News Kannada
Friday, September 30 2022

ಕರಾವಳಿ

`ಪ್ರಕೃತಿಗೆ ವಿರುದ್ಧವಾಗಿ ನಡೆದರೆ ತಿರುಗುಬಾಣವಾಗುವುದು’ - 1 min read

Photo Credit :

`ಪ್ರಕೃತಿಗೆ ವಿರುದ್ಧವಾಗಿ ನಡೆದರೆ ತಿರುಗುಬಾಣವಾಗುವುದು’

ಬಂಟ್ವಾಳ: ಕೊರೊನಾ ಬಂದ ಬಳಿಕ ಜಗತ್ತು ಭಾರತೀಯ ಚಿಂತನೆಗಳತ್ತ ನೋಡುವ ಕಾಲ ಬಂದಿದೆ. ಮನುಷ್ಯ ಪ್ರಕೃತಿಯೊಂದಿಗಿನ ಸಂಬಂಧಗಳ ಅನಾವರಣವನ್ನು ಪ್ರೊ. ರಾಜಮಣಿ ರಾಮಕುಂಜ ಅವರು ಮಾಡಿದ್ದು, ಪ್ರಕೃತಿ, ಪರಿಸರಕ್ಕೆ ವಿರುದ್ಧವಾಗಿ ನಾವು ನಡೆದರೆ ಹೇಗೆ ತಿರುಗುಬಾಣವಾಗುತ್ತದೆ ಎಂಬುದನ್ನು ಅವರು ಮಾರ್ಮಿಕವಾಗಿ ವಿವರಿಸಿದ್ದಾರೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ಬಂಟ್ವಾಳ, ಆಶ್ರಯದಲ್ಲಿ ಪರಿಸರವಾದಿ ಪ್ರೊ. ರಾಜಮಣಿ ರಾಮಕುಂಜ ಬರೆದ ಮೊಡಂಕಾಪು ಸರಿದಂತರ ಪ್ರಕಾಶನ ಪ್ರಕಟಿತ ತಿರುಗುಬಾಣ ಎಂಬ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಲಾಕ್ ಡೌನ್ ಅವಧಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ತಮ್ಮ ಬಾಲ್ಯದ ನೆನಪುಗಳನ್ನು ಕೊರೊನಾ ಸಂದರ್ಭಕ್ಕೆ ಅನ್ವಯಿಸಿ ಭೂತ, ವರ್ತಮಾನ ಮತ್ತು ಭವಿಷ್ಯತ್ಕಾಲ ದೃಷ್ಟಿಯಿಂದ ವಿಶ್ಲೇಷಿಸುವ ರಾಜಮಣಿಯವರು, ಪರಿಸರದ ಮೇಲಿನ ಮಾನವನ ದಬ್ಬಾಳಿಕೆಯನ್ನು ವಿವರಿಸುತ್ತಾರೆ. ಸ್ವಾವಲಂಬಿ ಬದುಕು ಮಾತ್ರ ಭಾರತವನ್ನು ದೃಢಗೊಳಿಸಬಲ್ಲದು ಎನ್ನುವುದನ್ನು ತಿಳಿಸಿ, ಭಾರತದ ಸತ್ವಯುತ ಮಣ್ಣಿನ ಗುಣವನ್ನು ಸೆರೆಹಿಡಿದಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಿರೀಶ ಭಟ್ ಅಜಕ್ಕಳ ಮಾತನಾಡಿ, ಮನುಷ್ಯ ತಾನೇ ಶ್ರೇಷ್ಠ, ಪ್ರಾಣಿ ಪಕ್ಷಿಗಳ ಸಹಿತ ಉಳಿದವೆಲ್ಲ ತನ್ನ ಅಡಿಯಾಳುಗಳು ಎಂಬ ಚಿಂತನೆಯನ್ನು ಕಳಚಿಕೊಳ್ಳುವ ಕಾಲ ಇಂದು ಬಂದಿದ್ದು, ಪ್ರೊ.ರಾಜಮಣಿ ಅವರ ಬರೆಹಗಳಲ್ಲಿ ಇವು ಕಾಣಿಸುತ್ತದೆ ಎಂದರು.

ಪುಸ್ತಕದ ಕುರಿತು ಮಾತನಾಡಿದ ಕೃತಿಕಾರ ಪ್ರೊ.ರಾಜಮಣಿ ರಾಮಕುಂಜ, ಲಾಕ್ ಡೌನ್ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಈ ಲೇಖನಗಳು ವರ್ತಮಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಳಗೊಂಡಿವೆ ಎಂದರು.

ಮುಖ್ಯ ಅತಿಥಿ ಮಂಗ್ಲಿಮಾರ್ ಅಣ್ಣಪ್ಪ ಸ್ವಾಮಿ ಜುಮಾದಿ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆ ಶುಭ ಹಾರೈಸಿದರು. ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ಕೆ.ಮೋಹನ ರಾವ್, ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ಬಂಟ್ವಾಳ ಅಧ್ಯಕ್ಷ ಬಿ.ಸುದರ್ಶನ ಜೈನ್ ಉಪಸ್ಥಿತರಿದ್ದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಸ್ವಾಗತಿಸಿದರು. ಪತ್ರಕರ್ತ ಗೋಪಾಲ ಅಂಚನ್ ಆಲದಪದವು ವಂದಿಸಿದರು. ಸೂರ್ಯನಾರಾಯಣ ರಾವ್ ಕಾರ್ಯಕ್ರಮ ನಿರೂಪಿಸಿದರು.

See also  ಮಂಗಳೂರಲ್ಲಿ ಟಿಪ್ಪು ಜಯಂತಿ ವಿರೋಧಿಸಿದ ಬಿಜೆಪಿ ಕಾರ್ಯಕರ್ತನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು