ಮಂಗಳೂರು: ಕೊಂಕಣಿ ನಾಟಕ ಸಭಾ(ಕೆಎಸ್ ಎಸ್) ನ ಉಪಾಧ್ಯಕ್ಷರಾಗಿ 2020-22ನೇ ಸಾಲಿಗೆ ಲಿಸ್ಟನ್ ಡಿ’ಸೋಜಾ ಅವರನ್ನು ಆಯ್ಕೆ ಮಾಡಲಾಗಿದೆ.
ಸೋಮವಾರ ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ಹೊಸದಾಗಿ ಆಯ್ಕೆಗೊಂಡಿರುವ ಪದಾಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಬಿಜೈಯ ಲಿಸ್ಟನ್ ಡಿ’ಸೋಜಾ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿಯಾಗಿ ಫ್ಲಾಯ್ಡ್ ಡಿ ಮೆಲ್ಲೊ, ಜಂಟಿ ಕಾರ್ಯದರ್ಶಿಯಾಗಿ ಗುರುಪುರ ಕೈಕಂಬದ ಪ್ರವೀಣ್ ರೋಡ್ರಿಗಸ್ ಮತ್ತು ಕೋಶಾಧಿಕಾರಿಯಾಗಿ ದೇರಬೈಲ್ ನ ಜೆರಾಲ್ಡ್ ಕೊನ್ಸೆಸ್ಸೊ ಅವರನ್ನು ಮರು ಆಯ್ಕೆ ಮಾಡಲಾಗಿದೆ. ಕೊಂಕಣಿ ನಾಟಕ ಸಭಾದ ಅಧ್ಯಕ್ಷ ಫಾ. ಪೌಲ್ ಮೆಲ್ವಿನ್ ಡಿ’ಸೋಜಾ ಅವರು ಚುನಾವಣೆಯನ್ನು ನಡೆಸಿದರು.