News Kannada
Tuesday, December 06 2022

ಕರಾವಳಿ

ಪಬ್‌ಜಿ ಆಟದ ನಡುವೆ ಬಾಲಕನ ಕೊಲೆ ; ಓರ್ವ ಬಾಲಾಪರಾಧಿ ಬಂಧನ

Photo Credit :

 ಪಬ್‌ಜಿ ಆಟದ ನಡುವೆ ಬಾಲಕನ ಕೊಲೆ ; ಓರ್ವ ಬಾಲಾಪರಾಧಿ ಬಂಧನ

ಮಂಗಳೂರು ; ಪಬ್ ಜಿ ಆಡಲು ಮನೆಯಿಂದ ಹೊರ ಹೋಗಿದ್ದ ಬಾಲಕ ಶವವಾಗಿ ಪತ್ತೆಯಾದ ಘಟನೆ ಗೆ ಸಂಬಂದಪಟ್ಟಂತೆ ಬಾಲಕನ ಜೊತೆ ಆಟವಾಡುತ್ತಿದ್ದ ಆತನ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 12 ವರ್ಷದ ಬಾಲಕ ಅಕೀಫ್ ಶವ ಭಾನುವಾರ ಮುಂಜಾನೆ ಉಳ್ಳಾಲದ ಕೆ. ಸಿ. ರೋಡ್‌ನ ಮೈದಾನದವೊಂದರ ಮೂಲೆಯಲ್ಲಿ ಪತ್ತೆಯಾಗಿದೆ. ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಆಟವಾಡಲು ಹೋಗುತ್ತೇನೆ ಎಂದು ಅಕೀಫ್ ಮನೆಯಿಂದ ಹೊರ ಹೋಗಿದ್ದ.
ಬಾಲಕನ ಶವದ ಮೇಲೆ ಗಾಯದ ಗುರುತು ಇದ್ದು ಕಲ್ಲಿನಿಂದ ಜಜ್ಜಿದ ಗಾಯವಿದೆ. ಶವವನ್ನು ಎಲೆಯಿಂದ ಮುಚ್ಚಿಡುವ ಪ್ರಯತ್ನ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಟವಾಡಲು ಹೋದ ಬಾಲಕ ತಡರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಎಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಪೋಷಕರು ಪೊಲೀಸ್ ಠಾಣೆಗೆ ನಾಪತ್ತೆ ದೂರು ಸಲ್ಲಿಕೆ ಮಾಡಿದ್ದರು. ಅಕೀಫ್ ಜೊತೆ ಆಟವಾಡುತ್ತಿದ್ದ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಅಕೀಫ್‌ಗೆ ಪಬ್ ಜಿ ಸೇರಿದಂತೆ ವಿಡಿಯೋ ಗೇಮ್ ಆಡುವುದು ಬಹಳ ಇಷ್ಟವಾಗಿತ್ತು. ಗೆಳೆಯರ ಜೊತೆ ಸೇರಿ ಆನ್‌ಲೈನ್‌ನಲ್ಲಿಯೇ ವಿಡಿಯೋ ಗೇಮ್ ಆಡುತ್ತಿದ್ದ. ಯಾವಾಗಲೂ ನೀನು ಗೆಲ್ಲುತ್ತೀಯಾ, ನಿನ್ನ ಆಟ ಬೇರೆಯವರು ಆಡುತ್ತಾರೆ ಎಂದು ಸ್ನೇಹಿತರ ಜೊತೆ ಜಗಳವೂ ನಡೆದಿತ್ತು. ಸ್ನೇಹಿತನೊಬ್ಬ ಶನಿವಾರ ನಮ್ಮ ಜೊತೆಗೆ ಬಂದು ಆಟವಾಡಬೇಕು ಎಂದು ಹೇಳಿ ಕರೆದಿದ್ದ. ಈ ಆಹ್ವಾನವನ್ನು ಸ್ವೀಕರಿಸಿದ ಅಕೀಫ್‌ ಆಟ ಆಡಿದ್ದಾನೆ. ಅಗ ಅಕೀಫ್‌ ಸೋತಿದ್ದಾನೆ. ಸೋತಿದ್ದರಿಂದ ಅಸಮಾಧಾನದಲ್ಲಿ ಗೆಳೆಯನ ಜತೆ ಜಗಳವಾಡಿದ್ದಾನೆ. ಆಗ ಗೆಳೆಯನಿಗೆ ಚಿಕ್ಕ ಕಲ್ಲಿನಿಂದ ಹೊಡೆದಿದ್ದಾನೆ. ಇದರಿಂದ ರೋಷಗೊಂಡ ಗೆಳೆಯ ದೊಡ್ಡ ಕಲ್ಲಿನಿಂದ ಅಕೀಫ್‌ ನ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಅಕೀಫ್‌ ಮೃತನಾಗಿದ್ದಾನೆ ಎಂದು ಪೋಲೀಸ್‌ ತನಿಖೆಯಲ್ಲಿ ತಿಳಿದು ಬಂದಿದೆ. ನಂತರ ಗೆಳೆಯ ಶವವನ್ನು ಮುಚ್ಚಲೂ ಯತ್ನಿಸಿದ್ದಾನೆ . ಇದೀಗ ಗೆಳೆಯನನ್ನು ವಶಕ್ಕೆ ಪಡೆದಿರುವ ಪೋಲೀಸರು ವಿಚಾರಣೆ ನಡೆಸುತಿದ್ದಾರೆ.

See also  ಕಾಶಿಪಟ್ಣ: ತಲೆಗೆ ಪೆಟ್ಟು ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು