ಪುತ್ತೂರು: ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮೀಣ ಪತ್ರಿಕೋಧ್ಯಮದಲ್ಲಿ ತೊಡಗಿಕೊಂಡಿರುವ ಪತ್ರಕರ್ತರ ಜೀವನ ಭದ್ರತೆಗಾಗಿ ಪುತ್ತೂರು ತಾಲೂಕು ಪತ್ರಕರ್ತರ ಸಂಘ ತನ್ನ ಸದಸ್ಯರಿಗೆ 34ಲಕ್ಷ ರೂ. ಮೊತ್ತದ ಯೋಜನೆ ಘೋಷಿಸಿದೆ. ಈ ಯೋಜನೆ 2020ರ ಡಿ.14ರಿಂದ ಅಧಿಕೃತವಾಗಿ ಜಾರಿಗೊಳ್ಳಲಿದೆ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘ ಘೋಷಿಸಿಕೊಂಡಿದೆ.
ಡಿ.14ರಂದು ಪುತ್ತೂರು ಪತ್ರಿಕಾಭವನದಲ್ಲಿ ನಡೆದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ವಿಶೇಷ ಮಹಾಸಭೆಯಲ್ಲಿ ಮಾಹಿತಿ ನೀಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ಪತ್ರಕರ್ತರ ಸಾಮಾಜಿಕ ಮತ್ತು ಕುಟುಂಬ ಭದ್ರತಾ ಯೋಜನೆ ಎಂಬ ವಿನೂತನ ಯೋಜನೆಯಂತೆ ಪುತ್ತೂರು ತಾ. ಪತ್ರಕರ್ತರ ಸಂಘದ ಸದಸ್ಯತ್ವ ಹೊಂದಿರುವ ಸದಸ್ಯರ ಹೆಸರಿನಲ್ಲಿ ಪುತ್ತೂರು ತಾ. ಪತ್ರಕರ್ತರ ಸಂಘದ ನೇರ ಹಿಡಿತದಲ್ಲಿ ತಲಾ 25 ಸಾವಿರ ರೂ. ಬ್ಯಾಂಕ್ ಡೆಪೊಸಿಟ್ ಮಾಡಿ, ಸದಸ್ಯನಿಗೆ 60 ವರ್ಷ ವಯಸ್ಸು ದಾಟಿದ ನಂತರ ಡೆಪೊಸಿಟ್ನ ಪೂರ್ಣ ಪ್ರಮಾಣದ ಲಾಭಾಂಶ ದೊರೆಯಲಿದೆ. ಈ ಮೂಲಕ ಪುತ್ತೂರು ತಾಲೂಕು ಪತ್ರಕರ್ತರ ಸಂಘದ 23 ಸದಸ್ಯ ಪತ್ರಕರ್ತರು 34ಲಕ್ಷ ರೂ. ಮೊತ್ತದ ಫಲಾನುಭವವನ್ನು ಪಡೆಯಲಿದ್ದಾರೆ.
ಕರ್ತವ್ಯ ಸಂದರ್ಭ ಅಪಘಾತ, ಮಾರಣಾಂತಿಕ ದಾಳಿ- ಹಲ್ಲೆ ಘಟನೆ ಸಂಭವಿಸಿದ್ದಲ್ಲಿ ಚಿಕಿತ್ಸೆಗಾಗಿ ಸದಸ್ಯನ ಹೆಸರಲ್ಲಿರುವ ಡೆಪೊಸಿಟ್ ಆಧಾರದಲ್ಲಿ ಗರಿಷ್ಠ 20 ಸಾವಿರ ರೂ. ತುರ್ತು ವೈಯಕ್ತಿಕ ಸಾಲ ಪಡೆಯಲು ಅರ್ಹತೆ ನೀಡಲಾಗಿದೆ ಎಂದು ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ತಿಳಿಸಿದ್ದಾರೆ.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಐ.ಬಿ ಸಂದೀಪ್ ಕುಮಾರ್, ಜತೆ ಕಾರ್ಯದರ್ಶಿ ಅಜಿತ್, ಕೋಶಾಧಿಕಾರಿ ಕೃಷ್ಣಪ್ರಸಾಧ್ ಬಲ್ನಾಡ್, ಉಪ್ಯಾಕ್ಷರಾದ ಸರ್ವೇಶ್ ಕುಮಾರ್ ಉಪ್ಪಿನಂಗಡಿ, ಅನೀಶ್ ಕುಮಾರ್ ಮರಿಲ್ ಉಪಸ್ಥಿತರಿದ್ದರು.
