ಬೆಳ್ತಂಗಡಿ: ಅಳದಂಗಡಿ ಅರಮನೆಯ ಅರಸರಾಗಿದ್ದ, ದಿ. ಕೃಷ್ಣರಾಜ ಅಜಿಲರ ಪತ್ನಿ ಸರಸ್ವತಿ ಅಮ್ಮ(90ವ) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.11ರಂದು ರಾತ್ರಿ ನಿಧನರಾದರು.
ಧಮ೯ಕಾಯ೯ಗಳಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿ ಕೊಂಡಿದ್ದ,ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮೃತರು ಪುತ್ರರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ, ಲೋಕೋಪಯೋಗಿ ಇಲಾಖೆ ಸ.ಕಾ.ಅಭಿಯಂತರ ಶಿವಪ್ರಸಾದ್ ಅಜಿಲ, ಪುತ್ರಿ ಪುಷ್ಪಲತಾ ಅಗಲಿದ್ದಾರೆ.
ಶಾಸಕ ಹರೀಶ್ ಪೂಂಜ ಮುಂತಾದ ಗಣ್ಯರು ಅರಮನೆಗೆ ಆಗಮಿಸಿ, ಅಂತಿಮ ನಮನ ಸಲ್ಲಿಸಿದರು.