News Kannada
Thursday, December 08 2022

ಕರಾವಳಿ

ಬೆಳ್ತಂಗಡಿ ಸರ್ಕಾರಿ ಶಾಲೆ ಗಣಿತ ಶಿಕ್ಷಕನಿಗೆ ರಾಷ್ಟ್ರೀಯ ಪ್ರಶಸ್ತಿ

Photo Credit :

ಬೆಳ್ತಂಗಡಿ ಸರ್ಕಾರಿ ಶಾಲೆ ಗಣಿತ ಶಿಕ್ಷಕನಿಗೆ ರಾಷ್ಟ್ರೀಯ ಪ್ರಶಸ್ತಿ

ಮಂಗಳೂರು: ಬೆಳ್ತಂಗಡಿ ತಾಲೂಕಿನ ನಾಡಾ ಸರ್ಕಾರಿ ಶಾಲೆಯ ಗಣಿತ ಶಿಕ್ಷಕ ಯಾಕುಬ್ ಅವರನ್ನು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೂರು ವರ್ಷಗಳ ಮೊದಲು ಇವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕನ ಪ್ರಶಸ್ತಿಯು ಸಿಕ್ಕಿತ್ತು. 1996ರಲ್ಲಿ ತನ್ನ ಶಿಕ್ಷಕ ವೃತ್ತಿಯನ್ನು ಆರಂಭಿಸಿರುವ ಯಾಕುಬ್ ಅವರು 24 ವರ್ಷಗಳಿಂದ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವರು.

ಯಾಕುಬ್ ಅವರು ನಿರ್ಮಿಸಿರುವಂತಹ ನವೀನ ಗಣಿತ ಪ್ರಯೋಗಾಲಯವು ಅವರಿಗೆ ಈ ಪ್ರಶಸ್ತಿ ತಂದುಕೊಟ್ಟಿದೆ. ಸಪ್ಟೆಂಬರ್ 5ರಂದು ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು.

ಅವರು ಈಗಾಗಲೇ ಸುಮಾರು 300 ಯೂಟೂಬ್ ವೀಡಿಯೋಗಳನ್ನು ಮಾಡಿದ್ದು, ಇದು ತುಂಬಾ ಜನಪ್ರಿಯವಾಗಿದೆ.

ಪ್ರಶಸ್ತಿಯು ತನಗೆ ಇನ್ನಷ್ಟು ಪ್ರೇರಣೆ ನೀಡಲಿದೆ. ಜನರು ಸರ್ಕಾರಿ ಶಾಲೆಗಳಿಗೆ ಬೆಂಬಲ ನೀಡಬೇಕು ಎಂದು ಯಾಕುಬ್ ಮನವಿ ಮಾಡಿಕೊಂಡಿರುವರು.

See also  ಬಿ.ಸಿ.ರೋಡ್ ನಿಂದ ಕೈಕುಂಜೆ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಿಲಾನ್ಯಾಸ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು