News Kannada
Tuesday, January 31 2023

ಕರಾವಳಿ

ಪೊಲೀಸ್ ಸಿಬ್ಬಂದಿ ಕೊಲೆ ಯತ್ನ ಖಂಡಿಸಿ ಡಿ. 23 ಕ್ಕೆ ಪ್ರತಿಭಟನೆ: ವಿ. ಹಿಂ. ಪ.

Photo Credit :

ಪೊಲೀಸ್ ಸಿಬ್ಬಂದಿ ಕೊಲೆ ಯತ್ನ ಖಂಡಿಸಿ ಡಿ. 23 ಕ್ಕೆ ಪ್ರತಿಭಟನೆ: ವಿ. ಹಿಂ. ಪ.

ಮಂಗಳೂರು: ಗೋಡೆಬರಹ ಪ್ರಕರಣವನ್ನು NIA ( ರಾಷ್ಟ್ರೀಯ ತನಿಖಾದಳ ) ತನಿಖೆಗೆ ಕೊಡಬೇಕೆಂದು ಆಗ್ರಹಿಸಿ ಹಾಗೂ ಪೊಲೀಸ್ ಸಿಬ್ಬಂಧಿ ಮೇಲೆ ಕೊಲೆ ಯತ್ನವನ್ನು ಖಂಡಿಸಿ ಡಿಸೆಂಬರ್ 23 ಕ್ಕೆ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ.

ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹದ ಮುಖಾಂತರ ಲಷ್ಕರ್ ತೋಯಿಬಾ ಉಗ್ರ ಸಂಘಟನೆಯನ್ನು ಬೆಂಬಲಿಸಿ ಮತ್ತು ಮುಸ್ಲಿಂ ವಿರೋಧಿಗಳನ್ನು ಹತ್ಯೆ ಮಾಡುವುದಾಗಿ ಗೋಡೆ ಬರಹದ ಮುಖಾಂತರ ಇಲ್ಲಿ ಭಯೋತ್ಪಾದಕ ಚಟುವಟಿಕೆ ಪ್ರಾರಂಭ ಮಾಡಲು ಪ್ರಯತ್ನಿಸುತ್ತಿರುವುದ ವಿಷಯ ಹೊರಬಂದಿದ್ದು, ಇದರ ಹಿಂದೆ ಭಯೋತ್ಪಾದಕರ ನಂಟು ಇರುವುದು ಸಾಧ್ಯತೆ ಇದೆ ಎಂದು ಪೊಲೀಸರು ಊಹಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ 3 ಜನರನ್ನು ಬಂಧಿಸಿದ್ದು ಅವರಿಂದ ಜಾಗತಿಕ ಭಯೋತ್ಪಾದಕ ಜಮೈಕಾ ಮೂಲದ ಶೇಕ್ ಅಬ್ದುಲ್ಲಾ ಫೈಝಲ್ ಪ್ರಚೋದನಕಾರಿ ಭಾಷಣ ಮತ್ತು ಉಗ್ರರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಸಿಕ್ಕಿರುವುದು ಸಾಬೀತಾಗಿದ್ದು , ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಪ್ರಕರಣವನ್ನು ಬೇಧಿಸಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ಪೊಲೀಸ್ ಕಮಿಷನರ್ ಮತ್ತು ಸಿಬ್ಬಂದಿಗಳಿಗೆ ವಿಶ್ವಹಿಂದೂ ಪರಿಷತ್ ಶ್ಲಾಘಿಸುತ್ತದೆ ಮತ್ತು ಅಭಿನಂದಿಸುತ್ತದೆ. ಹಾಗೆಯೇ ಈ ಪ್ರಕರಣವನ್ನು ಗಮನಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಬೇರೂರಿರುವ ಸಂಶಯ ವ್ಯಕ್ತವಾಗಿದ್ದು ಈಗಾಗಲೇ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು NIA ತನಿಖೆಗೆ ಶಿಫಾರಸ್ಸು ಮಾಡಲು ವಿನಂತಿಸಿದ್ದೇವೆ . ಈ ಪ್ರಕರಣವನ್ನು ಶೀಘ್ರವಾಗಿ NIA ಯವರಿಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿ ಮತ್ತು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆಯನ್ನು ಖಂಡಿಸಿ ಡಿಸೆಂಬರ್ 23 ಬುಧವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆಗೆ ಕರೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಕರ್ತವ್ಯ ನಿರತ ಪೊಲೀಸ್ ಸಿಬ್ಬಂಧಿ ಮೇಲೆ ಕೊಲೆ ಯತ್ನಕ್ಕೆ ಖಂಡನೆ – ಕಠಿಣ ಕ್ರಮ ಕೈಗೊಳ್ಳಲು ಆಗ್ರಹ ವಿಶ್ವ ಹಿಂದು ಪರಿಷದ್ ಪೊಲೀಸ್ ಸಿಬ್ಬಂಧಿಯಾದ ಗಣೇಶ್ ಕಾಮತ್ ರವರಿಗೆ ಹಾಡು ಹಗಲೇ ತಾಳುವರಿನಿಂದ ಹಲ್ಲೆ ನಡೆಸಿ ಕೊಲೆ ನಡೆಸಲು ಪ್ರಯತಿಸಿದ್ದು , ವಿಶ್ವ ಹಿಂದು ಪರಿಷದ್ ಖಂಡಿಸುತ್ತದೆ ಕಳೆದ ವರ್ಷ ಇದೆ ಸಮಯದಲ್ಲಿ NRC ಪ್ರತಿಭಟನೆ ಹೆಸರಿನಲ್ಲಿ ಪ್ರತಿಭಟನೆ ನಡೆಸುವಾಗ ಪೊಲೀಸರ ಮೇಲೆ ಕಲ್ಲು ಎಸೆತ , ಹಲ್ಲೆ ಪೊಲೀಸ್ ಸ್ಟೇಷನ್ ಗೆ ಬೆಂಕಿ ಹಚ್ಚಲು ಪ್ರಯತ್ನ ಪಟ್ಟಿದ್ದರು . ಅದೇ ಕಾರ್ಯವನ್ನು ಪುನರಾವರ್ತಿಸಲು ಗಲಭೆ ಸಂಚು ರೂಪಿಸಲು ಪ್ರಯತ್ನಿಸಿದ್ದಾರೆ . ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ

See also  ಗ್ರಾ.ಪಂ.ಸದಸ್ಯನ ಜವಾಬ್ದಾರಿ ಮಹತ್ತರವಾದುದು- ಕೋಟ ಶ್ರೀನಿವಾಸ ಪೂಜಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು