ಮಂಗಳೂರು: ಕೇರಳದಲ್ಲಿ ಹಕ್ಕಿಜ್ವರ ಹೆಚ್ಚಾಗಿ ಹರಡುತ್ತಿರುವ ಕಾರಣದಿಂದ ಕೇರಳದಿಂದ ಕೋಳಿ ಮತ್ತು ಅವುಗಳ ಉತ್ಪನ್ನಗಳನ್ನು ಸಾಗಿಸುವುದರ ಹಾಗೂ ಮಾರಾಟ ಮಾಡುವುದರ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಕೋಳಿ ಹಾಗೂ ಅದರ ಉತ್ಪನ್ನಗಳಾದ ಮೊಟ್ಟೆಯನ್ನು ಪಕ್ಕದ ರಾಜ್ಯವಾಗಿರುವ ಕೇರಳದ ತರುವಂತಿಲ್ಲ ಎಂದು ನಿಷೇಧ ಹೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಗಡಿಯುದ್ದಕ್ಕೂ ಜಿಲ್ಲೆಗೆ ಪ್ರವೇಶಿಸದಂತೆ ತಡೆಯಲಾಗದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಪಕ್ಷಿ ಜ್ವರ ಹರಡುವ ಭೀತಿಯನ್ನು ನಿವಾರಿಸುವ ನಿಟ್ಟಿನಿಂದ, ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆ ಕೇಂದ್ರಗಳು ಮತ್ತು ಕೋಳಿ ಉತ್ಪನ್ನಗಳು ರೋಗದಿಂದ ಪ್ರಭಾವಿತವಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು.