News Kannada
Monday, October 03 2022

ಕರಾವಳಿ

ಚಿನ್ನಾಭರಣ ಏಜೆಂಟರ ದರೋಡೆ ಪ್ರಕರಣ: ಮತ್ತೆ ಐದು ಮಂದಿ ಸೆರೆ - 1 min read

Photo Credit :

ಚಿನ್ನಾಭರಣ ಏಜೆಂಟರ ದರೋಡೆ ಪ್ರಕರಣ: ಮತ್ತೆ ಐದು ಮಂದಿ ಸೆರೆ

ಕಾಸರಗೋಡು: ಚಿನ್ನಾಭರಣ ಏಜೆಂಟರಿಬ್ಬರನ್ನು  ಕಾರಿನಲ್ಲಿ ಅಪಹರಿಸಿ    ಸುಮಾರು 14 ಲಕ್ಷ ಲಕ್ಷ ರೂ. ನಗದನ್ನು  ದರೋಡೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಇದರಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರ ಸಂಖ್ಯೆ  7ಕ್ಕೇರಿದೆ. ಬಂಧಿತರನ್ನು ಬಂಟ್ವಾಳ  ನರಿಂಗಾನ ಪಿಂಡಿಕೈನ  ಅಬ್ದುಲ್ ಅಝೀಜ್(27), ಬಂಟ್ವಾಳ  ನರಿಂಗಾನ ಮೊಂಟುಗೋಳಿಯ ಅಬ್ದುಲ್  ರೌಫ್ ( 26),  ಮೊಂಟುಗೋಳಿಯ  ಮುಹಮ್ಮದ್ ಇಕ್ಬಾಲ್ ( 27) , ಮುಹಮ್ಮದ್ ರಿಜ್ವಾನ್ ( 27) ಮತ್ತು ರಂಜಿತ್ ಕುಮಾರ್(27) ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಟೆಕ್ಕಾರಿನ ಅಬ್ದುಲ್ ರಹಮಾನ್ ಮತ್ತು ಬಂಟ್ವಾಳ  ಮೊಂಟುಗೋಳಿಯ ನಾಸರ್ ನನ್ನ ಮೂರು  ದಿನಗಳ ಹಿಂದೆ ಬಂಧಿಸಲಾಗಿತ್ತು. ಪ್ರಕರಣದ ಮೊದಲ ಹಾಗೂ ಎರಡನೇ ಆರೋಪಿಗಳು  ತಲಪಾಡಿ ಕೆ. ಸಿ. ರೋಡ್  ಪರಿಸರದ ನಿವಾಸಿಗಳೆಂದು ಪೊಲೀಸರಿಗೆ ಮಾಹಿತಿ ಲಭಿಸಿದ್ದು, ತಲೆಮರೆಸಿಕೊಂಡಿದ್ದಾರೆ.

 ಡಿ. 10ರಂದು ಮುಂಜಾನೆ ಮಂಜೇಶ್ವರ ಬಳಿ  ಘಟನೆ ನಡೆದಿತ್ತು. ಮಂಗಳೂರಿನಿಂದ ಕಾರಿನಲ್ಲಿ ಕಾಸರಗೋಡು ಕಡೆಗೆ ಬರುತ್ತಿದ್ದ ಚಿನ್ನಾಭರಣ  ಏಜೆಂಟರಾದ ಮಹೇಶ್ ಮತ್ತು ಅವಿನಾಶ್ ರನ್ನು ತಡೆದು ಇನ್ನೊಂದು ಕಾರಿನಲ್ಲಿ ಅಪಹರಿಸಿ ಕುರುಡಪದವು ಎಂಬ ಸ್ಥಳಕ್ಕೆ ಕೊಂಡೊಯ್ದು ದರೋಡೆ ನಡೆಸಲಾಗಿತ್ತು.

See also  ಕಾರ್ಮಿಕರ ಸಂಘಟನೆಯಲ್ಲಿ ಬಿಎಂಎಸ್ ವಿಶ್ವದಲ್ಲೇ ಮುಂಚೂಣಿಯಲ್ಲಿದೆ: ವಿಶ್ವನಾಥ್ ಶೆಟ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು