News Kannada
Tuesday, November 29 2022

ಕರಾವಳಿ

ಶಿಥಿಲಾವಸ್ಥೆಯಲ್ಲಿದ್ದ ನಾಗಮಜ್ಜಿ ಮನೆಗೆ ಯುವಕರ ತಂಡದಿಂದ ಕಾಯಕಲ್ಪ - 1 min read

Photo Credit :

‘ಡಾರ್ಲಿಂಗ್ಸ್’ ಚಿತ್ರದ ಸಿದ್ಧತೆಯಲ್ಲಿ ನಟಿ ಆಲಿಯಾ ಭಟ್

ಬಂಟ್ವಾಳ: ಎಡೆಬಿಡದೆ ಸುರಿಯುತ್ತಿರುವ ಮಳೆ, ಕಾಲಿಟ್ಟಲ್ಲಿ ಜಾರಿ ಬೀಳುವಷ್ಟು ಕೆಸರು.. ಇದರ ನಡುವೆಯೂ ಜೆಸಿಐ ಬಂಟ್ವಾಳದ ಸದಸರು ಹಾಗೂ ಸಮಾನ ಮನಸ್ಕ ಯುವಕರು ನಾಗಮಜ್ಜಿ ಮನೆ ನಿರ್ಮಾಣಕ್ಕೆ ಶ್ರಮದಾನದ ಸೇವೆ ನೀಡಿದರು.

ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಜೆಸಿಐ ಬಂಟ್ವಾಳ ನೇತೃತ್ವದಲ್ಲಿ ದಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಾಗಮಜ್ಜಿಯ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪಂಚಾಂಗದ ಕೆಲಸವು ಆರಂಭಗೊಂಡಿದ್ದು ಗುರುವಾರ ಮರಳನ್ನು ಸಾಗಿಸುವ ಕಾರ್ಯವನ್ನು ಜೆಸಿಐ ಬಂಟ್ವಾಳದ ಸದಸ್ಯರು ನಡೆಸಿದರು. ಈ ಸಂದರ್ಭ ಮಳೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಸುತ್ತಲೂ ಕೆಸರು ತುಂಬಿ ಕೊಂಡು ಕೆಲಸಕ್ಕೆ ಅಡ್ಡಿಯಾದರೂ ವಿರಮಿಸದ ಯುವಕರು ಮಳೆಯ್ಲಲಿಯಲ್ಲಿಯೇ ನೆನೆದು ಕೊಂಡು ಸುಮಾರು 3 ಗಂಟೆಗಳ ಕಾಲ ಶ್ರಮದಾನ ನಡೆಸಿದರು. ಈ ಸಂದರ್ಭ ಜೆಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ, ಕಾರ್ಯದರ್ಶಿ ರೋಷನ್ ರೈ, ಸ್ಥಾಪಕಾಧ್ಯಕ್ಷ ನಾಗೇಶ್ ಬಾಳೆಹಿತ್ಲು, ನಿಕಟಪೂರ್ವಾಧ್ಯಕ್ಷ ಸದಾನಂದ ಬಂಗೇರ, ಸದಸ್ಯರಾದ ಕಿಶೋರ್ ಆಚಾರ್ಯ, ಕಾರ್ತಿಕ್ ರೈ ಪ್ರಮುಖರಾದ ಪ್ರಕಾಶ್ ಆಚಾರ್ಯ, ಕರುಣಾಕರ ರೈ, ಸುಹಾಸ್, ಸುಧಾಕರ್, ಸಂಜಿತ್, ಸಜಿತ್, ಪವನ್ ಶ್ರಮದಾನ ಕಾರ್ಯದಲ್ಲಿ ತೊಡಗಿಸಿಕೊಂಡರು. ಕಳೆದ ಭಾನುವಾರ ಸ್ಥಳೀಯ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ಸೇವಾ ಸಂಘ ಜಾರಂದಗುಡ್ಡೆಯ ಯವಕರು ಶ್ರಮದಾನದ ಮೂಲಕ ಕೆಂಪು ಕಲ್ಲು ಸಾಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು, ಸಂಘಟನೆಗಳು ಶ್ರಮದಾನದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬಂದಿವೆ.

ಶ್ರಮದಾನದ ವೇಳೆ ಭಾವೈಕ್ಯತೆ: ಶ್ರಮದಾನದ ಚಹಾ ವಿರಾಮದ ವೇಳೆ ಜೋರಾಗಿ ಮಳೆ ಸುರಿಯುತ್ತಿದ್ದುದರಿಂದ ಸ್ಥಳೀಯ ಅಬೂಬಕ್ಕರ್ ಎನ್ನುವರರು ತನ್ನ ಮನೆಯಂಗಳದಲ್ಲಿ ನಿಂತುಕೊಳ್ಳಲು ಯುವಕರಿಗೆ ಆಶ್ರಯ ಕಲ್ಪಿಸಿದರು. ಇದೇ ಸಂದರ್ಭ ಅಬೂಬಕ್ಕರ್ ಮನೆಮಂದಿ ಸೌದೆಯನ್ನು ಅಟ್ಟಕ್ಕೆ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭ ಜೇಸಿ ಸದಸ್ಯರು ಕಟ್ಟಿಗೆಯನ್ನು ಸಾಗಿಸಲು ನೆರವಾಗಿ ಕ್ಷಣಾರ್ಧದಲ್ಲಿ ಕಟ್ಟಿಗೆ ಮನೆ ಸೇರುವಂತಾಯಿತು.

See also  ಅರ್ಜುನ್ ಕಾಪಿಕಾಡ್ ನಾಯಕತ್ವದ ಕರಾವಳಿ ವಾರಿಯರ್ಸ್ ಗೆ ಸಿಪಿಎಲ್ ಟ್ರೋಫಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು