News Kannada
Friday, December 09 2022

ಕರಾವಳಿ

ಸಂಕಷ್ಟದಲ್ಲಿ ಹಿರಿಯ ಪತ್ರಕರ್ತ-ಗದ್ದೆ ನಾಟಕಗಳ ನಿರ್ದೇಶಕ, ಟ್ರಾಜಿಡಿ ಹೀರೋ

Photo Credit :

ಸಂಕಷ್ಟದಲ್ಲಿ ಹಿರಿಯ ಪತ್ರಕರ್ತ-ಗದ್ದೆ ನಾಟಕಗಳ ನಿರ್ದೇಶಕ, ಟ್ರಾಜಿಡಿ ಹೀರೋ

ಕಳೆದ ಮೂರೂವರೆ ದಶಕಗಳಿಂದ ಜಿಲ್ಲೆಯ ಪತ್ರಿಕಾ ರಂಗದಲ್ಲಿ ವಿವಿಧ ಸ್ತರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತ ಗಂಗಾಧರ ಪಿಲಿಯೂರು ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಬದ್ಧತೆ ಮೆರೆದವರು.

ಹಲವಾರು ಮಂದಿಗೆ ಪತ್ರಿಕಾ ಬರಹ ಕಲಿಸಿ, ಬದುಕಿನಲ್ಲಿ ನೆಲೆ ಕಲ್ಪಿಸಿದವರು. ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗದಲ್ಲೂ ಸಕ್ರಿಯರಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಯುವ ಜೋಡಿಗಳನ್ನು ತಾನೇ ಮುಂದೆ ನಿಂತು ಮದುವೆ ಮಾಡಿಸಿರುವ ಗಂಗಾಧರ್-ಧನ್ಯಾ ಬಿ. ಉಚ್ಚಿಲ್ ದಂಪತಿ, ನವ ವಿವಾಹಿತರು ಸಂಕಷ್ಟದಲ್ಲಿದ್ದಾಗ ಅವರನ್ನು ಕೆಲಕಾಲ ತಮ್ಮ ಮನೆಯಲ್ಲಿರಿಸಿ ಸಲಹಿದವರು.
ಹಳ್ಳಿಯಲ್ಲಿ ನಾಟಕ ತಂಡವನ್ನು ಕಟ್ಟಿಕೊಂಡಿದ್ದ ಅವರು, ಹಿಂದಿನ ಗದ್ದೆ ನಾಟಕಗಳ ನಿರ್ದೇಶಕ ಹಾಗೂ ದುರಂತ ನಾಯಕ ಕೂಡಾ.
ವೃತ್ತಿ ಬದುಕಿನಲ್ಲಿ ಆರ್ಥಿಕವಾಗಿ ಏನೂ ಗಳಿಸಿಲ್ಲ. ರಾಜಕಾರಣಿಗಳ, ಉದ್ಯಮಿಗಳ, ಚಿತ್ರರಂಗದವರ ಪರಿಚಯ, ಒಡನಾಟ ಇದ್ದರೂ ಅವರಿಂದ ಅಂತರ ಕಾಪಾಡಿಕೊಂಡವರು.
ಸರಳ-ಸಹಜ ಬದುಕಿನ ಅವರು, ಕೆಲ ವರ್ಷಗಳ ಹಿಂದೆ ಹಠಾತ್ತನೆ ಅಗಲಿದ ಅವರ ಪ್ರೀತಿಯ ಮಗಳ ನೆನಪಿನಲ್ಲಿ ಕೆಲಕಾಲ ಖಿನ್ನತೆಗೂ ಒಳಗಾಗಿದ್ದರು. ಯಾವುದೇ ರೋಗ-ರುಜಿನಗಳಿಲ್ಲದ ಅವರಿಗೆ ಇದೀಗ ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಂಡಿದೆ. ಶಸ್ತ್ರಚಿಕಿತ್ಸೆಗೆ ಅಂದಾಜು ೪ ಲಕ್ಷ ರೂಪಾಯಿ ವೆಚ್ಚವಾಗಬಹುದೆಂದು ವೈದ್ಯರು ತಿಳಿಸಿದ್ದಾರೆ.
ಅವರಿಂದ ಉಪಕೃತರಾದವವರು, ನೊಂದವರಿಗೆ ನೆರಳಾಗುವ, ಹಸಿದವರಿಗೆ ಅನ್ನವಿಕ್ಕುವ ಸಹೃದಯಿ ದಾನಿಗಳು, ಈ ಸಂಕಷ್ಟ ಸಂದರ್ಭದಲ್ಲಿ ಕೈಲಾದ ಮಟ್ಟಿನ ಆರ್ಥಿಕ ನೆರವು ನೀಡಬೇಕೆಂದು ಅನುನಯದ ನಿವೇದನೆ.
See also  ಜಿಲ್ಲಾಧಿಕಾರಿ ವಿರುದ್ಧ ಗರಂ ಆದ ಸಚಿವೆ ಜಯಮಾಲಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು