News Kannada
Wednesday, February 08 2023

ಕರಾವಳಿ

ಅಪಹರಣಕಾರರಿಂದ ಬಾಲಕನ ಬಿಡುಗಡೆಗೊಳಿಸಿದ ಪೊಲೀಸರು

Photo Credit :

ಅಪಹರಣಕಾರರಿಂದ ಬಾಲಕನ ಬಿಡುಗಡೆಗೊಳಿಸಿದ ಪೊಲೀಸರು

ಮಂಗಳೂರು: ಬೆಳ್ತಂಗಡಿಯ ಉಜಿರೆ ಉದ್ಯಮಿ ರಥಬೀದಿ ನಿವಾಸಿ ಬಿಜೋಯ್ ಎಂಬವರ 8 ವರ್ಷದ ಮಗನ ಅಪಹರಣ ಪ್ರಕರಣವು ಸುಖಾಂತ್ಯವಾಗಿದೆ.

ಗುರುವಾರ ಬಾಲಕನನ್ನು ಅಪಹರಣಕಾರರು ಆಟವಾಡುತ್ತಿದ್ದ ವೇಳೆ ಕಾರಿನಲ್ಲಿ ಅಪಹರಿಸಿದ್ದರು. ಇದರ ಬಗ್ಗೆ ಬಾಲಕನ ಅಜ್ಜ ಎ.ಕೆ. ಶಿವನ್ ಅವರು ದೂರು ನೀಡಿದ್ದರು.

ಶನಿವಾರ ಬೆಳಗ್ಗಿನ ಜಾವ ಕೋಲಾರದ ಮಾಲೂರಿನಲ್ಲಿ ಅಪಹರಣಕಾರರನ್ನು ಬಂಧಿಸಿದ ಪೊಲೀಸರು, ಬಾಲಕನನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿರುವರು.

ಉಜಿರೆ ಮತ್ತು ಮಾಲೂರಿನ ಮಾಸ್ತಿ ಠಾಣೆ ಪೊಲೀಶರು ಆರೋಪಿಗಳಿರುವ ಮನೆಯನ್ನು ಪತ್ತೆ ಮಾಡಿ ಕಾರ್ಯಾಚರಣೆ ನಡೆಸಿರುವರು. ಆರೋಪಿಗಳ ಮೊಬೈಲ್ ಕರೆ ಆಧಾರದಲ್ಲಿ ಕಾರ್ಯಾಚರಣೆ ನಡೆದಿದೆ.

ಮಾಲೂರಿನ ಕೊರ್ನಹೊಸಹಳ್ಳಿಯ ಮಂಜುನಾಥ್ ಎಂಬಾತನ ಮನೆಗೆ ಅಪಹರಣಕಾರರು ತೆರಳಿದ ಮಾಹಿತಿ ಪಡೆದ ಉಜಿರೆ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ನೆರವು ಕೋರಿ ಆರೋಪಿಗಳ ಬಂಧಿಸಲು ಯಶಸ್ವಿಯಾಗಿರುವರು.

ಮಂಡ್ಯದ ಗಂಗಾಧರ್, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕೋಮಲ್, ಕೊರ್ನಹೊಸಹಳ್ಳಿಯ ಮಂಜುನಾಥ್ ಸೇರಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿರುವರು.

See also  ಅಡಿಕೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಕಳವುಗೈದ ಕಳ್ಳರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು