News Kannada
Sunday, February 05 2023

ಕರಾವಳಿ

ಮನೆ ಅಂಗಳದಿಂದಲೇ ಬಾಲಕನ ಅಪಹರಣ

Photo Credit :

ಮನೆ ಅಂಗಳದಿಂದಲೇ ಬಾಲಕನ ಅಪಹರಣ

ಬೆಳ್ತಂಗಡಿ: ಹಾಡಹಗಲೇ ಮನೆಯೊಂದರಿಂದಲೇ ಬಾಲಕನೋರ್ವನ ಅಪಹರಣ ನಡೆದ ವಿದ್ಯಮಾನ‌‌ ಉಜಿರೆಯಲ್ಲಿ‌ ನಡೆದಿದೆ. ಇದರಿಂದ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿದೆ.

ಉಜಿರೆ ಉದ್ಯಮಿ ರಥಬೀದಿ ನಿವಾಸಿಯೋರ್ವರ (8) ವರ್ಷದ ಮಗುವನ್ನು ಮನೆಮುಂಭಾಗ ಆಟವಾಡುತ್ತಿದ್ದ ‌ವೇಳೆ ಅಪರಿಚಿತರು ಕಾರಿನಲ್ಲಿ ಅಪಹರಣ ಮಾಡಿದ್ದು, ಮನೆ ಮಂದಿ ಕಾರಿನ ಬಳಿ ಬಂದಂತೆ ಪರಾರಿಯಾಗಿದ್ದಾರೆ.

ಬಿಳಿ ಇಂಡಿಕಾ ಕಾರಿನಲ್ಲಿ ನಾಲ್ವರು ಮನೆಮುಂದೆ 10 ನಿಮಿಷದಿಂದ ನಿಂತಿರುವುದನ್ನು ಮನೆ ಮಂದಿ ಗಮನಿಸಿದ್ದರು. ಬಳಿಕ ಸಂಜೆ 6.30 ರ ಸುಮಾರಿಗೆ ಅಪಹರಣ ನಡೆಸಿ ಚಾರ್ಮಾಡಿ ಅಥವಾ ಧರ್ಮಸ್ಥಳ ಮಾರ್ಗವಾಗಿ ಸಂಚರಿಸಿರುವ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಮೊಬೈಲ್ ನೆಟ್ವರ್ಕ್ ಒಂದು ಬಾರಿ ಹಾಸನ, ಮತ್ತೊಮ್ಮೆ ಆಲ್ದೂರು ದಾಟಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ತಕ್ಷಣ ಮುಂಡಾಜೆ ಹಾಗೂ ಕೊಟ್ಟಿಗೆ ಹಾರದಲ್ಲಿ ನಾಕಾಬಂದಿ ವಿಧಿಸಲಾಗಿತ್ತು. ಅಪಹರಣಕಾರರ ಕರೆ ಬಂದಿದ್ದು, ಹಿಂದಿಯಲ್ಲಿ ವ್ಯವಹರಿಸಿದ ಕುರಿತು ಮಾಹಿತಿ ಲಭ್ಯವಾಗಿದೆ. ಮನೆಮಂದಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಂಟ್ವಾಳ ಡಿವೈಎಸ್ ಪಿ ವೆಲೆಂಟೈನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್, ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ಕುಮಾರ್ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ.

See also  ಭಾವನೆಗಳನ್ನು ಪೋಷಿಸಿ ಭಾಷೆ ಬೆಳೆಸಿ: ಅಂಗಾರ ಕರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು