ಮಂಗಳೂರು: ಕ್ಯಾಥೋಲಿಕ್ ಸಭಾ ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಸ್ಟ್ಯಾನಿ ಲೋಬೋ ಬಂಟ್ವಾಳ ಅವರು ಆಯ್ಕೆಯಾಗಿರುವರು.
ಭಾನುವಾರ ಬಿಷಪ್ ಹೌಸ್ ನಲ್ಲಿ ನಡೆದಂತಹ ವಾರ್ಷಿಕ ಸಭೆಯಲ್ಲಿ ರಾಜು ಸ್ಟೀಫನ್ ಡಿಸೋಜಾ ಅವರನ್ನು ನಿಯೋಜಿತ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಸ್ಟೀವನ್ ರೋಡ್ರಿಗಸ್ ವೆಲೆನ್ಸಿಯಾ. ಅಲ್ಫೋನ್ಸ್ ಫೆರ್ನಾಂಡೀಸ್ ಬಂಟ್ವಾಳ ಮುಖ್ಯ ಕಾರ್ಯದರ್ಶಿ, ದೀಪಕ್ ಡಿಸೋಜಾ ಮಿಲಾಗ್ರಿಸ್ ಜಂಟಿ ಕಾರ್ಯದರ್ಶಿ, ಕೋಶಾಧಿಕಾರಿ ಆಗಿ ಮೆಬಿಡಾ ರೋಡ್ರಿಗಸ್ ಮತ್ತು ಇನಾಸ್ ರೋಡ್ರಿಗಸ್ ಉಪ್ಪಿನಂಗಡಿ ಅವರು ಆಯ್ಕೆ ಆದರು.
ರೊಲ್ಫ್ ಡಿಸೋಜಾ ಮುಲ್ಕಿ ಅವರು ನಿರ್ಗಮಿತ ಅಧ್ಯಕ್ಷರಾಗಿರುವರು ಮತ್ತು ಫಾ. ಮ್ಯಾಥ್ಯೂ ವಾಸ್ ಅವರು ಆಧ್ಯಾತ್ಮಿಕ ನಿರ್ದೇಶಕರಾಗಿ ಸೇವೆ ನೀಡಲಿರುವರು.
ಬಂಟ್ವಾಳದ ಕ್ಯಾಥೋಲಿಕ್ ಸಭಾದ ಅಧ್ಯಕ್ಷರಾಗಿದ್ದ ಸ್ಟ್ಯಾನಿ ಲೋಬೋ ಅವರು ಬಂಟ್ವಾಳ ಪರಿಸರದಲ್ಲಿ ತುಂಬಾ ಚಿರಪರಿಚಿತರು. ರಾಜು ಸ್ಟೀಪನ್ ಕೂಡ ಕಾಸರಗೋಡಿನಲ್ಲಿ ಕೊಂಕಣಿ ಭಾಷೆ ಮಾತನಾಡುವವರಲ್ಲಿ ಅಗ್ರಗಣ್ಯ ನಾಯಕರು. ಕಾಸರಗೋಡಿನಲ್ಲಿ ಐಸಿವೈಎಂನ ಅಧ್ಯಕ್ಷರಾಗಿದ್ದವರು. ಬೆಲಾ ಸಹಕಾರಿ ಸಂಘ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿದ್ದವರು.
ಹೊಸ ಪದಾಧಿಕಾರಿಗಳು ತಮ್ಮ ಅಧಿಕಾರಿ ಸ್ವೀಕರಿಸುವ ಮೊದಲು ಫಾ. ಮ್ಯಾಥ್ಯೂ ವಾಸ್ ಅವರು ಪ್ರಾರ್ಥನೆ ಮಾಡಿದರು. ನಿರ್ಗಮನ ಅಧ್ಯಕ್ಷ ರೋಲ್ಫಿ ಅವರು ಎಲ್ಲಾ ಪದಾಧಿಕಾರಿಗಳು ಹಾಗೂ ತನಗೆ ಸಹಕಾರಿ ನೀಡಿದವರಿಗೆ ಬೆಂಬಲ ಸೂಚಿಸಿದರು.