ಮಂಗಳೂರು: ವಿಶ್ವ ಬಂಟ್ಸ್ ಫೌಂಡೇಶನ್ ನ ಕಾರ್ಯಾಧ್ಯಕ್ಷರಾಗಿ ಎ.ಜೆ.ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್ಸ್ ನ ಡಾ. ಎ.ಜೆ.ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿರುವರು.
ಇತ್ತೀಚೆಗೆ ನಡೆದ ಟ್ರಸ್ಟ್ ನ ಮಂಡಳಿಯ ಸಭೆಯಲ್ಲಿ ಎ.ಜೆ.ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಕೆ. ಸಚ್ಚಿದಾನಂದ ಹೆಗ್ಡೆ ಅವರು ಉಪ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವರು. ಇತರ ಪದಾಧಿಕಾರಿಗಳೆಂದರೆ ಡಾ. ಎಂ. ಶಾಂತಾರಾಮ್ ಶೆಟ್ಟಿ, ಪುಣೆ ಉಪಕಾರ್ಯಾಧಕ್ಷೆ ಆಗಿ ಕುಶಾಲ ಎಸ್. ಹೆಗ್ಡೆ ಮತ್ತು ರೀತಾ ಶೆಟ್ಟಿ ದೆಹಲಿಯ ಹೊಸ ಉಪ ಕಾರ್ಯಾಧಕ್ಷೆಯಾಗಿ ನೇಮಕವಾಗಿರುವರು.
ಕಾರ್ಯದರ್ಶಿಯಾಗಿ ಸಿಎ ಸುಧೀರ್ ಶೆಟ್ಟಿ ವೈ, ಕೋಶಾಧಿಕಾರಿಯಾಗಿ ಸಿಎ ಪಿ. ರಘುಚಂದ್ರ ಶೆಟ್ಟಿ ಯೋಜನಾ ನಿರ್ದೇಶಕರಾಗಿ ಡಾ. ಸಂಜೀವ ರೈ ಅವರು ಆಯ್ಕೆ ಆಗಿರುವರು.
ಈ ಟ್ರಸ್ಟ್ ನ್ನು 1995ರಲ್ಲಿ ಸ್ಥಾಪಿಸಲಾಗಿದ್ದು, ಸುಮಾರು 900 ಮಂದಿ ಸದಸ್ಯರು ವಿವಿಧ ಕ್ಷೇತ್ರದಿಂದ ವಿಶ್ವದ ವಿವಿಧ ಭಾಗದಿಂದ ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.