ಮಂಗಳೂರು: ಬಾಲ ಯೇಸುವಿನ ಪುಣ್ಯಕ್ಷೇತ್ರವಾದ ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್ನಲ್ಲಿ ವಾರ್ಷಿಕ ಮಹೋತ್ಸವವನ್ನು ಜನವರಿ 14, 15 ಹಾಗೂ 16ರಂದು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10.30 ಘಂಟೆಗೆ ಹಾಗೂ ಸಂಜೆ 6 ಘಂಟೆಗೆ ಸಾಂಭ್ರಮಿಕ ಬಲಿಪೂಜೆ ನಡೆಯಲಿದ್ದು, ಇದರ ಸಲುವಾಗಿ ಜನವರಿ 14ರಂದು ವಂದನೀಯರಾದಂತ ರೊನಾಲ್ಡ್ ಸೆರಾವೊ, ರೆಕ್ಟರ್, ಜೆಪ್ಪು ಸೆಮಿನರಿ ಪಾಲ್ಗೊಳ್ಳಲಿದ್ದಾರೆ. ಅಂತೆಯೆ ಈ ಕಾರ್ಯಕ್ರಮ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೊ ಅವರ ಅಧ್ಯಕ್ಷತೆಯಲ್ಲಿ ಮೂಡಿಬರಲಿದೆ. ಅಂತೆಯೇ ಜನವರಿ 15ರಂದು ಮಂಗಳೂರು ಧರ್ಮಾಪ್ರಾಂತ್ಯದ ಧರ್ಮಾಧ್ಯಕ್ಷರಾದ ಪೀಟರ್ ಪಾವ್ಲ್ ಸಲ್ದಾನ್ಹಾ ಹಾಗೂ ಸಂಜೆ 6 ಘಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ಜೆರಾಲ್ ಮ್ಯಾಕ್ಸಿಮ್ ನೊರೊನ್ಹಾ ಅವರ ಅಧ್ಯಕ್ಷತೆಯಲಿ ನಡೆಯಲಿದೆ. ಜನವರಿ 16ರಂದು ಬೆಳಿಗ್ಗೆ ಪಾವ್ಲ್ ಮೆಲ್ವಿನ್ಡಿ ಸೋಜಾ ಹಾಗೂ ಸಂಜೆ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತಧರ್ಮಾಧ್ಯಕ್ಶರಾದ ಅಲೋಶಿಯಸ್ ಪಾವ್ಲ್ ಡಿ ಸೋಜಾ ಇವರ ಅಧ್ಯಕ್ಷತೆಯಲ್ಲಿ ನರವೇರಲಿದೆ.
ಈ ಎಲ್ಲಾ ಬಲಿಪೂಜೆಗಳ ವೇಳಾಪಟ್ಟಿ ಹೀಗಿದೆ: ಬೆಳಿಗ್ಗೆ 6.00(ಕೊಂಕಣಿ), 7.30(ಇಂಗ್ಲೀಶ್), 9.00(ಕೊಂಕಣಿ), 1.00(ಕನ್ನಡ). ಅದೇ ದಿನ 10.30ಘಂಟೆಗೆ ವ್ಯಾಧಿಷ್ಟರಿಗಾಗಿ ವಿಶೇಷ ಬಲಿಪೂಜೆ ಕೊಂಕಣಿಯಲ್ಲಿ ಅರ್ಪಿಸಲಾಗುವುದು. ಎರಡನೆಯ ದಿನ – ಬೆಳಿಗ್ಗೆ 6.30, 7.30, 9.00ಘಂಟೆಗೆಕೊಂಕಣಿಯಲ್ಲಿ, 10.30ಗೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ 1.00ಘಂಟೆಗೆಮಲಯಾಳಂ ಪೂಜೆ ಅರ್ಪಿಸಲಾಗುವುದು. ಮೂರನೇ ದಿನ – ಜನವರಿ 16: ಬೆಳಿಗ್ಗೆ 6.00(ಕೊಂಕಣಿ), 7.30(ಇಂಗ್ಲಿಶ್), 9.00(ಕೊಂಕಣಿ), 10.30(ಕೊಂಕಣಿ) ಹಾಗೂ 1.00(ಕೊಂಕಣಿ) ಬಲಿಪೂಜೆಗಳು ನೆರವೇರುವುವು. ಸಂಜೆ 6.00ಘಂಟೆಗೆ ಹಬ್ಬದ ಸಮಾರೋಪ ಬಲಿಪೂಜೆ ಅರ್ಪಿಸಲಾಗುವುದು.
ಈ ಮೂರು ದಿನಗಳ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ – ನೊವೇನಾ ಪ್ರಾರ್ಥನೆ ಜನವರಿ 5 ರಿಂದ ಜನವರಿ 13 ರ ವರೆಗೆ ನಡೆಯುವುದು. ಆ ದಿನಗಳಲ್ಲಿ ಪ್ರತಿದಿನ 9 ಬಲಿಪೂಜೆಗಳು ನಡೆಯುವುವು. ಬೆಳಿಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1.00 ಘಂಟೆಗೆಕೊಂಕಣಿ ಭಾಷೆಯಲ್ಲಿ ಸಂಜೆ 4.00 ಘಂಟೆಗೆ ಮಲಯಾಳಂ, 5.00 ಘಂಟೆಗೆ ಇಂಗ್ಲೀóಷ್ ಹಾಗೂ 7.30 ಘಂಟೆಗೆ ಕನ್ನಡದಲ್ಲಿ ಬಲಿಪೂಜೆಯು ಪುಣ್ಯಕ್ಷೇತ್ರದೊಳಗೆ ನಡೆಯುವುದು. ಈ ನವದಿನಗಳ ಪ್ರಮುಖ ಬಲಿಪೂಜೆಯು ಸಂಜೆಯ 6.00 ಘಂಟೆಗೆತೆರೆದ ಮೈದಾನದಲ್ಲಿ ಅರ್ಪಿಸಲಾಗುವುದು.
ಈ ವಾರ್ಷಿಕ ಮಹೋತ್ಸವಕ್ಕೆ ಜನವರಿ 4 ರಂದು ವಿಧ್ಯುಕ್ತ ಚಾಲನೆಯನ್ನು ನೀಡಲಾಗುವುದು. ಅದೇ ದಿನ ಸಂಜೆ 5.30 ಘಂಟೆಗೆ ಧ್ವಜರೋಹಣ ಕಾರ್ಯಕ್ರಮ, ಆನಂತರ ಬಲಿಪೂಜೆ ಅರ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಈ ಎಲ್ಲಾ ದಿನಗಳು ಕೋವಿಡ್ 19 ಪಿಡುಗಿನ ಬಗ್ಗೆ ನೀಡಿರುವ ಸರ್ಕಾರದ ಸೂಚನೆಗಳ ಪ್ರಕಾರಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕೇತ್ರಕ್ಕೆ ಆಗಮಿಸುವ ಎಲ್ಲಾ ಯಾತ್ರಾರ್ಥಿಗಳು ಹಾಗೂ ಭಕ್ತಾದಿಗಳು ಮಾಸ್ಕ್ಧರಿಸುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದ್ದು ಈ ನಿಟ್ಟಿನಲ್ಲಿ ಪುಣ್ಯಕ್ಶೇತ್ರವುಗಿರಿಜಾ ಫಾರ್ಮಾಸ್ಯೂಟಿಕಲ್ ಸಂಸ್ಥೆಯಜತೆಗೂಡಿ ನಿರಂತರ ಸೇವೆಯನ್ನು ನೀಡುವುದು ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.