News Kannada
Sunday, October 02 2022

ಕರಾವಳಿ

ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನಾಚರಣೆ - 1 min read

Photo Credit :

ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನಾಚರಣೆ

ಅಕ್ಟೋಬರ್  29ರಂದು ವಿಶ್ವ  ಪಾರ್ಶ್ವವಾಯು  ದಿನಾಚರಣೆಯನ್ನಾಗಿ  ನಾವು  ಆಚರಿಸುತ್ತೇವೆ. ಈ ಸಂದರ್ಭದಲ್ಲಿ ಪಾರ್ಶ್ವವಾಯು ಕಾಯಿಲೆಯ  ಬಗ್ಗೆ  ಜನಜಾಗೃತಿ  ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗುತ್ತಿದೆ.

ಜೀವಿತಾವಧಿಯಲ್ಲಿ  ನಾಲ್ಕರಲ್ಲಿ ಒಬ್ಬರಿಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ ಅಂದರೆ ಕರ್ನಾಟಕದ 61/2 ಕೋಟಿ  ಜೀವಿತಾವಧಿಗೆ ಒಂದೂವರೆ ಕೋಟಿ ಜನರಿಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ. ಮಿದುಳಿನ ಒಂದು ಭಾಗಕ್ಕೆ ರಕ್ತ ಸಂಚಾರ ಸ್ಥಗಿತಗೊಳ್ಳುವುದರಿಂದ  ಪಾರ್ಶ್ವವಾಯು ಕಾಯಿಲೆಯು ಉಂಟಾಗುತ್ತದೆ.

ರಕ್ತಚಲನೆಯಲ್ಲಿ ವ್ಯತ್ಯಯವಾದಾಗ ಮಿದುಳಿನ ನರಕೋಶಗಳು ನಿಷ್ಕ್ರಿಯಗೊಳ್ಳುತ್ತದೆ. ಅಂಕಿ ಅಂಶಗಳ ಪ್ರಕಾರ ಪಾರ್ಶ್ವವಾಯು ಕಾಯಿಲೆ ಆರಂಭವಾದ ಮೊದಲ 6 ಗಂಟೆಯವರೆಗೆ ಪ್ರತಿ ನಿಮಿಷಕ್ಕೆ 1.9 ಮಿಲಿಯನ್ ನರಕೋಶಗಳು ನಿಷ್ಕ್ರಿಯಗೊಳ್ಳುತ್ತದೆ.

ಪಾರ್ಶ್ವವಾಯು ಕಾಯಿಲೆಯ ಲಕ್ಷಣಗಳು

ಮಾತಿನಲ್ಲಿ ತೊದಲುವುದು

ದೇಹದ ಒಂದು ಭಾಗದ ನಿಯಂತ್ರಣ ಕಳೆದುಕೊಳ್ಳುವುದು

ದೇಹದ ಒಂದು ಭಾಗ ಮರಕಟ್ಟುವುದು

ಏಕಾಏಕಿ ದೃಷ್ಟಿ ದೋಷ ಕಾಣಿಸಿಕೊಳ್ಳುವುದು

ಪ್ರಜ್ಞೆ ಕಳೆದುಹೋಗುವುದು

ಕಾರಣಗಳು

ಅತಿಯಾದ ಧೂಮ/ ಮದ್ಯಪಾನ

ಅನಿಯಂತ್ರಿತ ಸಕ್ಕರೆ ಕಾಯಿಲೆ

ಅತಿಯಾದ ರಕ್ತದೊತ್ತಡ

ರಕ್ತದಲ್ಲಿ ಕೊಬ್ಬು ಶೇಖರಣೆ

ವ್ಯಾಯಾಮವಿಲ್ಲದ ಜೀವನ

ಪಾರ್ಶ್ವವಾಯು ಕಾಯಿಲೆಯನ್ನು ತಡೆಯುವುದು ಹೇಗೆ?

ರಕ್ತದ ಒತ್ತಡವನ್ನು ಸಾಮಾನ್ಯವಾಗಿರುವಂತೆ ನೋಡುವುದು

ಸಕ್ಕರೆ ಕಾಯಿಲೆಯ ನಿಯಂತ್ರಣ

ದುಶ್ಚಟದ ನಿವಾರಣೆ

ನಿಗದಿತ ವ್ಯಾಯಾಮ

2020 – ವರ್ಲ್ಡ್ ಸ್ಟ್ರೋಕ್ ಆರ್ಗನೈಜೇಷನ್ ಧ್ಯೇಯ ವಾಕ್ಯ – ಮೂವ್ ಟು ಪ್ರಿವೆಂಟ್ ಸ್ಟ್ರೋಕ್

ಕಾಯಿಲೆಯ ಚಿಕಿತ್ಸೆ

ರೋಗದ ಲಕ್ಷಣಗಳು ಕಂಡು ಬಂದಾಗ ಸಿಟಿ / ಎಂ ಆರ್ ಐ ಸ್ಕ್ಯಾನ್ ಮುಖಾಂತರ ಪತ್ತೆಹಚ್ಚಬಹುದು. ಕಾಯಿಲೆ ಶುರುವಾದ 41/2 ಗಂಟೆಯ ಒಳಗೆ ಬಂದರೆ ಮಿದುಳಿನ ರಕ್ತದಲ್ಲಿರುವ ಹೆಪ್ಪನ್ನು ಕರಗಿಸುವ ಇಂಜೆಕ್ಷನ್ (ಐ ವಿ – ಆರ್ ಟಿ ಪಿ ಏ ) ಕೊಡಬಹುದು. ಇದಲ್ಲದೆ ಕಾಲಿನ ರಕ್ತ ಅಪಧಮನಿಯ ಮುಖಾಂತರ ನಳಿಗೆ ಹಾಕಿ ಹೆಪ್ಪನ್ನು ತೆಗೆಯುವ ವ್ಯವಸ್ಥೆ ಇದೆ(ಮೆಕ್ಯಾನಿಕಲ್ ಥಂರೊಂಬೆಕ್ಟಮಿ ).

ವೃದ್ಧರಿಗೆ ಈ ರೋಗವು ಹೆಚ್ಚಾಗಿ ಬರುವುದಾದರೂ ಯಾವುದೇ ವಯಸ್ಸಿನಲ್ಲಿ ಇದು ಕಾಣಿಸಿಕೊಳ್ಳಬಹುದು. ಹಲವಾರು ಜನರಲ್ಲಿ ಪಾರ್ಶ್ವವಾಯು ಕಾಯಿಲೆಗೆ ಸಾಂಪ್ರದಾಯಿಕ ಚಿಕೆತ್ಸೆಯೇ ಪರಿಹಾರ ಎಂಬ ನಂಬಿಕೆ ಇರುವುದರಿಂದ ಕಾಯಿಲೆ ಬಂಡ ತಕ್ಷಣ ಚಿಕಿತ್ಸೆ ಪಡೆಯುವುದು ವಿಳಂಬವಾಗುತಿದೆ. ಪಾರ್ಶ್ವವಾಯು ಕಾಯಿಲೆ ಶುರುವಾದ ನಂತರ ತ್ವರಿತಗತಿಯಲ್ಲಿ ನಿಷ್ಕ್ರಿಯಗೊಳ್ಳುವುದರಿಂದ ತ್ವರಿತಗತಿಯಲ್ಲಿ ಚಿಕಿತ್ಸೆ ಅಗತ್ಯ. ಟೈಮ್ ಐಸ್ ಬ್ರೈನ್ .

ಈ ಬಾರಿ 2020ರ ವರ್ಲ್ಡ್ ಸ್ಟ್ರೋಕ್ ಆರ್ಗನೈಜೇಷನ್ ಧ್ಯೇಯ ವಾಕ್ಯ- ಮೂವ್ ಟು ಪ್ರಿವೆಂಟ್ ಸ್ಟ್ರೋಕ್ .

ವ್ಯಾಯಾಮ ಮಾಡಿ – ಪಾರ್ಶ್ವವಾಯು ಕಾಯಿಲೆ ನಿವಾರಿಸಿ

ಕರ್ನಾಟಕ ರಾಜ್ಯದ ಖಾಸಗಿ ರಂಗದ ಅತೀ ದೊಡ್ಡ ನರಸಂಬಂದ ಚಿಕಿತ್ಸೆ ನೀಡುವ ಏಕೈಕ ಆಸ್ಪತ್ರೆ  ಹಾಗೂ  ಮೆದುಳು, ಬೆನ್ನು ಮೂಳೆಯ ಪ್ರಪ್ರಥಮ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಎನಿಸಿಕೊಂಡಿರುವ ಮಂಗಳೂರಿನ ಪಡೀಲ್ ಬಳಿ ಇರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಇಂದು ವಿಶ್ವ ಪಾರ್ಶ್ವವಾಯು ದಿನಾಚರಣೆಯನ್ನು ಆಚರಿಸಲಾಯಿತು. ಮೆಡಿಕಲ್ ಡೈರೆಕ್ಟರ್ ಹಾಗೂ ಕನ್ಸಲ್ಟೆಂಟ್ ನ್ಯೂರೋಲಾಜಿಸ್ಟ್ ಡಾ. ರಾಜೇಶ್ ಶೆಟ್ಟಿ ಮತ್ತು ಆಸ್ಪತ್ರೆಯ ಇತರೆ ವೈದ್ಯರುಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

See also  ಅಯೋಧ್ಯೆ ಕರಸೇವಕರಿಗೆ ಮೂಡುಬಿದಿರೆ ಬಿಜೆಪಿಯಿಂದ ಗೌರವ

ಕನ್ಸಲ್ಟೆಂಟ್ ನ್ಯೂರೋಲಾಜಿಸ್ಟ್ ಡಾ. ರಕ್ಷಿತ್ ಸಿ ಕೆದಂಬಾಡಿ ಸ್ಟ್ರೋಕ್ ಅವೇರ್ನೆಸ್ ಕುರಿತಾದ ಬುಕ್ಲೆಟ್ ಬಿಡುಗಡೆಗೊಳಿಸಿದರು. ನಂತರ ಸ್ಟ್ರೋಕ್ ಹೇಗೆ ಉಂಟಾಗುತ್ತದೆ ಮತ್ತು ತಡೆಗಟ್ಟುವ ಕ್ರಮ ಹೇಗೆ ಎಂಬ ಬಗ್ಗೆ ಮಾತನಾಡಿದ ಅವರು, “ಸ್ಟ್ರೋಕ್ ಉಂಟಾಗಲು ಅಧಿಕ ರಕ್ತದೊತ್ತಡ, ಮಧುಮೇಹ, ಸಿಗರೇಟು ಸೇವನೆ, ಮದ್ಯಪಾನ ಮುಂತಾದವುಗಳು ಕಾರಣವಾಗುತ್ತವೆ. ಸ್ಟ್ರೋಕ್ ಎಂದರೆ ಮೆದುಳಿನ ಅಪಘಾತ. ಸ್ಟ್ರೋಕ್  ಆಘಾತವಾದ ತಕ್ಷಣ ಅಂದರೆ 4 ಗಂಟೆಯ ಒಳಗಡೆ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮುಂದಾಗುವ ಅನಾಹುತ ತಡೆಗಟ್ಟಬಹುದು. ಜೊತೆಗೆ ಸ್ಟ್ರೋಕ್ ಮುಂದೆ ಬರದ ಹಾಗೆಯೂ ತಡೆಗಟ್ಟಬಹುದು ಎಂದರು.

ಈ ಸಂದರ್ಭ ಫಸ್ಟ್ ನ್ಯೂರೋ ಆಸ್ಪತ್ರೆಯ ಡೈರೆಕ್ಟರ್ ರೋಶಿನಿ ಶೆಟ್ಟಿ, ಕನ್ಸಲ್ಟೆಂಟ್ ನ್ಯೂರೋಲಾಜಿಸ್ಟ್ ಹಾಗೂ ಎಪಿಲೆಪ್ಟೋಲಾಜಿಸ್ಟ್ ಡಾ. ಶಿಶಿರ್ ನಾಗೇಶ್ ಡುಬ್ಲೆ, ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು