ಧರ್ಮಸ್ಥಳ: ಧರ್ಮಸ್ಥಳದಲ್ಲಿ ಕಾರಿನ ಹಿಂಭಾಗದ ರಚನೆಯೊಂದಿಗೆ ಮುಂದೆ ಎರಡು ಎತ್ತುಗಳನ್ನು ಕಟ್ಟಿರುವ ಬಂಡಿ ಇದೆ. ಎತ್ತಿನ ಬಂಡಿಗಿಂತ ಭಿನ್ನವಾಗಿರುವ ಇದರಲ್ಲಿ ರೈತನೊಬ್ಬ ಕುಳಿತು ಅದನ್ನು ಚಲಾಯಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಮೊದಲೇ ಒಮ್ಮೆ ಧರ್ಮಸ್ಥಳದ ಲಕ್ಷ ದೀಪೋತ್ಸವದ ವೇಳೆ ಭಾರೀ ಸುದ್ದಿ ಮಾಡಿದ್ದ ಎತ್ತಿನ ಬಂಡಿ ಕಾರು ಇದಾಗಿದ್ದು, ಮತ್ತೊಮ್ಮೆ ಈಗ ಸದ್ದು ಮಾಡುತ್ತಿದೆ.
ಮಹೀಂದ್ರ ಆಯಂಡ್ ಮಹೀಂದ್ರ ಕಂಪನಿಯ ಮುಖ್ಯಸ್ಥ ಆನಂದ ಮಹೀಂದ್ರ ಅವರು ಈ ಎತ್ತಿನ ಬಂಡಿ ಕಾರಿನ ವಿಡಿಯೋ ಜೊತೆತೆ ಟ್ವೀಟ್ ಮಾಡಿದ್ದು, ಅದರೊಂದಿಗೆ “ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ ಹಾಗೂ ಎಲೋನ್ ಮಸ್ಕ್ ಗೆ ಕೂಡ ಇದಕ್ಕಿಂದ ಕಡಿಮೆ ವೆಚ್ಚದಲ್ಲಿ ಇಂಧನದ ಕಾರನ್ನು ತಯಾರಿಸಲು ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ” ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋಗೆ ಟ್ವಿಟರ್ ಟ್ರೆಂಡಿಂಗ್ ಆಗಿದ್ದು ಸಾವಿರಾರು ಜನರು ಲೈಕ್ ಮಾಡಿದ್ದಲ್ಲದೆ, 49 ಸಾವಿರಕ್ಕೂ ಅಧಿಕ ರೀಟ್ವೀಟ್’ ಆಗಿರುವುದು ಎಲ್ಲರ ಗಮನ ಸೆಳೆದಿದೆ.