News Kannada
Friday, December 09 2022

ಕರಾವಳಿ

ಬಂಟ್ವಾಳ: ಕರ್ತವ್ಯ ನಿರತ ವೈದ್ಯ, ಸಿಬ್ಬಂದಿ ಮೇಲೆ ಹಲ್ಲೆ

Photo Credit :
ಬಂಟ್ವಾಳ: ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಹಿತ ಕರ್ತವ್ಯನಿರತ ಸಿಬ್ಬಂದಿ ಮೇಲೆ ಕೈಮಾಡಿ, ನಿಂದಿಸಿ, ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.
ಈ ಕುರಿತು ಬಂಟ್ವಾಳ ನಗರ ಪೊಲೀಸರಿಗೆ ನೀಡಿದ ದೂರಿನಂತೆ ಉಮ್ಮರ್ ಫಾರೂಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಈತನ ಪತ್ನಿ ಹೆರಿಗೆಗಾಗಿ ಒಳರೋಗಿಯಾಗಿ ದಾಖಲಾಗಿದ್ದ ಸಂದರ್ಭ ರಾತ್ರಿ ಸುಮಾರು 11ರ ವೇಳೆ ಹೆಂಡತಿಯನ್ನು ನೋಡಬೇಕು ಎಂದು ಸಿಬ್ಬಂದಿಯಲ್ಲಿ ಕೇಳಿದ ಸಂದರ್ಭ, ರಾತ್ರಿ ಸಮಯ ಮಹಿಳೆ ವಾರ್ಡ್ ಗೆ ಹೋಗಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರೂ ಆರೋಪಿ, ಕೈಯಿಂದ ದೂಡಿ ಒಳಗೆ ಹೋಗಿರುತ್ತಾನೆ.
ಬಳಿಕ ಸಿಬ್ಬಂದಿ ಕರ್ತವ್ಯ ನಿರತ ವೈದ್ಯರಿಗೆ ತಿಳಿಸಿದಾಗ ವೈದ್ಯರು ಬಂದು ರಾತ್ರಿ ಸಮಯದಲ್ಲಿ ಹೆರಿಗೆ ವಾರ್ಡ್ ಗೆ ಹೋಗಲು ಅವಕಾಶ ಇರುವುದಿಲ್ಲ ಎಂದು ಹೇಳಿದಾಗ ಆರೋಪಿ ನಿಂದಿಸಿ ದೂಡಿ ಬೆದರಿಕೆ ಹಾಕಿ ಹೋಗಿದ್ದಾಗಿ ಠಾಣೆಗೆ ನೀಡಿದ ದೂರಿನಲ್ಲಿ ಹೇಳಲಾಗಿದೆ.
See also  ಗೋ ಸಾಗಾಣೆ ಆರೋಪ: ಇಬ್ಬರ ಮೇಲೆ ಹಲ್ಲೆ, 150 ಜನರ ವಿರುದ್ಧ ಪ್ರತ್ಯೇಕ ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು