News Kannada
Thursday, October 06 2022

ಕರಾವಳಿ

‘ಕಲಿಕೆಯೊಂದಿಗೆ ದುಡಿಮೆ’ ಪರಿಕಲ್ಪನೆಯ ಎಸ್.ಡಿ.ಎಂ ವಿನೂತನ ಹೆಜ್ಜೆ - 1 min read

Photo Credit :

‘ಕಲಿಕೆಯೊಂದಿಗೆ ದುಡಿಮೆ’ ಪರಿಕಲ್ಪನೆಯ ಎಸ್.ಡಿ.ಎಂ ವಿನೂತನ ಹೆಜ್ಜೆ

ಉಜಿರೆ: ‘ಕಲಿಕೆಯೊಂದಿಗೆ ದುಡಿಮೆ’ ಪರಿಕಲ್ಪನೆ ಆಧರಿಸಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರಿಗಾಗಿ ಅಡೋಬ್ ಪ್ರೀಮಿಯರ್ ಪ್ರೊ ಸಾಫ್ಟ್ ವೇರ್ ಸಂಬಂಧಿತ ಐದು ದಿನಗಳ ಉಚಿತ ವಿಡಿಯೋ ಎಡಿಟಿಂಗ್ ಕಾರ್ಯಾಗಾರ ಏರ್ಪಡಿಸಿತ್ತು.

ಈ ಕಾರ್ಯಾಗಾರದಲ್ಲಿ ಎಸ್.ಡಿ.ಎಂ ಇ-ರಿಸೋರ್ಸ್ ಕೇಂದ್ರದ ಕಾರ್ಯನಿರ್ವಾಹಕ ತಂತ್ರಜ್ಞ ಕೃಷ್ಣಪ್ರಶಾಂತ್ ಮತ್ತು ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋದ ಸಂಕಲನ ನಿರ್ದೇಶಕ ರಕ್ಷಿತ್ ರೈ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ವಿಡಿಯೋ ಎಡಿಟಿಂಗ್ ತಂತ್ರಜ್ಞಾನದ ವಿವಿಧ ಆಯಾಮಗಳನ್ನು ಪರಿಚಯಿಸಿದರು. ಚಿತ್ರೀಕೃತ ಚಿತ್ರಿಕೆಗಳನ್ನು ಧ್ವನಿ ಮತ್ತು ಸಂಗೀತದ ನೆರವಿನೊಂದಿಗೆ ಸಂಯೋಜಿಸುವ ವೈವಿಧ್ಯಮಯ ಕೌಶಲ್ಯಗಳನ್ನು ವಿಶ್ಲೇಷಿಸಿದ್ದಲ್ಲದೇ ಪ್ರಾಯೋಗಿಕ ಮಾರ್ಗದರ್ಶನ ನೀಡಿದರು.

ಎಡಿಟಿಂಗ್ ತಾಂತ್ರಿಕತೆಯು ವಿಭಿನ್ನವಾದುದು. ವಿಡಿಯೋವೊಂದು ರೂಪುಗೊಳ್ಳುವ ಬಗೆ ಹೇಗೆ ಎಂಬುದರ ಕುರಿತ ಪ್ರಾಥಮಿಕ ತಿಳುವಳಿಕೆಯ ಆಧಾರದಲ್ಲಿ ಸಂಕಲನದ ತಿಳುವಳಿಕೆ ಗಟ್ಟಿಯಾಗುತ್ತದೆ. ಬೇರೆ ಬೇರೆ ದೃಶ್ಯ ಮತ್ತು ಅದಕ್ಕೆ ಹೊಂದುವಂಥ ಧ್ವನಿಮಾದರಿಗಳನ್ನು ಅನ್ವಯಿಸಿ ಸಂಕಲನ ನಡೆಸುವಾಗ ಈ ಪ್ರಾಥಮಿಕ ಗ್ರಹಿಕೆ ಸಹಾಯಕವಾಗುತ್ತದೆ. ಇದರ ಆಧಾರದಲ್ಲಿಯೇ ವಿಡಿಯೋ ಸಂಕಲನದಲ್ಲಿ ಪ್ರಯೋಗಶೀಲತೆಯನ್ನು ಸಾಬೀತುಪಡಿಸಬಹುದು ಎಂದು ಎಸ್.ಡಿ.ಎಂ ಇ-ರಿಸೋರ್ಸ್ ಕೇಂದ್ರದ ಕಾರ್ಯನಿರ್ವಾಹಕ ತಂತ್ರಜ್ಞ ಕೃಷ್ಣಪ್ರಶಾಂತ್ ಅಭಿಪ್ರಾಯಪಟ್ಟರು.

ವಿಡಿಯೋ ಎಡಿಟಿಂಗ್ ನಡೆಸುವಾಗ ದೃಶ್ಯ ಮತ್ತು ಧ್ವನಿಬಳಕೆಯ ಮೂಲ ಉದ್ದೇಶ ಸ್ಪಷ್ಟಪಡಿಸಿಕೊಳ್ಳಬೇಕು. ಏನನ್ನು ಸಂವಹಿಸಬೇಕು ಎನ್ನುವುದು ಸ್ಪಷ್ಟವಾದರೆ ಅದರ ಆಧಾರದಲ್ಲಿ ವೀಕ್ಷಕರನ್ನು ಸೆಳೆಯುವಂಥ ದೃಶ್ಯಾವಳಿಗಳನ್ನು ಸಂಯೋಜಿಸಲು ಸಾಧ್ಯ. ವಿಡಿಯೋವೊಂದರ ಒಟ್ಟು ಆಶಯ ಏನು ಎಂಬುದನ್ನು ಅರ್ಥೈಸಿಕೊಳ್ಳದೆಯೇ ಸಂಕಲನದ ನಿರ್ವಹಣೆ ಯಶಸ್ಸು ಕಾಣದು ಎಂದು ಅವರು ಹೇಳಿದರು.

ನ್ಯೂಸ್ ಸ್ಟೋರಿ ಎಡಿಟಿಂಗ್, ಆಡಿಯೋ ಮಾಡ್ಯುಲೇಷನ್, ಎಡಿಟಿಂಗ್‍ಗಾಗಿ ಬಳಕೆಯಾಗುವ ತಾಂತ್ರಿಕ ವಿನ್ಯಾಸದ ಮಾದರಿಗಳು, ಕ್ರೋಮಾ ಕೀ ತಂತ್ರಾಂಶಗಳ ಕುರಿತು ವಿಸ್ತøತ ಮಾಹಿತಿ ನೀಡಿದರು. ಟೆಲಿವಿಷನ್ ಸುದ್ದಿಗಾಗಿ ಸಂಕಲನದ ಹೊಣೆಗಾರಿಕೆಯನ್ನು ನಿರ್ವಹಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳನ್ನು ವಿವರಿಸಿದರು. ಸಹಜ ದೃಶ್ಯ ನಿರೂಪಣೆ, ಸನ್ನಿವೇಶವೊಂದನ್ನು ಚಿತ್ರಿಕೆಗಳ ನೆರವಿನೊಂದಿಗೆ ಒಟ್ಟಾಗಿಸಿ ಸಂಯೋಜಿಸುವಿಕೆ, ಹಾಡಿನ ಸನ್ನಿವೇಶಕ್ಕೆ ಅನುಸರಿಸಬೇಕಾದ ತಾಂತ್ರಿಕ ವಿಧಾನಗಳು ಮತ್ತು ವಿವಿಧ ರೀತಿಯ ಅಕ್ಷರ ವಿನ್ಯಾಸಗಳ ಬಳಕೆ ಕುರಿತು ಪರಿಚಯಿಸಿದರು. ರಕ್ಷಿತ್ ರೈ ಎಡಿಟಿಂಗ್ ಅಭ್ಯಾಸದ ವೇಳೆ ಪ್ರಾಯೋಗಿಕ ಕಲಿಕೆಗೆ ಪೂರಕವಾಗುವ ಸಲಹೆಗಳನ್ನು ನೀಡಿದರು.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ ಅವರಿಂದ ಚಾಲನೆ ಕಂಡಿದ್ದ ಈ ಕಾರ್ಯಾಗಾರವು ‘ಕಲಿಕೆಯೊಂದಿಗೆ ದುಡಿಮೆ’ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನ ಮಹತ್ವದ ಹೆಜ್ಜೆಯಾಗಿ ಯಶಸ್ಸು ಕಂಡಿತು. ಓದುವ ಕಾಲದಲ್ಲಿಯೇ ವಿದ್ಯಾರ್ಥಿಗಳು ಹಣ ಗಳಿಸುವುದಕ್ಕೆ ಪೂರಕವಾಗುವ ವೃತ್ತಿಪರತೆಯನ್ನು ರೂಢಿಸುವ ಆಲೋಚನೆಯು ಈ ಕಾರ್ಯಾಗಾರದೊಂದಿಗೆ ಅನುಷ್ಠಾನಕ್ಕೆ ಬರುತ್ತಿದೆ ಎಂದು ಡಾ.ಭಾಸ್ಕರ ಹೆಗಡೆ ಅಭಿಪ್ರಾಯಪಟ್ಟರು. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಸಂಸ್ಥೆಯು ಎಡಿಟಿಂಗ್‍ಗೆ ಸಂಬಂಧಿಸಿದ ಕೆಲಸಗಳನ್ನು ವಹಿಸಿಕೊಟ್ಟು, ಸಂಭಾವನೆಯನ್ನೂ ನೀಡಲಿದೆ ಎಂದು ತಿಳಿಸಿದರು.

See also  ಕೋಟಿಚೆನ್ನಯ್ಯ ಪ್ರತಿಯೊಬ್ಬ ನಾಗರಿಕರ ಬದುಕಿಗೆ ಅದರ್ಶವಾಗಲಿ : ಶಾಸಕ ವಿ.ಸುನೀಲ್ ಕುಮಾರ್

ಕಾರ್ಯಾಗಾರದ ಕೊನೆಯ ದಿನ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಪಿ. ವಿಶ್ವನಾಥ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಿದರು. ವಿಡಿಯೋ ಎಡಿಟಿಂಗ್ ಕಾರ್ಯಾಗಾರದಿಂದ ಪಡೆದುಕೊಂಡ ಜ್ಞಾನದ ಮೂಲಕ ವೃತ್ತಿಪರ ಬೆಳವಣಿಗೆಗೆ ಕಂಡುಕೊಳ್ಳಬೇಕು ಎಂದು ಹೇಳಿದರು. ಎಸ್.ಡಿ.ಎಂ ಮಲ್ಟಿ ಮೀಡಿಯಾ ಸ್ಟುಡಿಯೋದ ಕಾರ್ಯನಿರ್ವಾಹಕ ನಿರ್ಮಾಪಕ ಸುನೀಲ್ ಹೆಗ್ಡೆ, ಸಹಾಯಕ ಪ್ರಾಧ್ಯಾಪಕರಾದ ಗೀತಾ ಎ.ಜೆ, ಮಾಧವ ಹೊಳ್ಳ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು