News Kannada
Tuesday, October 04 2022

ಕರಾವಳಿ

ರಾಷ್ಟ್ರೀಯ ಯುವ ದಿನಾಚರಣೆ - 1 min read

Photo Credit :

ರಾಷ್ಟ್ರೀಯ ಯುವ ದಿನಾಚರಣೆ

 ಮಂಗಳೂರು: ಸ್ವಾಮಿ ವಿವೇಕಾನಂದರು ಯುವಕರ ಪಾಲಿನ ಹೆಮ್ಮೆಯ ಮತ್ತು ಸ್ಪೂರ್ತಿಯ ಚಿಲುಮೆ ಅವರ ಸಂದೇಶಗಳೂ ಎಂದೆಂದಿಗು ಪ್ರಸ್ತುತ. ಅವರ ಜನ್ಮದಿನದಂದು ಈ ಪ್ರಶ್ನೆಯನ್ನು ಮತ್ತೊಮ್ಮೆ ಕೇಳುವುದು ಅರ್ಥಪೂರ್ಣ ಯಾಕೆಂದರೆ ಅವರ ಜನ್ಮದಿನವೇ “ರಾಷ್ಟ್ರೀಯ ಯುವ ದಿನ”. ರಾಷ್ಟ್ರೀಯ ಸಾಮಜಿಕ ಸೇವಾ ಘಟಕ, ಯೆನೆಪೋಯಾ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ದೇರಳಕಟ್ಟೆ, ಮಂಗಳೂರು ಜ.15ರಂದು ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಕಾಲೇಜು ಮಟ್ಟದ ಯುವ ಸಂಸತ್ತು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಶಿಕ್ಷಣ, ಯುವ ವ್ಯವಹಾರಗಳು, ಆರೋಗ್ಯ, ಅರ್ಥಶಾಸ್ತ್ರ ಮತ್ತು ಮಾಹಿತಿ ತಂತ್ರಜ್ಞಾನ ವಿಷಯಗಳ ಮೇಲೆ ಬಿ.ಫಾರ್ಮ ಮತ್ತು ಡಿ.ಫಾರ್ಮ ವಿದ್ಯಾರ್ಥಿಗಳು ಚರ್ಚಿಸಿದರು. ಯುವರಲ್ಲಿ ನಾಯಕತ್ವ, ಇತರರ ದೃಷ್ಟಿಕೋನಗಳನ್ನು ಸಹಿಸಿವುದು, ಮೂಲ ಮತ್ತು ನವೀನ ಚಿಂತನೆ, ಮುಂತಾದ ಸಕಾರಾತ್ಮಕ ಗುಣಗಳ ಬೆಳವಣಿಗೆಗೆ ಸಹಾಯ ಮಾಡುವುದು ಈ  ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಮೊದಲು ತಂಡಗಳು ತಮ್ಮ ಅಭಿಪ್ರಾಯಗಳನ್ನು ದಿನದ ಸ್ಪೀಕರ್ ಶ್ರೀ ಶೆಮ್ಜಾದ್ ಮತ್ತು ಮಿಸ್. ಡೈಸಿ ಡಿಸೋಜ ಅವರ ಮುಂದೆ ವಿನಿಮಯ ಮಾಡಿದರು, ಅನಂತರ ಇತರ ವಿಷಯಗಳ ಕುರಿತು ಚರ್ಚಿಸಲು ತಂಡಗಳಿಗೆ ಅವಕಾಶ ನೀಡಲಾಯಿತು. ಅಂತಿಮವಾಗಿ ಪ್ರಶ್ನೋತ್ತರ ಅಧಿವೇಶನದಲ್ಲಿ ತಂಡಗಳಿಗೆ ಪ್ರೇಕ್ಷಕರು ಪ್ರಶ್ನೆಗಳನ್ನು ಕೇಳಿದರು.

ಶ್ರೀ ಮಿಸ್ಬ ಬಿ.ಫಾರ್ಮ ಅವರು ಆರಂಭದಲ್ಲಿ ಪಾರ್ಥನೆಯನ್ನು ಹೇಳಿದರು. ಪ್ರಾಂಶುಪಾಲರು ಡಾ. ಮೊಹಮ್ಮದ್ ಗುಲ್ಜಾರ್ ಅಹ್ಮದ್ ಅವರು ಸಭೆಯನ್ನು ಸ್ವಾಗತಿಸಿದರು. ಶ್ರೀಮತಿ ಶಮ ಮರಿಯಮ್ ಡಿ.ಫಾರ್ಮ ವಿದ್ಯಾರ್ಥಿ ದಿನದ ಮಹತ್ವವನ್ನು ವಿವರಿಸಿದರು. ದಿನದ ಸ್ಪೀಕರ್, ಪ್ರಾಂಶುಪಾಲರು ಮತ್ತು ಎನ್.ಎಸ್.ಎಸ್. ಪ್ರೋಂಗ್ರಾಂ ಆಫೀಸರ್ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು, ನಂತರ ಶ್ರೀಮತಿ ಮುಸ್ಕಾನ್ ಅಸ್ಲಂ ಡಿ.ಫಾರ್ಮ ವಿದ್ಯಾರ್ಥಿ ಧನ್ಯವಾದ ಸಮರ್ಪಿಸಿದರು.

 

See also  ಕೊಲೆಯಾದ ಸ್ಥಿತಿಯಲ್ಲಿ ಮಹಿಳೆ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು