ಮಂಗಳೂರು: ನಗರದ ಸಾರಿಗೆ ಬಸ್ ಹರಿದು ಸೆಕ್ಯುರಿಟಿ ಗಾರ್ಡ್ ಯ ಕಿಂಗ್ಸ್ ಮಾರ್ಬಲ್ ಸಮೀಪ ಸಾರಿಗೆ ಬಸ್ ಹರಿದು ಸೆಕ್ಯುರಿಟಿ ಗಾರ್ಡ್ ಮೃತಪಟ್ಟ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಚಂದ್ರ ನಾಯರ್ (70) ಮೃತರು. ಬುಧವಾರ ರಾತ್ರಿ ಚಂದ್ರ ನಾಯರ್ ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದರು.
ಕುಳಾಯಿಯ ಕಿಂಗ್ಸ್ ಮಾರ್ಬಲ್ ಸಮೀಪ ರಸ್ತೆ ದಾಟುವಾಗ ಬೈಕಂಪಾಡಿಯಿಂದ ಮೂಲ್ಕಿ ಕಡೆಗೆ ತೆರಳುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಚಂದ್ರ ನಾಯರ್ ಅವರಿಗೆ ಗಂಭೀರ ಗಾಯಗಳಾಗಿತ್ತು.
ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.