News Kannada
Thursday, October 06 2022

ಕರಾವಳಿ

ಲಾಕ್ ಡೌನ್ ಮಧ್ಯೆ ಸಿಲುಕಿ ಕನ್ನಡ ಕಲಿತ ಫ್ರೆಂಚ್ ಪ್ರಜೆ - 1 min read

Photo Credit :

ಲಾಕ್ ಡೌನ್ ಮಧ್ಯೆ ಸಿಲುಕಿ ಕನ್ನಡ ಕಲಿತ ಫ್ರೆಂಚ್ ಪ್ರಜೆ

ಲಾಕ್‌ಡೌನ್ ಸಂದರ್ಭ ಅನೇಕ ಕ್ರಿಯಾತ್ಮಕ ಚಟುವಟಿಕೆಗಳು ನಡೆದಿರುವುದನ್ನು ನಾವು ಗಮನಿಸಿದ್ದೇವೆ. ಇಲ್ಲೊಬ್ಬ ವಿದೇಶಿ ಪ್ರಜೆ ತನ್ನ ದೇಶಕ್ಕೆ ಮರಳಲು ಸಾಧ್ಯವಾಗದಿರುವ ಸಂದರ್ಭವನ್ನು ಕನ್ನಡ ಕಲಿಯಲು ಉಪಯೋಗಿಸಿರುವುದು ಅಚ್ಚರಿಪಡುವಂತಾಗಿದೆ.

ಒಂದು ವರ್ಷದ ಪ್ರವಾಸಿ ವೀಸಾದಲ್ಲಿ ಭಾರತ ಪ್ರವಾಸಕ್ಕೆ ಬಂದ 25 ವರ್ಷದ ಫ್ರೆಂಚ್ ಪ್ರಜೆ ಬ್ಯಾಪ್ಟಿಸ್ಟ್ ಮರಿಯೋಟ್ ಬೆಳ್ತಂಗಡಿಯ ಮುಂಡಾಜೆಯ ಹಳ್ಳಿಯಲ್ಲಿನ ಬಾಡಿಗೆ ಕೋಣೆಯೊಂದರಲ್ಲಿ ಉಳಿಯಬೇಕಾಗಿ ಬಂತು. ಮಾರ್ಚ್ ಅಂತ್ಯದೊಳಗೆ ಹಿಂತಿರುಗಬೇಕಾಗಿದ್ದ ಅವರು ಅನಿರೀಕ್ಷಿತ ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡಾಗ ಕನ್ನಡ ಭಾಷೆಯನ್ನು ಕಲಿಯುವತ್ತ ಮನಸ್ಸು ಮಾಡಿ ಇದೀಗ ಕನ್ನಡ ಪುಸ್ತಕಗಳನ್ನು ಓದುವ ಹಂತಕ್ಕೆ ಬಂದಿರುವುದು ವಿಶೇಷವೇ ಸರಿ. ಮುಂಡಾಜೆಯ ಕೃಷಿಕರಾದ ಅಜಿತ್ ಭಿಡೆ ಹಾಗು ಸಚಿನ್ ಭಿಡೆ ಕನ್ನಡ ಕಲಿಸುವಲ್ಲಿ ಪೂರ್ತಿ ಸಹಕಾರ ನೀಡಿದ್ದಾರೆ.

