News Kannada
Thursday, September 29 2022

ಕರಾವಳಿ

ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣಕ್ಕೊಂದು ಮಾದರಿ ಜ್ಞಾನತಾಣ ಲೋಕಾರ್ಪಣೆ - 1 min read

Photo Credit :

ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣಕ್ಕೊಂದು ಮಾದರಿ ಜ್ಞಾನತಾಣ ಲೋಕಾರ್ಪಣೆ

ಬೆಳ್ತಂಗಡಿ: ಕೋವಿಡ್ ಸಂಘರ್ಷದಿಂದ ಮಕ್ಕಳು ತಂತ್ರಜ್ಞಾನದ ಶಿಕ್ಷಣಕ್ಕೆ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ ಇಂದಿನದು. ಈ ಸಮಯದಲ್ಲಿ ಅಂತರ್ಜಾಲ ಶಿಕ್ಷಣ ಪಡೆಯುವಲ್ಲಿ ಗ್ರಾಮೀಣ ಮಕ್ಕಳು ವಂಚಿತರಾಗುತ್ತಿದ್ದಾರೆ. ಇದನ್ನರಿತು ಶ್ರೀ ಕ್ಷೇತ್ರದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಕಾರ್ಯಕ್ರಮದಡಿ ೧೦ ಸಾವಿರ ಲ್ಯಾಪ್‌ಟಾಪ್, ೨೦ ಸಾವಿರ ಟ್ಯಾಬ್ ವಿತರಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಸೋಮವಾರ ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕರ್ನಾಟಕ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣಕ್ಕೊಂದು ಮಾದರಿಯಾಗಿ ಲ್ಯಾಪ್ ಟಾಪ್ ಹಾಗೂ ಟ್ಯಾಬ್ ವಿತರಣೆಯ ಜ್ಞಾನತಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಧರ್ಮಸ್ಥಳ ಕ್ಷೇತ್ರದಿಂದ ಅನೇಕ ರೀತಿಯ ಸೇವಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಧುನಿಕವಾದ ಮತ್ತು ಕಾಲಕ್ಕೆ ಅವಶ್ಯಕವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ಕೋವಿಡ್-೧೯ನಿಂದ ಜನರೆಲ್ಲ ಭಯ ಪಡುವಂತಹ ಈ ಸಮಯದಲ್ಲಿ ನಮ್ಮ ಶಾಲಾ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಗಳನ್ನು ಗಮನಿಸಿ ಶಿಕ್ಷಣ ಅವರಿಗೆ ಹೇಗೆ ತಲುಪಿಸಬಹುದು ಎಂಬ ಚಿಂತನೆಯಲ್ಲಿರುವಾಗ ಅಧುನಿಕವಾದ ಈ ಕಾಲದಲ್ಲಿ ಕ್ಷೇತ್ರದಿಂದ ಸ್ಪಂದಿಸಿ ಮನೆಯಲ್ಲಿಯೇ ಕುಳಿತು ಅಂತರ್ಜಾಲ ಮೂಲಕ ಶಿಕ್ಷಣ ಪಡೆಯುವಂತಹ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಏಕಕಾಲದಲ್ಲಿ ರಾಜ್ಯಾದ್ಯಂತ ಜ್ಞಾನತಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಹಿಂದಿನ ಕಾಲದಲ್ಲಿ ಈಗಿನ ಸಮಕಾಲೀನ ಅನೇಕ ಜನರಿಗೆ ಇದು ದುಬಾರಿ ಶ್ರೀಮಂತ ವಸ್ತು, ಅದರಲ್ಲಿ ಇರುವ ವಿಚಾರಗಳು ಕೆಟ್ಟದ್ದು ಎಂಬ ಭಾವನೆ ಇದೆ. ಅದರೆ ಲ್ಯಾಪ್‌ಟಾಪ್, ಟ್ಯಾಬ್ ಗಳನ್ನು ಬಳಸಿ ಜೀವನವನ್ನು ರೂಪಿಸಿಕೊಳ್ಳಬಹುದು, ವ್ಯಕ್ತಿತ್ವ ರೂಪಿಸಿಕೊಂಡು ಶಿಕ್ಷಣವನ್ನು ಪಡೆಯಬಹುದು. ಹೊಸ ತಂತ್ರಜ್ಞಾನದ ಮೂಲಕ ೫ರಿಂದ ೧೦ನೇ ತರಗತಿವರೆಗೆ ಪಾಠಗಳು ಸಂಯೋಜಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸಮಚಿಂತನೆ ಜತೆಗೆ ಹೊಸ ಪ್ರಯೋಗಶೀಲತೆ ಹೆಚ್ಚಾಗಲಿದೆ. ಜೀವನ ಅಮೂಲ್ಯವಾದುದು, ರೋಗಕ್ಕೆ ಹೆದರಿ ಮನೆಯಲ್ಲೇ ಕುಳಿತುಕೊಳ್ಳುವ ಬದಲಾಗಿ ನಮ್ನ ಸೃಜನಶೀಲ ಉಪಕ್ರಮಗಳನ್ನು ಅನುಷ್ಠಾನಕ್ಕೆ ತಂದು ಪ್ರಯೋಗಶೀಲರಾಗಿ ಎಂದರು.

ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಧ.ಗ್ರಾ.ಯೋಜನೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕರಾದ ಶಾಂತಾರಾಮ ಪೈ, ಶ್ರೀಹರಿ, ಜಯಶಂಕರ ಶರ್ಮ, ಜಯರಾಮ ನೆಲ್ಲಿತ್ತಾಯ ನಿರ್ದೇಶಕರಾದ ಚಂದ್ರಶೇಖರ, ಓಂಪ್ರಕಾಶ್ ಉಪಸ್ಥಿತರಿದ್ದರು.

See also  ಶತಮಾನೋತ್ಸವ ಸಂಭ್ರಮದಲ್ಲಿ ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು