ಮಂಗಳೂರು: 22 ವರ್ಷದ ಯುವತಿಯೊಬ್ಬಳು ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ದಕ್ಷಿಣಕನ್ನಡದ ಕಡಪ ತಾಲೂಕಿನ ನೆಲ್ಯಾಡಿ ಗ್ರಾಮದಲ್ಲಿ ನಡೆದಿದೆ.
ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದ್ದು, ವಿ.ಜೆ.ಜೋಸೆಫ್ರ ಪುತ್ರಿ ನವ್ಯಾ ಜೋಸೆಫ್ ಸೀಮೆಎಣ್ಣೆ ಸುರಿದುಕೊಂಡು ಸಜೀವನ ದಹನ ಮಾಡಿಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಗ್ರಾಮದ ನಿವಾಸಿ ವಿ.ಜೆ.ಜೋಸೆಫ್ರ ಪುತ್ರಿ ನವ್ಯಾ ಜೋಸೆಫ್ ಬೆಂಕಿ ಹಚ್ಚಿಕೊಂಡು ಸಜೀವ ದಹನ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೃತ ನವ್ಯಾ ಬಿಬಿಎ ಪದವೀಧರೆ. ಓದು ಮುಗಿದ ಬಳಿಕ ಮನೆಯಲ್ಲೇ ಇದ್ದ ನವ್ಯಾ, ಈ ಕೃತ್ಯವನ್ನು ಮಾಡಿಕೊಂಡಿದ್ದಾಳೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು ಈವರೆಗೂ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.