ಇವರು ಮೂಲತಃ ಕಲಾವಿದ. ಫ್ರಾನ್ಸ್ ನ ಫ್ಲೋರೆನ್ಸ್ ಅಕಾಡೆಮಿ ಆಫ್ ಆರ್ಟ್ಸ್ ನ ವಿದ್ಯಾರ್ಥಿ. ಸ್ಪೇನ್ನ ಒಂದು ಕಲಾಶಾಲೆಯ ಶಿಕ್ಷಕ ಅನುಭವಿ ಸ್ಯಾಕ್ಸೋಫೋನ್ ಕಲಾವಿದ ಮೈಕಲ್ ಮಿಷೆಲ್ ಎಂಬುವರಿಂದ ಮುಂಡಾಜೆಯ ಬಗ್ಗೆ ಮಾಹಿತಿ ಸಿಕ್ಕಿತು. “ ನಾನು 2017 ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದಾಗ ಹಿಂದಿ ಭಾಷೆಯ ಬಗ್ಗೆ ತಿಳಿದುಕೊಂಡೆ. ಹೆಚ್ಚಿನ ಭಾರತೀಯರು ಹಿಂದಿ ಭಾಷೆಯೆನ್ನೇ ಮಾತನಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಈ ಹಳ್ಳಿಗೆ( ಮುಂಡಾಜೆ) ಬಂದಾಗ ಕನ್ನಡ ಭಾಷೆಯೂ ಒಂದಿದೆ. ಅದನ್ನೂ ಕಲಿಯುವ ಅವಶ್ಯಕತೆಯನ್ನು ಮನಗಂಡೆ. ಸನಿಹದ ನಿವಾಸಿ ಸಚಿನ್ ಭಿಡೆ ಕನ್ನಡವನ್ನು ಕಲಿಸುತ್ತಿದ್ದಾರೆ. ಲಾಕ್ ಡೌನ್ ಘೋಷಣೆಯಾದಾಗ ಯಾವಾಗ ಹಿಂದಿರುಗುವೆನೋ ಅಂತ ಅಂದು ಕೊಂಡಿದ್ದೆ. ಆದರೆ ಅದು ವಿಸ್ತರಣೆಯಾದಾಗ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ರದ್ದಾದಾಗ ಅದು ನನ್ನ ಕನ್ನಡ ಭಾಷೆಯ ಜ್ಞಾನವನ್ನು ಪಡೆಯಲು ಅನುಕೂಲವಾಯಿತು” ಎಂದು ಮರಿಯೋಟ್ ಫೆಂಚ್ ಶೈಲಿಯ ಕನ್ನಡದಲ್ಲೇ ಹೇಳುತ್ತಾರೆ. ಕನ್ನಡ ಕಲಿಯುತ್ತಿರುವ ಸಂದರ್ಭದಲ್ಲಿ ಕೃಷಿಕ, ಸಹ್ಯಾದ್ರಿ ಸಂಚಯದ ಸದಸ್ಯ ಸಚಿನ್ ಭಿಡೆಯವರು ಕನ್ನಡದ ಜೊತೆಗೆ ದಕ್ಷಿಣ ಕನ್ನಡದ ವಿವಿಧ ಖಾದ್ಯಗಳನ್ನೂ ಪರಿಚಯಿಸಿದ್ದಾರೆ. ಹೀಗಾಗಿ ಇಲ್ಲಿಂದ ಹೊರಡಲೂ ಮನಸ್ಸಾಗುತ್ತಿಲ್ಲಾ ಎನ್ನುತ್ತಾರೆ ಅವರು. ಈ ಮಧ್ಯೆ ಭಿಡೆಯವರ ದೋಸ್ತಿ ಧನುಷ್ ರಾಜೇಂದ್ರ ಇವರಿಗೆ ಡ್ರಮ್ಸ್ ವಾದವನ್ನು ಕಲಿಸುತ್ತಿರುವ ಮರಿಯೋಟ್ ಅವರಿಂದಲೂ ಕನ್ನಡವನ್ನು ಅಭ್ಯಸಿಸುತ್ತಿದ್ದಾರೆ.

 ಕಲಾವಿದ ಕುಟುಂಬದ ಮರಿಯೋಟ್ ಡ್ರಮ್ಸ್ ಕಲೆಯ ಜೊತೆಗೆ ಛಾಯಾಚಿತ್ರಕಾರರೂ ಹೌದು. ಪ್ರರ್ವತ ಶ್ರೇಣಿಗಳ, ಹಸಿರು ಕಾನನಗಳ ಭಾವಚಿತ್ರಕಾರ. ಚಾರ್ಮಾಡಿ ಕಣಿವೆಯ ಮನಮೋಹಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದನ್ನು ಇಷ್ಟ ಪಡುತ್ತಾರೆ. ಮಳೆಗಾಲ ಅಂದರೆ ಅವರಿಗೆ ತುಂಬಾ ಪ್ರೀತಿ. ಫ್ರೆಂಚ್‌ನ ಜೊತೆಗೆ ಇಟಾಲಿಯನ್, ಸ್ಪಾನಿಷ್, ಇಂಗ್ಲೀಷ್ ಹಾಗೂ ಕನ್ನಡವನ್ನು ಸರಾಗವಾಗಿ ಮಾತನಾಡಬಲ್ಲರು. ಹಿಂದಿಯ ಬಗ್ಗೆಯೂ ಮಾಹಿತಿ ಅವರಿಗಿದೆ ಎನ್ನುತ್ತಾರೆ ಸಚಿನ್ ಭಿಡೆ.

See also  ಶ್ರೀಮಂತಿಕೆ, ಸಾಧನೆಗಳನ್ನು ಸಹಜ ಭಾವದಲ್ಲಿ ಸ್ವೀಕರಿಸಿ: ಶಾಸಕಿ ಶಕುಂತಳಾ ಶೆಟ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು