News Kannada
Thursday, October 06 2022

ಕರಾವಳಿ

ಹತ್ತಿ ಬೆಳೆಯ ಉಳಿಕೆಗಳ ನಿರ್ವಹಣೆಗಾಗಿ ಕಾಟನ್ ಶ್ರೆಡ್ಡರ್ ಬಳಕೆಯ ಪ್ರಾತ್ಯಕ್ಷಿಕೆ - 1 min read

Photo Credit :

 ಹತ್ತಿ ಬೆಳೆಯ ಉಳಿಕೆಗಳ ನಿರ್ವಹಣೆಗಾಗಿ ಕಾಟನ್ ಶ್ರೆಡ್ಡರ್ ಬಳಕೆಯ ಪ್ರಾತ್ಯಕ್ಷಿಕೆ

ಜೇವರ್ಗಿ: ಜೇವರ್ಗಿ ತಾಲೂಕಿನ ರಾಸಣಗಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ-2 (ರದ್ದೇವಾಡ್ಗಿ) ಮತ್ತು ಕೃಷಿ ತಾಂತ್ರಿಕ ಮಹಾವಿದ್ಯಾಲಯ, ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ಹತ್ತಿ ಬೆಳೆಯ ಉಳಿಕೆಗಳನ್ನು ಯಾಂತ್ರಿಕವಾಗಿ ನಿರ್ವಹಿಸಲು ಕಾಟನ್ ಶ್ರೆಡ್ಡರ್ ಬಳಕೆಯ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ವಿಜ್ಞಾನಿ ಡಾ. ವಿಕ್ರಮ್ ಸಿಂಹ ರವರು ಮಾತನಾಡಿ ಹತ್ತಿಯನ್ನು ಬಿಡಿಸಿದ ನಂತರ ರೈತರು ಗಿಡದ ಕಡ್ಡಿಗಳನ್ನು ಸುಡುವುದರಿಂದ ಪೋಷಕಾಂಶಗಳು ಹಾಳಾಗುತ್ತವೆ ಹಾಗೂ ವಾತವರಣದಲ್ಲಿ ಅಧಿಕ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಸೇರುತ್ತದೆ. ಇದನ್ನು ತಡೆಗಟ್ಟಲು ಕಾಟನ್ ಶ್ರೆಡ್ಡರ್ ಟ್ರಾಕ್ಟರ್ ಚಾಲಿತ ಯಂತ್ರವು ಉಪಯುಕ್ತವಾಗುತ್ತದೆ ಎಂದರು.

ಈ ಯಂತ್ರವು ಹತ್ತಿಯ ಗಿಡದ ಕಡ್ಡಿಗಳನ್ನು ಸಣ್ಣದಾಗಿ ತುಂಡರಿಸಿ ಹೊಲದಲ್ಲಿಯೇ ಹರಡುವುದರಿಂದ ಬೇಗನೆ ಕೊಳಿತು ಮಣ್ಣಿನ ಫಲವತ್ತತೆಯು ಹೆಚ್ಚುತ್ತದೆ ಎಂದು ತಿಳಿಸಿದರು. ಈ ಯಂತ್ರವನ್ನು ಪ್ರತಿಯೊಬ್ಬ ಹತ್ತಿ ಬೆಳೆಗಾರರು ಉಪಯೋಗಿಸಿದಲ್ಲಿ ಗುಲಾಬಿ ಕಾಯಿಕೊರಕದ ನಿರ್ವಹಣೆಯು ಕೂಡ ಮಾಡಬಹುದೆಂದು ವಿಜ್ಞಾನಿ ಡಾ. ಬಸವರಾಜ ಕಾಡನವರ ತಿಳಿಸಿದರು.

ಈ ಪ್ರಾತ್ಯಕ್ಷಿಕೆಯಲ್ಲಿ ಡಾ. ಕೆ. ಬಸವರಾಜ, ಶ್ರೀಮತಿ ಶೃತಿ ಹಾಗೂ ಗ್ರಾಮದ ರೈತರು ಪಾಲ್ಗೊಂಡಿದ್ದರು.

 

See also  ಒಂದು ದೋಷದಿಂದ ಸಾವಿರ ಒಳ್ಳೆಯ ಗುಣಗಳ ನಾಶವಾಗುತ್ತದೆ–ಡಾ. ಡಿ. ವೀರೇಂದ್ರ ಹೆಗ್ಗಡೆ  
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು