ಉಡುಪಿ ; 16 ವರ್ಷದ ಬಾಲಕಿಯೊಬ್ಬಳು ಆಕೆ ಮೊಬೈಲ್ ಫೋನ್ನಲ್ಲಿ ವಿಡಿಯೋ ಗೇಮ್ಗಳನ್ನು ಆಡಿದ್ದಕ್ಕಾಗಿ ಪೋಷಕರು ನಿಂದಿಸಿದರೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೇ 15 ರ ಸಂಜೆ ಕಾಪು ತಾಲೂಕಿನ ಮಣಿಪುರ ಗ್ರಾಮದ ಮಣಿಪುರ ಕೋಟೆಯಲ್ಲಿ ನಡೆದಿದೆ.
ಮೃತಳನ್ನು ಜುಬೇರಾ ಹಾಗೂ ಶಬಾನು ಅವರ ಪುತ್ರಿ ಸುಹೀಬತ್ ಅಸ್ಲಮಿಯಾ ಎಂದು ಗುರುತಿಸಲಾಗಿದೆ. ಆಕೆಯ ತಂದೆ ನೀಡಿದ್ದ ದೂರಿನನ್ವಯ ಬಾಲಕಿ ನಿರಂತರವಾಗಿ ಮೊಬೈಲ್ ಫೋನ್ನಲ್ಲಿ ಗೇಮ್ ಆಡುವುದರಲ್ಲಿ ತಲ್ಲೀನಳಾಗಿರುತ್ತಿದ್ದಳು. ಹಾಗೆ ಮಾಡಬೇಡ ಎಂದರೂ ಕೇಳುತ್ತಿರಲಿಲ್ಲ. ಮೇ 15 ರ ಸಂಜೆ ಬಾಲಕಿಗೆ ದೂರುದಾರರಾದ ಜುಬೇದಾ ಹಾಗೂ ಆತನ ಪತ್ನಿ ಮೊಬೈಲ್ನಲ್ಲಿ ಆಟವಾಡುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದರು ಮತ್ತು ಅವಳಿಂದ ಮೊಬೈಲ್ ಅನ್ನು ಕಸಿದುಕೊಂಡಿದ್ದಾರೆ. ಅದಾದ ನಂತರ ಬಾಲಕಿ ಮನೆಯ ಒಂದು ಮೂಲೆಯಲ್ಲಿ ಕುಳಿತಿದ್ದಳು.ಆಗ ತಾಯಿ ನಮಾಜ್ ಮಾಡಲು ಹೋದರೆ ತಂದೆ ಸ್ನಾನಕ್ಕೆ ತೆರಳಿದ್ದರು. ನಮಾಜ್ ನಂತರ ತಾಯಿ ಆಗಮಿಸಿದಾಗ ಮಗಳು ಅಲ್ಲಿರಲಿಲ್ಲ.
ಅವಳನ್ನು ಹುಡುಕತೊಡಗಿದಾಗ ತಮ್ಮ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಸರ್ಕಾರಿ ಬಾವಿಯ ಸಮೀಪ ಜನ ಸೇರಿರುವುದನ್ನು ಕಂಡಿದ್ದಾರೆ. ಆಗ ಅವರಿಗೆ ತಮ್ಮ ಮಗಳು ಬಾವಿಗೆ ಹಾರಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದಾಳೆ ಎನ್ನುವುದು ಗೊತ್ತಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಸ್ಲಮಿಯಾಳನ್ನು ಬಾವಿಯಿಂದ ಎತ್ತುವಷ್ಟರಲ್ಲೇ ಆಕೆ ಕೊನೆಯುಸಿರೆಳೆದಿದ್ದಳು.
ಘಟನೆ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ಗೇಮ್ ಆಡಬೇಡವೆಂದು ಬುದ್ದಿ ಹೇಳಿದ್ದಕ್ಕೆ ಬಾಲಕಿ ಆತ್ಮಹತ್ಯೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.