News Kannada
Thursday, February 02 2023

ಕರಾವಳಿ

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ನಳಿನ್ ಕುಮಾರ್ ಕಟೀಲ್

Photo Credit :

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ನಳಿನ್ ಕುಮಾರ್ ಕಟೀಲ್

ಮಂಗಳೂರು: ಗೋಹತ್ಯ ನಿಷೇಧ ಮಸೂದೆಯನ್ನು ವಿರೋಧಿಸುತ್ತಿರುವ ಸಿದ್ದರಾಮಯ್ಯ, ತಾನು ಗೋವನ್ನು ಗೌರವಿಸುತ್ತೇನೆ ಎಂಬುವುದನ್ನು ಅದರ ಸಗಣಿ ಎತ್ತುವ ಮೂಲಕ ಹೇಳಿದರು. ಅದಕ್ಕೆ ಉತ್ತರ ನೀಡಿರುವ ನಳಿನ್ ಕುಮಾರ್ ಕಟೀಲ್, “ಸಗಣಿ ಎತ್ತುವುದರಿಂದ ಏನೂ ಆಗುವುದಿಲ್ಲ. ಈ ರೀತಿಯ ನಾಟಕದಿಂದ ಯಾವ ಪ್ರಯೋಜನವೂ ಇಲ್ಲ” ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಗೋಹತ್ಯ ನಿಷೇಧ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಮಂಗಳೂರಿನ ಬಿಜೆಪಿ ಕಚೇರಿಯ ಮುಂದೆ ಗೋ ಪೂಜೆ ನಡೆಯಿತು. ತದನಂತರ ಪತ್ರಕರ್ತರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಭಾರತೀಯರು ಶತಮಾನಗಳಿಂದ ಗೋವನ್ನು ಪೂಜಿಸುತ್ತಾ ಬಂದಿದ್ದಾರೆ ಹಾಗೂ ಅದಕ್ಕೆ ಅಗ್ರಸ್ಥಾನವನ್ನು ನೀಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಗೋಹತ್ಯ ನಿಷೇಧದ ಬಗ್ಗೆ ಮಂಡಿಸಲಾಗಿತ್ತು. ಅದು ಈಗ ಜಾರಿ ಗೊಂಡಿರುವುದು ಸಂತೋಷದ ವಿಷಯ. ಇದರಿಂದಾಗಿ ನಮ್ಮ ಪರಂಪರೆಯ ಒಂದು ತುಣುಕು ಉಳಿಯುತ್ತದೆ. ಇದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಅಭಿನಂದಿಸುತ್ತೇನೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಇನ್ನು ವಿರೋಧ ಪಕ್ಷಗಳ ಆಕ್ಷೇಪಣೆಯ ಕುರಿತು ಮಾತನಾಡಿದ ಕಟೀಲ್ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಸೂದೆಗಳನ್ನು ತೆಗೆಯುವ ಸಂದರ್ಭಗಳಲ್ಲಿ ಚರ್ಚಿಸುತ್ತಿದ್ದಾರೆ? ಕಾಂಗ್ರೆಸ್ ಸದಸ್ಯರು ಆಡುತ್ತಿರುವ ರೀತಿ ನೋಡಿದರೆ, ಗೋ ಹಂತಕರ ಪರವಾಗಿದ್ದಾರೆ ಎನಿಸುತ್ತಿದೆ. ಪ್ರತಿಯೊಂದು ವಿಷಯದಲ್ಲೂ ಕಾಂಗ್ರೆಸ್ಸಿಗರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

See also  ಅಕ್ರಮ ಮರಳು ಸಾಗಾಟ: ಎರಡು ಟಿಪ್ಪರ್ ವಶಕ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು