News Kannada
Tuesday, November 29 2022

ಕರಾವಳಿ

ಘನ ತ್ಯಾಜ್ಯ ಘಟಕಗಳಿಗೆ ನಿವೇಶನ ಕಾದಿಸದೆ ಇದ್ದರೆ ಪಿಡಿಒ ವಿರುದ್ದ ಕ್ರಮ - 1 min read

Photo Credit :

ಘನ ತ್ಯಾಜ್ಯ ಘಟಕಗಳಿಗೆ ನಿವೇಶನ ಕಾದಿಸದೆ ಇದ್ದರೆ ಪಿಡಿಒ ವಿರುದ್ದ ಕ್ರಮ

ಬಂಟ್ವಾಳ: ಬಂಟ್ವಾಳ ತಾಲೂಕಿನ ಗ್ರಾ.ಪಂ.ಗಳಲ್ಲಿ ಘನ ತ್ಯಾಜ್ಯ ಘಟಕಗಳಿಗೆ ನಿವೇಶನ ಕಾದಿರಿಸುವ ಕುರಿತು ಅಭಿವೃದ್ಧಿ ಅಧಿಕಾರಿಗಳ ಕಾರ್ಯ ಅಸಮಾಧಾನ ವ್ಯಕ್ತಪಡಿಸಿದ ದ.ಕ.ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಒಂದು ತಿಂಗಳಲ್ಲಿ ನಿವೇಶನವನ್ನು ಅಂತಿಮಗೊಳಿಸದೇ ಇದ್ದರೆ ಪಿಡಿಒಗಳ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು.

ಅವರು ಮಂಗಳವಾರ ಬಂಟ್ವಾಳ ತಾ.ಪಂ.ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾ.ಪಂ.ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರತಿ ಗ್ರಾ.ಪಂ.ಗಳಲ್ಲಿ ಪಿಡಿಒಗಳ ಇಚ್ಚಾಶಕ್ತಿಯ ಕೊರತೆಯಿಂದಲೇ ಘನ ತ್ಯಾಜ್ಯ ಘಟಕಗಳು ಅನುಷ್ಠಾನಗೊಂಡಿಲ್ಲ. ನಿವೇಶನಗಳಿಗೆ ಅನಗತ್ಯ ಕಾರಣಕ್ಕೆ ಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ಅದನ್ನು ಗಣನೆಗೆ ತೆಗೆದುಕೊಳ್ಳಬೇಡಿ. 200 ಮೀ. ಮನೆಗಳಿರಬಾರದು ಎಂಬ ಒಂದು ನಿಬಂಧನೆಯನ್ನು ಪಾಲಿಸಿದರೆ ಸಾಕು. ಒಂದು ಗ್ರಾ.ಪಂ.ನಲ್ಲಿ ನಿವೇಶನ ಸಿಗದೇ ಇದ್ದರೆ, ಇನ್ನೊಂದು ಗ್ರಾ.ಪಂ.ಜತೆ ಕ್ಲಸ್ಟರ್ ಮಾಡಿ ಅಗ್ರಿಮೆಂಟ್ ಮಾಡಿಕೊಂಡು ಶೀಘ್ರ ಡಿಪಿಆರ್ ಮಾಡಿ ಎಂದು ಸೂಚನೆ ನೀಡಿದರು.

ಘನ ತ್ಯಾಜ್ಯ ಘಟಕಗಳ ಅನುಷ್ಠಾನದ ಕುರಿತು ತಾ.ಪಂ.ಇಒ ರಾಜಣ್ಣ ಅವರು ಕೂಡ ಗಮನ ಹರಿಸಬೇಕು. ತಹಶೀಲ್ದಾರ್, ಇಒ, ಎಡಿಎಲ್‌ಆರ್‌ಗಳು ಜಂಟಿ ಸಭೆ ನಡೆಸಿ ಶೀಘ್ರ ನಿವೇಶನದ ಗೊಂದಲ ನಿವಾರಿಸಬೇಕು ಎಂದು ಸಿಇಒ ತಿಳಿಸಿದರು.

See also  ಬೆಳ್ತಂಗಡಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ 240ರೂ ಕೋಟಿ ಅನುದಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು