ರೀ 108 ಮಹಾಸಾಗರ ಮುನಿ ಮಹಾರಾಜರು ಹೇಳಿದರು.

ಅವರು ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಗುರುವಾರ ಮಂಗಲ ಪ್ರವಚನ ನೀಡಿದರು.

ದಯೆ ಇದ್ದಲ್ಲಿ ಧರ್ಮ ಇದೆ. ದಯೆಯೇ ಧರ್ಮದ ಮೂಲವಾಗಿದೆ. ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನಿತ್ಯ ಮಾಡುತ್ತಿರುವ ಬಹುಮುಖಿ ಸಮಾಜಸೇವೆ ಹಾಗೂ ಧರ್ಮ ಪ್ರಭಾವನಾ ಕಾರ್ಯಗಳ ವಿಶ್ವಕ್ಕೆ ಮಾದರಿಯಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮುನಿಗಳ ದರ್ಶನ, ಸೇವೆ ಹಾಗೂ ಆಹಾರದಾನದಿಂದ ಕರ್ಮಗಳು ಕೊಳೆ ಕಳೆದು ಪುಣ್ಯ ಸಂಚಯವಾಗುತ್ತದೆ ಎಂದು ಅವರು ಹೇಳಿದರು.

ಕೊರೊನಾ ಶೀಘ್ರದಲ್ಲಿ ಪೂರ್ಣ ನಿರ್ಮೂಲನೆ ಆಗಲಿದೆ. 2020ರಲ್ಲಿ ಕೊರೊನಾ ಭೀತಿ ಇದೆ ಎಂದು ಏಳು ವರ್ಷಗಳ ಹಿಂದೆ ತಾವು ಹೇಳಿದ ಭವಿಷ್ಯ ನಿಜವಾಗಿದೆ. ದೇವರ ಭಕ್ತಿ, ಶ್ರದ್ಧೆಯಿಂದ ಧರ್ಮದ ಅನುಷ್ಠಾನ ಹಾಗೂ ಶಿಸ್ತು ಬದ್ಧ ಜೀವನಶೈಲಿ ಮತ್ತು ಹಿತ-ಮಿತ ಆಹಾರ ಸೇವನೆಯಿಂದ ಕೊರೊನಾ ನಿರ್ಮೂಲನೆ ಮಾಡಿ ಆರೋಗ್ಯ ಭಾಗ್ಯ ಹೊಂದಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

2022 ಮತ್ತು 2028ನೆ ವರ್ಷ ಅತ್ಯಂತ ಕಠಿಣವಾಗಿದ್ದು ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 2030ರ ಬಳಿಕ ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎಂದು ಅವರು ಹೇಳಿದರು.

ಪರಿಚಯ: ಮಹಾರಾಷ್ಟ್ರದಲ್ಲಿ 1943ರಲ್ಲಿ ಅತಗೊಂಡರಾಯ ಪಾಟೀಲ್ ಮತ್ತು ರುಕ್ಮಿಣ ದಂಪತಿ ಮಗನಾಗಿ ಜನಿಸಿದ ಇವರು 19ನೇ ವರ್ಷ ಪ್ರಾಯದಲ್ಲಿ ಕ್ಷುಲ್ಲಕ ದೀಕ್ಷೆ ಪಡೆದರು. ನಿತ್ಯವೂ ಜಪ,ತಪ, ಧ್ಯಾನ, ಸ್ವಾಧ್ಯಾಯದೊಂದಿಗೆ ಆತ್ಮಕಲ್ಯಾಣ ನಿರತರಾದ ಪೂಜ್ಯರು 9800 ಬಾರಿ ಉಪವಾಸವ್ರತ ಮಾಡಿದ್ದಾರೆ. ರಿದ್ಧಿ-ಸಿದ್ಧಿಯಲ್ಲಿ ಪರಿಣತರು.

ನಾಳೆ ಶನಿವಾರ ಧರ್ಮಸ್ಥಳದಿಂದ ಉಜಿರೆ, ವೇಣೂರು, ಮೂಡಬಿದ್ರೆಗಾಗಿ ಶಿರಸಿ ಮೂಲಕ ಪೂಜ್ಯರು ವಿಹಾರ ಮಾಡಲಿದ್ದಾರೆ.

See also  ಪಿಯು ಫಲಿತಾಂಶ: ಪುತ್ತೂರಿನ ವರ್ಷಾ ಪಿ ತಾಲೂಕಿಗೆ ಪ್ರಥಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು