News Kannada
Thursday, December 08 2022

ಕರಾವಳಿ

ಹಳೆಮನೆ ಹೊಸತಾಯಿತು: ಬಡ ಕುಟುಂಬಕ್ಕೆ ಆಸರೆ ಒದಗಿಸಿದ ಸಂಘಟನೆಗಳು

Photo Credit :

ಬೆಳ್ತಂಗಡಿ: ತಾಲೂಕಿನ ಮುಂಡಾಜೆಯ ಕಡಂಬಳ್ಳಿ ಸಮೀಪ ಹಲವು ಸಂಘ ಸಂಸ್ಥೆ ಹಾಗೂ ದಾನಿಗಳ ಸಹಕಾರದಲ್ಲಿ ಸಂಪೂರ್ಣವಾಗಿ ನಿರ್ಮಾಣ ಗೊಂಡಿರುವ ಮನೆಯನ್ನು ಜು. 14ರಂದು ಹಸ್ತಾಂತರಿಸಲಾಗುವುದು.

ಗಣಪತಿ ಭಟ್ ದಂಪತಿಗಳು ವಾಸವಿದ್ದ ಮನೆಯು ಸಂಪೂರ್ಣ ಶಿಥಿಲಗೊಂಡು ಅಪಾಯದ ಪರಿಸ್ಥಿತಿಯಲ್ಲಿತ್ತು. ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ಬೆಳ್ತಂಗಡಿ ಘಟಕದ ಸದಸ್ಯರು,ಮಳೆಗಾಲ ಆರಂಭದ ಸಮಯ ಈ ಮನೆಗೆ ಟಾರ್ಪಾಲು ಹೊದಿಸಿ ತಾತ್ಕಾಲಿಕ ರಕ್ಷಣೆ ನೀಡಿದ್ದರು.

ಇಲ್ಲಿನ ಪರಿಸ್ಥಿತಿ ಅವಲೋಕಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ಮನೆಯನ್ನು ಮರುನಿರ್ಮಾಣ ಗೊಳಿಸುವ ಯೋಜನೆ ರೂಪಿಸಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ವಿವಿಧ ಬ್ರಾಹ್ಮಣ ಸಂಘಟನೆ ಹಾಗೂ ದಾನಿಗಳನ್ನು ಸಂಪರ್ಕಿಸಿ ಅವರಿಂದ ಧನಸಹಾಯ ಪಡೆದು ಒಂದು ತಿಂಗಳ ಹಿಂದೆ ಮನೆ ನಿರ್ಮಾಣಕ್ಕೆ ಆರಂಭಿಸಲಾಯಿತು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ,ಹಲವರ ತನು ಮನ ಧನ ಸಹಕಾರದಲ್ಲಿ ಇದೀಗ ಮನೆ ನಿರ್ಮಾಣಗೊಂಡಿದೆ.

ಹೊಸ ರೂಪ: ಹಳೆ ಮನೆಯನ್ನು ಸಂಪೂರ್ಣ ಕೆಡವಿ ಅದರ ಅಡಿಪಾಯವನ್ನು ಗಟ್ಟಿಗೊಳಿಸಿ,ಮನೆ ರಚಿಸಲಾಗಿದೆ. ಎರಡು ಹೆಚ್ಚಿನ ಕೋಣೆಗಳನ್ನು ಸೇರಿಸಲಾಗಿದೆ. ಮನೆಯ ವಿದ್ಯುತ್ ಸಂಪರ್ಕ, ಟ್ಯಾಂಕ್, ಪೈಪ್ ಲೈನ್, ಇತ್ಯಾದಿ ಅಗತ್ಯ ಅನುಕೂಲಗಳನ್ನು ಒಳಗೊಂಡಿದೆ. ಕಿಟಕಿ ಬಾಗಿಲು ದಾರಂದ ಸಹಿತ ಹಳೆಮನೆಯ ಎಲ್ಲಾ ಸಾಮಗ್ರಿಗಳು ಸಂಪೂರ್ಣ ನಿರುಪಯೋಗಿ ಯಾದುದರಿಂದ ಮನೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಬದಲಾಯಿಸಲಾಗಿದೆ.

ಸದ್ಯ ಮುಂಡಾಜೆಯ ಸಚಿನ್ ಭಿಡೆ ಅವರ ತೋಟದ ಮನೆಯಲ್ಲಿ ವಾಸವಾಗಿರುವ ದಂಪತಿಗಳು ಬುಧವಾರ 4.6 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಮನೆಯನ್ನು ಪ್ರವೇಶಿಸಲಿದ್ದಾರೆ.

See also  ನೂರಾರು ವರ್ಷಗಳ ಇತಿಹಾಸದ ಸರ್ಕಾರಿ ಆಸ್ಪತ್ರೆ ಇನ್ನು ಮುಂದೆ ನೆನಪು ಮಾತ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು