ಮಂಗಳೂರು: ಮಾಸ್ಕ್ ಧರಿಸದ ಕಾರಣಕ್ಕಾಗಿ ಫೊಟೊ ತೆಗೆದದ್ದರಿಂದ ಆಕ್ರೋಶಗೊಂಡು ಪಿಡಿಒ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪರಂಗಿಪೇಟೆಯ ಮಹಮ್ಮದ್ ಇದಾಯತುಲ್ಲಾ(೨೫), ಅಹ್ಮದ್ ಬಶೀರ್(೩೦), ಕುತ್ತಾರ್ನ ಅಬೂಬಕರ್ ಸಿದ್ದಿಕ್(೨೬) ಹಾಗೂ ಪರಂಗಿಪೇಟೆ ಪುದುವಿನ ಅಬ್ದುಲ್ ಸಿದ್ದಿಕ್(೩೩) ಬಂಧಿತರು. ಇವರಲ್ಲಿ ಇದಾಯತುಲ್ಲಾ ಹಾಗೂ ಬಶೀರ್ ವಿರುದ್ಧ ವಿವಿಧ ಪ್ರಕರಣಗಳು ಹಿಂದೆಯೂ ದಾಖಲಾಗಿವೆ.
ಮೇ ೨೫ರಂದು ಮಲ್ಲೂರು ರಸ್ತೆಯಲ್ಲಿ ಈ ನಾಲ್ವರು ಮಾಸ್ಕ್ ಧರಿಸದೆ ನಿಂತಿದ್ದರು. ಇದನ್ನು ಪ್ರಶ್ನಿಸಿದ್ದ ಪಿಡಿಒ ರಾಜೇಂದ್ರ ಶೆಟ್ಟಿ ದಾಖಲೆಗಾಗಿ ಮೊಬೈಲ್ನಲ್ಲಿ ಫೊಟೊ ತೆಗೆದಿದ್ದರು. ಆಗ ಆರೋಪಿಗಳು ಪಿಡಿಒರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದರು. ಗ್ರಾ.ಪಂ ಕಚೇರಿ ಸಿಬ್ಬಂದಿ, ಅಧ್ಯಕ್ಷರು ಸ್ಥಳಕ್ಕೆ ಆಗಮಿಸಿದಾಗ ಆರೋಪಿಗಳು ಪರಾರಿಯಾಗಿದ್ದರು.
ತಲೆಮರೆಸಿಕೊಂಡ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಮನ್ಸೂರ್ ಆಲಿ ಎಂಬನನ್ನು ಬಂಧಿಸಬೇಕಾಗಿದೆ.
ಪಿಡಿಒ ಮೇಲೆ ಹಲ್ಲೆ ನಡೆಸಿದ್ದವರ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.