ಈ ಯೋಜನೆಯ ಸಂಪೂರ್ಣ ವಿವರ ಕೆಳಗಿನಂತಿದೆ:
ಪತ್ರಕರ್ತರ ಸಾಮಾಜಿಕ ಮತ್ತು ಕುಟುಂಬ ಭದ್ರತಾ ಯೋಜನೆ
*ಯೋಜನೆಯ ವ್ಯಾಪ್ತಿ – ಪುತ್ತೂರು ತಾ. ಪತ್ರಕರ್ತರ ಸಂಘದ ಒಟ್ಟು 23 ಹಾಲಿ ಸದಸ್ಯರು ಮಾತ್ರ
*ಯೋಜನೆಯ ಫಲಾನುಭವದ ಒಟ್ಟು ಮೊತ್ತ- 34 ಲಕ್ಷ ರೂ.
*ಫಲಾನುಭವ ಪಡೆಯುವ ಕಾಲ- ಯೋಜನಾ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ಸದಸ್ಯನ 60ನೇ ವಯೋಮಾನ
*ಯೋಜನೆಗೆ ಆರ್ಥಿಕ ಕ್ರೋಡಿಕರಣ- ಪುತ್ತೂರು ತಾ. ಪತ್ರಕರ್ತರ ಸಂಘದ ನಿಧಿ ಮಾತ್ರ
ಯೋಜನೆಯ ಉದ್ದೇಶ:
(1) ಪುತ್ತೂರು ತಾ. ಪತ್ರಕರ್ತರ ಸಂಘದ ಸದಸ್ಯ/ ಪತ್ರಕರ್ತರ ಸಾಮಾಜಿಕ ಜೀವನ ಭದ್ರತೆ
(2) ಕರ್ತವ್ಯ ನಿರತ ಪುತ್ತೂರು ತಾ. ಪತ್ರಕರ್ತರ ಸಂಘದ ಸದಸ್ಯ/ ಪತ್ರಕರ್ತರ ಕುಟುಂಬ ಭದ್ರತೆ
(3) ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಪುತ್ತೂರು ತಾ. ಪತ್ರಕರ್ತರ ಸಂಘದಿಂದ ಸಹಕಾರ
(4) ಧನ್ಯತಾ ಭಾವದಿಂದ ಪತ್ರಿಕೋದ್ಯಮದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಾಗೂ ಗೌರವಯುತ ಕರ್ತವ್ಯ ನಿರ್ವಹಿಸಲು
ಪುತ್ತೂರು ತಾ. ಪತ್ರಕರ್ತರ ಸಂಘದ ಅಧ್ಯಕ್ಷನ ನೆಲೆಯಲ್ಲಿ ಪತ್ರಕರ್ತರ ಸಾಮಾಜಿಕ ಮತ್ತು ಕುಟುಂಬ ಭದ್ರತಾ ಯೋಜನೆ ಹಾಗೂ ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು 2020ರ ಡಿ.14ರಿಂದ ಜಾರಿಗೊಂಡಿದೆ ಎಂದು ಪುತ್ತೂರು ತಾ. ಪತ್ರಕರ್ತರ ಸಂಘದ ಕಾರ್ಯದರ್ಶಿ ಐ.ಬಿ ಸಂದೀಪ್ ಕುಮಾರ್ ಅವರಿಗೆ ಪುತ್ತೂರು ತಾ. ಪತ್ರಕರ್ತರ ಸಂಘದ ವಿಶೇಷ ಮಹಾಸಭೆಯಲ್ಲಿ ತಿಳಿಸಿರುತ್ತೇನೆ.