News Kannada
Saturday, September 24 2022

ಕರಾವಳಿ

ಲಾಕ್‌ಡೌನ್ ಉಲ್ಲಂಘನೆ; ದ.ಕ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 552 ವಾಹನಗಳು ಸೀಜ್ - 1 min read

Photo Credit :

ಲಾಕ್‌ಡೌನ್ ಉಲ್ಲಂಘನೆ; ದ.ಕ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 552 ವಾಹನಗಳು ಸೀಜ್

ಮಂಗಳೂರು, : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು‌ ಕೊರೊನಾ ಲಾಕ್‌ಡೌನ್ ನಿಯಮ ಮುರಿಯುವವರ ಹೆಡೆಮುರಿಕಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು 552 ವಾಹನಗಳನ್ನು ಸೀಜ್ ಮಾಡಿದ್ದಾರೆ.ಅದರಲ್ಲೂ ಮಂಗಳೂರು ನಗರ ಭಾಗದಲ್ಲಿ ಪೊಲೀಸರು ನಾಕಾ ಬಂದಿ ಹಾಕಿ ಕಾನೂನು ಭಂಜಕರ ವಿರುದ್ಧ ಪ್ರಹಾರ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 552 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದು, ಅದರಲ್ಲಿ 452 ವಾಹನಗಳನ್ನು ಕೇವಲ ಮಂಗಳೂರು ನಗರ ಪೊಲೀಸ್ ಕಮೀಷನೇಟರ್ ವ್ಯಾಪ್ತಿಯಲ್ಲೇ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಕಮೀಷನೇಟರ್ ವ್ಯಾಪ್ತಿಯಲ್ಲಿ ಒಟ್ಟು 452 ವಾಹನಗಳನ್ನು ಸೀಜ್ ಮಾಡಲಾಗಿದ್ದು, ಅದರಲ್ಲಿ 401 ದ್ವಿಚಕ್ರ ವಾಹನಗಳಾಗಿವೆ, 11 ಆಟೋ ರಿಕ್ಷಾ, ಗೂಡ್ಸ್ ರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗಿದೆ. 40 ಕಾರುಗಳನ್ನೂ ಸೀಜ್ ಮಾಡಲಾಗಿದ್ದು, ಮತ್ತು 946 ಮಾಸ್ಕ್ ಹಾಕದ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ವ್ಯಾಪ್ತಿಯಲ್ಲಿ ಅಂದರೆ ಜಿಲ್ಲೆಯ ಗ್ರಾಮೀಣ ಭಾಗಗಳಾದ ಬಂಟ್ವಾಳ, ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಒಟ್ಟು100 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 394 ಮಾಸ್ಕ್ ಹಾಕದ ಪ್ರಕರಣಗಳನ್ನು ದಾಖಲಿಸಿಕೊಂಡು, ಕಾನೂನು ಉಲ್ಲಂಘನೆ ಮಾಡಿದ ಕುರಿತು 6 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದೆ.
ಹೀಗೆ ವಶಪಡಿಸಿಕೊಂಡ ವಾಹನಗಳಿಗೆ ನೇರ ಕೋರ್ಟ್ ಕೇಸ್ ಹಾಕುವುದರಿಂದ ಕೋರ್ಟ್ ತೆರೆಯುವವರೆಗೆ ಕೇಸ್ ಅನ್ನು ಪರಿಹಾರ ಮಾಡಲು ಅಸಾಧ್ಯವಾಗುತ್ತದೆ. ಕನಿಷ್ಠ ಮೂರು ತಿಂಗಳು ವಾಹನಗಳು ಪೊಲೀಸ್ ವಶದಲ್ಲೇ ಇರಬೇಕಾಗುತ್ತದೆ. ಆದುದರಿಂದ ಮನೆಯಲ್ಲೇ ಇದ್ದು, ವಾಹನಗಳನ್ನು ಕಾಪಾಡಿಕೊಳ್ಳಿ ಅಂತಾ ಪೊಲೀಸರು ವಾಹನದ ಮಾಲೀಕರಿಗೆ ಕಿವಿಮಾತು ಹೇಳಿದ್ದಾರೆ.

See also  ಮತದಾನ ಬಹಿಷ್ಕಾರ ಎಚ್ಚರಿಕೆ ಬ್ಯಾನರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು