News Kannada
Saturday, November 26 2022

ಕರಾವಳಿ

ಮಂಜೇಶ್ವರ ಜ್ಯುವೆಲ್ಲರಿ ದರೋಡೆ ಪ್ರಕರಣ: ಪ್ರಮುಖ ಆರೋಪಿ ಬಂಧನ - 1 min read

Photo Credit :

ಕಾಸರಗೋಡು: ಮಂಜೇಶ್ವರ ಹೊಸಂಗಡಿ ರಾಜಧಾನಿ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಯನ್ನು ತನಿಖಾ ತಂಡ ಬಂಧಿಸಿದೆ.

ತೃಶ್ಯೂರು ಕೊಡಂಗಲ್ಲೂರಿನ ಸತ್ಯೇಶ್ ಕೆ .ಪಿ ಯಾನೆ ಕಿರಣ್ ( 35) ಬಂಧಿತ ಆರೋಪಿ .

ಈತನ ವಿರುದ್ಧ ಕೇರಳ , ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಜುಲೈ 26 ರಂದು ಮುಂಜಾನೆ ದರೋಡೆ ನಡೆದಿತ್ತು. ಏಳು ಮಂದಿಯ ತಂಡವು ಕಾವಲುಗಾರ ಅಬ್ದುಲ್ಲ ರನ್ನು ಥಳಿಸಿ ಬಳಿಕ ಕಟ್ಟಿ ಹಾಕಿ ಹದಿನೈದು ಕಿಲೋ ಬೆಳ್ಳಿಯ ಆಭರಣ, ನಾಲ್ಕೂವರೆ ಲಕ್ಷ ರೂ. ನಗದು ದರೋಡೆ ಮಾಡಿತ್ತು . ದರೋಡೆಗೆ ಬಂದಿದ್ದ ಇನ್ನೋವಾ ಕಾರು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು . ಈ ಕಾರಿನಿಂದ ಏಳು ಕಿಲೋ ಬೆಳ್ಳಿ ಆಭರಣ ಹಾಗೂ ಎರಡು ಲಕ್ಷ ರೂ. ಪತ್ತೆಯಾಗಿತ್ತು . ಉಳಿದ ಆಭರಣ ಹಾಗೂ ನಗದು ಸಹಿತ ದರೋಡೆಕೋರರು ಇನ್ನೊಂದು ಕಾರಿನಲ್ಲಿ ಪತ್ತೆಯಾಗಿದ್ದರು.

ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ವಿಶೇಷ ತಂಡ ತನಿಖೆ ನಡೆಸಿದ್ದು, ಪ್ರಮುಖ ಆರೋಪಿಯನ್ನು ಬಂಧಿಸುವ ಲ್ಲಿ ಯಶಸ್ವಿಯಾಗಿದ್ದು , ಉಳಿದ ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ಕ್ಲಿನಿಕ್‌ನಲ್ಲಿ 16 ವರ್ಷದ ಅಂಗವಿಕಲ ಬಾಲಕಿ ಮೇಲೆ ಅತ್ಯಾಚಾರ: ಮುಂಬೈ ಫಿಸಿಯೋಥೆರಪಿಸ್ಟ್ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು