News Kannada
Tuesday, November 29 2022

ಕರಾವಳಿ

ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಜೂನ್‌ 21 ರಂದು ಲಸಿಕೆ ಅಭಿಯಾನ - 1 min read

Photo Credit :

‘ಡಾರ್ಲಿಂಗ್ಸ್’ ಚಿತ್ರದ ಸಿದ್ಧತೆಯಲ್ಲಿ ನಟಿ ಆಲಿಯಾ ಭಟ್

ಮಂಗಳೂರು ; ಮಂಗಳೂರಿನ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಮೊದಲ ಬ್ಯಾಚ್ ಕೋವಿಶೀಲ್ಡ್ ಲಸಿಕೆಗಳ ದಾಸ್ತಾನು ಗುರುವಾರ ಬಂದು ತಲುಪಿದೆ ಎಂದು ಆಸ್ಪತ್ರೆಯ ಆಳಿತಾಧಿಕಾರಿ ಫಾದರ್‌ ರುಡಾಲ್ಫ್‌ ಡಿ ಸಾ ತಿಳಿಸಿದ್ದಾರೆ. ಇಂದು ಬಿಡುಗಡೆ ಮಾಡಲಾದ ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು ಅನೇಕ ದಿನಗಳಿಂದ ಆಸಕ್ತರು ಕೋವಿಡ್‌ ಲಸಿಕೆಗಾಗಿ ಕಾಯುತಿದ್ದು ಜನತೆಯ ಅನುಕೂಲಕ್ಕಾಗಿ ಆಸ್ಪತ್ರೆಯು ಹೆಲ್ಪ್‌ ಲೈನ್‌ ನಂಬರ್‌ 0824 2238341 /8277039528 ನ್ನು ಆರಂಬಿಸಿದೆ ಎಂದು ತಿಳಿಸಿದ್ದಾರೆ.
ಮುಂದಿನ ಜೂನ್ 21 ರ ಸೋಮವಾರದಿಂದ ಬೆಳಿಗ್ಗೆ 9 ರಿಂದ ಸಂಜೆ 3 ರವರೆಗೆ ಸಾರ್ವಜನಿಕರಿಗೆ ಲಸಿಕೆ ಚಾಲನೆ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದ್ದು ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಕ್ಯಾಪ್ಟನ್ ಫಾದರ್ ಅಜಿತ್ ಮೆನೆಜೆಸ್ ಇವರ ನೇತೃತ್ವದಲ್ಲಿ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ವ್ಯಾಕ್ಸಿನೇಷನ್ ಡ್ರೈವ್ ನಡೆಸಲಾಗುವುದು ಎಂದು ಹೇಳಿದರು. ವ್ಯಾಕ್ಸಿನೇಷನ್ ಹಾಲ್‌ ಸಂಪೂರ್ಣ ಹವಾನಿಯಂತ್ರಿತ ವಾಗಿದ್ದು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಉತ್ತಮ ಸೇವೆಗಾಗಿ 10 ನೋಂದಣಿ ಕೌಂಟರ್‌ಗಳನ್ನು ತೆರೆಯಲಾಗುವುದು. ಲಸಿಕೆ ಹಾಕಲು ಬರುವವರಿಗೆ ಪ್ರವೇಶ ಪಂಪ್‌ವೆಲ್ ಗೇಟ್ ಮೂಲಕ ಕಲ್ಪಿಸಲಾಗಿದೆ.
ಸರ್ಕಾರದ ನಿಯಮಾವಳಿಯಂತೆ ಲಸಿಕೆಯ ಪ್ರತಿ ಡೋಸ್‌ಗೆ 750 / – ರೂಗಳಿಗೆ ನಿಗದಿಪಡಿಸಲಾಗಿದ್ದು 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಭ್ಯವಿದೆ. ಲಸಿಕೆ ಪಡೆಯಬಯಸುವವರು COWIN ಅಪ್ಲಿಕೇಶನ್‌ನಲ್ಲಿ ನಿಮ್ಮನ್ನು ನೋಂದಾಯಿಸಿ ಬರಬೇಕೆಂದು ಪ್ರಕಟಣೆ ತಿಳಿಸಿದೆ.

See also  ರಾಷ್ಟ್ರೀಯ ಹೆದ್ದಾರಿ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು