ಮಂಗಳೂರು: ರೋಟರಿ ಕ್ಲಬ್ ಮಂಗಳೂರ ಸಿಟಿ ಸಂಸ್ಥೆಯ ಸಮುದಾಯ ಸೇವಾ ಯೋಜನೆ ಅಂಗವಾಗಿ ಹಾಗು ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಅಂಗವಾಗಿ ಮೂಡುಶೆಡ್ಡೆ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಆರೋಗ್ಯವನ್ನು ಪರಿಗಣಿಸಿ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಉದಾರ ದಾನದ ರೂಪದಲ್ಲಿ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಡಾ. ಅನಿಲ್ ಕುಮಾರ್ ಈ ಯಂತ್ರವು ವಿದ್ಯಾರ್ಥಿ ವಿದ್ಯಾರ್ಥಿನಿಗಳಿಗೆ ಶುದ್ಧ ಮತ್ತು ಸುರಕ್ಷಿತ ನೀರನ್ನು ಒದಗಿಸಲು ಸಹಾಯ ಮಾಡುತ್ತದೆ ಮತ್ತು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುತ್ತದೆ ಎಂದು ನುಡಿದು ಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಸುಬ್ರಾಯ ಪೈಯವರಿಗೆ ಇತ್ತೀಚೆಗೆ ಜರಗಿದ ಸರಳ ಸಮಾರಂಭದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ರೋ. ರಂಜನ್, ಹಿರಿಯ ಸದಸ್ಯ ಡಾ. ರೋ. ಎಸ್.ಆರ್. ನಾಯಕ್, ಉಪಾಧ್ಯಕ್ಷ ರೋ. ಪ್ರಶಾಂತ್ ರೈ, ಕಾರ್ಯದರ್ಶಿ ಕ್ಯಾನುಟ್ ಪಿಂಟೋ ಉಪಸ್ಥಿತರಿದ್ದರು. ಶಾಲೆಯ ಪರವಾಗಿ ಶಿಕ್ಷಕಿಯರಾದ ವೆರೋನಿಕಾ ರೊಡ್ರಿಗಸ್, ಗೀತಾ, ವಂದನ ಕೆ. ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮೀರಾ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಗಳು ಉಪಸ್ಥಿತರಿದ್ದರು.