News Kannada
Saturday, December 03 2022

ಕರಾವಳಿ

ಮೂಡುಬಿದಿರೆಯ ಐವರು ಪೊಲೀಸರಿಗೆ ಕೊರೋನಾ ಸೋಂಕು, ಸ್ಟೇಷನ್ ಸೀಲ್ ಡೌನ್ 

Photo Credit :

ಮೂಡುಬಿದಿರೆಯ ಐವರು ಪೊಲೀಸರಿಗೆ ಕೊರೋನಾ ಸೋಂಕು, ಸ್ಟೇಷನ್ ಸೀಲ್ ಡೌನ್ 

ಮೂಡುಬಿದಿರೆ : ಇಲ್ಲಿನ ಪೊಲೀಸ್ ಠಾಣೆಯ ಐವರು ಪೊಲೀಸರಿಗೆ ಕೊರೋನಾ ಸೋಕು ದೃಢವಾದ ಹಿನ್ನಲೆಯಲ್ಲಿ ಬುಧವಾರ ರಾತ್ರಿಯಿಂದ ಪೊಲೀಸ್ ಸ್ಟೇಷನ್ ನನ್ನು ಸೀಲ್ ಡೌನ್ ಮಾಡಲಾಗಿದೆ.

ಯಾವುದೋ ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ಸೋಂಕು ಹರಡಿರಬಹುದು ಎಂದು ಅಂದಾಜಿಸಲಾಗಿದೆ. ಮೂಡುಬಿದಿರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್ ಅವರು ಠಾಣೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ವಿವಿಧ ರೀತಿಯ ಕಷಾಯಗಳನ್ನು ಮಾಡಿಸಿ ಎಲ್ಲಾ ಸಿಬಂಧಿಗಳೂ ಕುಡಿಯುವಂತೆ ಮಾಡಿದ್ದರು. ಆದರೆ ಐವರು ಪೊಲೀಸ್ ಸಿಬಂಧಿಗಳಿಗೆ ಕೊರೋನಾದ ಕೆಲವೊಂದು ಗುಣಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಿದ್ದು ಈ ಸಂದರ್ಭದಲ್ಲಿ ಪಾಸಿಟಿವ್ ಬಂದಿದೆ. 

ಇದರಿಂದಾಗಿ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

See also  ಮಂಜೂಷಾದ ನೂತನ ಕಟ್ಟಡ ಉದ್ಘಾಟನೆಗೆ ಸಿಎಂ ಧರ್ಮಸ್ಥಳಕ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು